More

    ಹೋರಾಟಗಾರರಿಗೆ ಬಿಜೆಪಿ ಅವಮಾನ, ಸಿ.ಟಿ.ರವಿ ದೇಶದ್ರೋಹಿ: ಮಾಜಿ ಸಚಿವ ರಮಾನಾಥ ರೈ ಆಕ್ರೋಶ

    ಮಂಗಳೂರು: ದೇಶದ ಸ್ವಾತಂತ್ರೃ ಹೋರಾಟದಲ್ಲಿ ಪ್ರಧಾನ ಪಾತ್ರ ವಹಿಸಿದ ಜವಾಹರಲಾಲ್ ನೆಹರು ಅವರನ್ನು ಅವಮಾನಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೇಶದ್ರೋಹಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನೆಹರು ಕುಟುಂಬ ಸ್ವಾತಂತ್ರೃ ಹೋರಾಟಕ್ಕೆ ಸಾಕಷ್ಟು ತ್ಯಾಗ ಮಾಡಿದೆ. ಸ್ವಾತಂತ್ರೊೃೀತ್ಸವ ಅಮೃತ ಮಹೋತ್ಸವ ಸಂದರ್ಭ ಸ್ವಾತಂತ್ರೃ ಹೋರಾಟಗಾರರನ್ನು ಬಿಜೆಪಿ ಅವಮಾನಿಸುತ್ತಿರುವುದು ಅಕ್ಷಮ್ಯ. ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಬಿಜೆಪಿಯವರು ಗಾಂಧೀಜಿಯವರನ್ನೂ ಬಿಟ್ಟಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಂಧೀಜಿಯನ್ನು ಹೊಗಳುವ ಬಿಜೆಪಿ ಮುಖಂಡರು ಇಲ್ಲಿ ಗೋಡ್ಸೆಯನ್ನು ದೇಶಪ್ರೇಮಿ ಎನ್ನುತ್ತಾರೆ. ಇತಿಹಾಸ ಜ್ಞಾನ ಇಲ್ಲದ, ಉತ್ತಮ ಸಾಮಾಜಿಕ ಹಿನ್ನೆಲೆ ಇಲ್ಲದ, ಲೂಸ್ ಟಾಕ್ ಮಾಡುವ ಸಿ.ಟಿ.ರವಿ, ಈಶ್ವರಪ್ಪ ಅವರಂಥ ನಾಯಕರಿಗೆ ಬಿಜೆಪಿ ಮನ್ನಣೆ ನೀಡುತ್ತಿರುವುದನ್ನು ಸಮಾಜ ಖಂಡಿಸಬೇಕು ಎಂದು ಅಭಿಪ್ರಾಯಪಟ್ಟರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಪಿ.ವಿ.ಮೋಹನ್, ಶಶಿಧರ ಹೆಗ್ಡೆ, ಲುಕ್ಮಾನ್ ಬಂಟ್ವಾಳ್, ಸದಾಶಿವ ಉಳ್ಳಾಲ್, ಪ್ರಕಾಶ್ ಸಾಲಿಯಾನ್, ನವೀನ್ ಡಿಸೋಜ, ಎಸ್.ಅಪ್ಪಿ, ಪ್ರತಿಭಾ ಕುಳಾಯಿ ಸುದ್ದಿಗೋಷ್ಠಿಯಲ್ಲಿದ್ದರು.

    ಕಬಕ ಘಟನೆಗೆ ಸರ್ಕಾರ ಹೊಣೆ: ಸ್ವಾತಂತ್ರೊೃೀತ್ಸವ ಆಚರಣೆ ಸಂದರ್ಭ ಭಾನುವಾರ ಕಬಕದಲ್ಲಿ ನಡೆದಿರುವ ಘಟನೆಗೆ ಸರ್ಕಾರ, ಜಿಲ್ಲಾಡಳಿತ ಮತ್ತು ಮತೀಯ ಸಂಘಟನೆಗಳು ಪೂರ್ಣ ಹೊಣೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ರೈ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts