More

    ಕೆರೆಯಲ್ಲಿನ ಮಣ್ಣು ತೆರವುಗೊಳಿಸಿ

    ರಾಯಚೂರು: ತಾಲೂಕಿನ ಅರಳಿಬೆಂಚಿ ಗ್ರಾಮದಲ್ಲಿನ ಅಲಾಯಿ ಕೆರೆಯಲ್ಲಿನ ಮಣ್ಣನ್ನು ತೆರವುಗೊಳಿಸುವ ಮೂಲಕ ಸಮರ್ಪಕ ನೀರು ಸಂಗ್ರಹಕ್ಕೆ ಕ್ರಮಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

    ಈ ಕುರಿತು ಸಮಿತಿ ನಿಯೋಗ ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸೀಫ್‌ಗೆ ಮಂಗಳವಾರ ಮನವಿ ಸಲ್ಲಿಸಿ, ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ನಡೆಸಲಾಗಿದ್ದು, ತೆಗೆದ ಹೂಳನ್ನು ತೆರವುಗೊಳಿಸದೆ ಕೆರೆಯಲ್ಲಿಯೇ ಬಿಡಲಾಗಿದೆ ಎಂದು ದೂರಿದರು.

    ಕೆರೆಯಿಂದ ಗ್ರಾಮದ 100ಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಬೇಸಿಗೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾದರೂ ತೆಗೆದ ಮಣ್ಣನ್ನು ಕೆರೆಯಲ್ಲಿಯೇ ಬಿಡಲಾಗಿದೆ. ಇದರಿಂದ ಕೆರೆಗೆ ನೀರು ಹರಿದು ಬಂದಲ್ಲಿ ಮಣ್ಣು ಪುನಃ ತಗ್ಗು ಪ್ರದೇಶದಲ್ಲಿ ಸೇರಲಿದೆ. ಇದರಿಂದಾಗಿ ಕೆರೆಯಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವುದಿಲ್ಲ. ಜತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಸಲಾದ ಕಾಮಗಾರಿಯೂ ಉಪಯೋಗವಿಲ್ಲದಂತಾಗಲಿದೆ. ಕೂಡಲೇ ಮಣ್ಣು ತೆಗೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಮಿತಿ ಜಿಲ್ಲಾ ಸಂಚಾಲಕ ಎಂ.ವಸಂತ ಕುಮಾರ, ಪದಾಧಿಕಾರಿಗಳಾದ ಪ್ರಸಾದ ಆಶಾಪುರ, ಯಲ್ಲಪ್ಪ ಅರಳಿಬೆಂಚಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts