More

    ಗತ್ತಿಗೆ ಭಾರತೀಯ ಸಂಸ್ಕೃತಿ ಪರಿಚಯ: ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ ಅನಿಸಿಕೆ

    ರಾಯಚೂರು: ಕಲೆಯ ಮೂಲಕ ಜಗತ್ತನ್ನು ವಿಸ್ಮಯಗೊಳಿಸಿದ ಅಮರಶಿಲ್ಪಿ ಜಕಣಾಚಾರಿ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಈ ಮೂಲಕ ಮಕ್ಕಳ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶ ಹೇಳಿದರು.

    ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿಶ್ವಕರ್ಮ ಸಮುದಾಯ ಪ್ರಗತಿಗೆ ಮುಂದಾಗಬೇಕು. ಪ್ರತಿಯೊಬ್ಬರೂ ಸ್ವಂತ ಪ್ರತಿಭೆ ಮೂಲಕ ಯಶಸ್ಸು ಸಾಧಿಸಬೇಕು ಎಂದರು. ಕಲೆಗೆ ರಾಜಮಹಾರಾಜರು ಹೆಚ್ಚಿನ ಮಹತ್ವ ನೀಡುತ್ತಿದ್ದರು. ಪ್ರತಿಭಾವಂತ ಕಲಾವಿದರನ್ನು ರಾಜ ಸನ್ಮಾನ ಮಾಡಲಾಗುತ್ತಿತ್ತು. ರಾಜಮಹಾರಾಜದ ಕಾಲದಲ್ಲೇ ಕಲೆಯ ಮೂಲಕ ಜಗತ್ತಿಗೆ ಭಾರತದ ಸಂಸ್ಕೃತಿಯನ್ನು ಅಮರಶಿಲ್ಪಿ ಜಕಣಾಚಾರಿ ಪರಿಚಯಿಸಿದ್ದರು ಎಂದು ಡಾ.ಕೆ.ಆರ್.ದುರಗೇಶ ಹೇಳಿದರು.

    ಶಿಕ್ಷಕ ಕೆ.ರಾಮು ಗಾಣಧಾಳ ಮಾತನಾಡಿ, ನಿರ್ಜೀವ ಮರ ಅಥವಾ ಲೋಹಗಳಿಗೆ ವಿಶ್ವಕರ್ಮ ಸಮುದಾಯ ರೂಪದೊಂದಿಗೆ ಮರುಜೀವ ನೀಡುತ್ತಿದೆ. ಈ ಮೂಲಕ ಪ್ರತಿಯೊಂದು ಲೋಹಕ್ಕೂ ಜೀವವಿದೆ ಎಂದು ತಿಳಿಸಿಕೊಡುತ್ತಿದ್ದಾರೆ ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶ್ವಕರ್ಮ ಸಮುದಾಯದವರನ್ನು ಗೌರವಿಸಲಾಯಿತು.

    ಮೆರವಣಿಗೆ: ನಗರದ ಶೆಟ್ಟಿಬಾವಿ ವೃತ್ತದಿಂದ ಕನ್ನಡ ಭವನದವರೆಗೆ ಜಕಣಾಚಾರಿ ಭಾವಚಿತ್ರದ ಮೆರವಣಿಗೆ ನಡೆಯಿತು. ಶಾಸಕ ಡಾ.ಶಿವರಾಜ್ ಪಾಟೀಲ್, ಮಾಜಿ ಶಾಸಕ ಎನ್.ಎಸ್.ಬೋಸರಾಜು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts