More

    ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಲಿಂಗಸುಗೂರು ಬಂದ್

    ಲಿಂಗಸುಗೂರು: ರಾಯಚೂರಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಗುರುವಾರ ಕರೆ ನೀಡಿದ್ದ ಲಿಂಗಸುಗೂರು ಬಂದ್ ಕರೆಗೆ ಬಹುತೇಕರು ಸ್ಪಂದಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

    ಪಟ್ಟಣದ ಗುರುಭವನದಿಂದ ಪ್ರಗತಿ, ದಲಿತ, ಕನ್ನಡಪರ ಸಂಘಟನೆಗಳ ಒಕ್ಕೂಟದ ನೂರಾರು ಪ್ರತಿಭಟನಾಕಾರರು ತಪ್ಪಿಸ್ಥರ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರಲ್ಲದೇ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಎಸಿ ರಾಹುಲ್ ಸುಂಕನೂರಿಗೆ ಮನವಿ ಸಲ್ಲಿಸಿದರು.

    ಒಕ್ಕೂಟದ ಮುಖಂಡರಾದ ರಮೇಶ ಗೋಸ್ಲೆ, ಹುಲಗಪ್ಪ ಬ್ಯಾಗಿ, ಅಮ್ಜದ್ ಹಟ್ಟಿ, ಶಿವಪ್ಪ ಮಾಚನೂರು, ಪರಶುರಾಮ ನಗನೂರು, ಮಹಾದೇವಪ್ಪ ಪರಂಪುರ, ಜಿಲಾನಿಪಾಷಾ, ಖಾಲಿದ್ ಛಾವುಸ್, ಹಾಜಪ್ಪ ಕರಡಕಲ್, ರಮೇಶ ಸುಂಕದ, ಹನುಮಂತಪ್ಪ ವೆಂಕಟಾಪುರ, ಹುಲಗಪ್ಪ ಕೆಸರಟ್ಟಿ, ಲಾಲಪ್ಪ ರಾಠೋಡ್, ಭೀಮಣ್ಣ ಹಿರೇಮನಿ, ಮುದೆಪ್ಪ ಭಜಂತ್ರಿ, ಚಿನ್ನಪ್ಪ ಕಂದಳ್ಳಿ, ರಮೇಶ ವೀರಾಪುರ, ಹನುಮಂತ ಅಗ್ರಹಾರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿದ್ದರು.

    ಮುಚ್ಚಿದ್ದ ಅಂಗಡಿ, ಮುಂಗಟ್ಟುಗಳು
    ಲಿಂಗಸುಗೂರು ಬಂದ್ ಕರೆ ಹಿನ್ನಲೆಯಲ್ಲಿ, ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಸ್ಥಳೀಯ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಸಂಚಾರ ಎಂದಿನಂತಿತ್ತು. ಆಸ್ಪತ್ರೆ, ಔಷಧ ಅಂಗಡಿ, ಹಾಲು, ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸೇವೆ ಲಭ್ಯವಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts