More

    ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

    ರಾಯಚೂರು: ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಐಕ್ಯತಾ ಯಾತ್ರೆ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಗಿಲ್ಲೆಸುಗೂರು ಹತ್ತಿರದ ತುಂಗಭದ್ರಾ ಸೇತುವೆ ಹತ್ತಿರ ಅದ್ದೂರಿಯಿಂದ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಅ.21ರ ಬೆಳಗ್ಗೆ 7.30ಕ್ಕೆ ಯಾತ್ರೆ ತುಂಗಭದ್ರಾ ಸೇತುವೆ ಮಾರ್ಗವಾಗಿ ಜಿಲ್ಲೆಗೆ ಆಗಮಿಸಲಿದೆ. ಗಿಲ್ಲೆಸುಗೂರಿನಲ್ಲಿ ಬೆಳಗ್ಗೆ 11ಕ್ಕೆ ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಉದ್ಯೋಗ ಖಾತ್ರಿ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಸೇರಿದವರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಸಂಜೆ 4ಕ್ಕೆ ಕೆರೆಬೂದುರು ಗ್ರಾಮಕ್ಕೆ ಆಗಮಿಸಲಿದ್ದು, ರಾತ್ರಿ 6.30ಕ್ಕೆ ಯರಗೇರಾಗೆ ಆಗಮಿಸಿ ವಾಲ್ಮೀಕಿ ವೃತ್ತದಲ್ಲಿ ಜನರನ್ನು ಉದ್ದೇಶಿ ಮಾತನಾಡಲಿದ್ದಾರೆ. ನಂತರ ರಂಗನಾಥ ದೇವಸ್ಥಾನದ ಆವರಣದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದರು.

    ಅ.22ರ ಬೆಳಗ್ಗೆ 6.30 ಪಾದಯಾತ್ರೆ ಆರಂಭವಾಗಿ ರಾಯಚೂರಿನ ಬೃಂದಾವನ ಹೋಟೆಲ್‌ನಲ್ಲಿ ರಾಹುಲ್ ಉಪಾಹಾರ ಸೇವಿಸಲಿದ್ದಾರೆ. ಸಂಜೆ 4ರವರೆಗೆ ವಿವಿಧ ಕ್ಷೇತ್ರದವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಂಜೆ 4ರಿಂದ ನಗರದಲ್ಲಿ ಪಾದಯಾತ್ರೆ ನಡೆಯಲಿದ್ದು, ಬಸವೇಶ್ವರ ವೃತ್ತದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಯರಮರಸ್‌ನ ಆನಂದ ಶಾಲೆ ಅವರಣದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅ.23ರ ಬೆಳಗ್ಗೆ 6.30ಕ್ಕೆ ಶಕ್ತಿನಗರ ಮಾರ್ಗವಾಗಿ ತೆಲಂಗಾಣಕ್ಕೆ ಪ್ರವೇಶ ಮಾಡಲಿದ್ದಾರೆ. ಬೆಳಗ್ಗೆ ಪಾದಯಾತ್ರೆಯಲ್ಲಿ 15 ಸಾವಿರ ಹಾಗೂ ಸಂಜೆ ಪಾದಯಾತ್ರೆಯಲ್ಲಿ 40 ಸಾವಿರವರೆಗೆ ಜನರು ಸೇರುವ ನಿರೀಕ್ಷೆಯಿದೆ ಎಂದರು.

    ಇತ್ತೀಚೆಗೆ ಗಿಲ್ಲೆಸುಗೂರಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಈ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾದ ಕೆರೆ ತುಂಬಿಸುವ ಯೋಜನೆ, ಚಿಕ್ಕಮಂಚಾಲಿ ಸೇತುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದುವರೆಗೂ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡದೆ ಕಾಲಹರಣ ಮಾಡಿ ಚುನಾವಣೆ ಹತ್ತಿರ ಇರುವಾಗ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts