More

    ಮುಸ್ಟೂರು ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    ಮುಸ್ಟೂರು : ಭಾರತಾಂಬೆ ನಿನ್ನ ಜನುಮದಿನ.. ಭಾರತೀಯರು ಶೌರ್ಯ ಮೆರೆದ ದಿನ…ಅರ್ಥಪೂರ್ಣ ಗೀತೆಯು ಅಲ್ಲಿ ಸ್ವಾತಂತ್ರೊೃತ್ಸವ ಸಂಭ್ರಮ ಇಮ್ಮಡಿಗೊಳಿಸಿತು.
     ಜಗಳೂರು ತಾಲೂಕಿನ ಮುಸ್ಟೂರು ಗ್ರಾಪಂ ಮುಂಭಾಗ ಹಮ್ಮಿಕೊಂಡಿದ್ದ ಸ್ವಾತಂತ್ರೊೃತ್ಸವ ಕಾರ್ಯಮದಲ್ಲಿ ಶಾಲಾ ವಿದ್ಯಾರ್ಥಿಗಳ ಕೋಲಾಟ ಮೊದಲಾದ ನೃತ್ಯ ಪ್ರದರ್ಶನ ನೆರೆದ ಜನರನ್ನು ರೋಮಾಂಚನಗೊಳಿಸಿದವು.
     ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಅಂಗನವಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸ್ವಾಮಿ ವಿವೇಕಾನಂದ ಕಾನ್ವೆಂಟ್, ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ ಮುಗಿಲು ಮುಟ್ಟಿತ್ತು.
     ಗ್ರಾಮದಲ್ಲಿ ಒಂದು ಹಬ್ಬದಂತೆ ನಡೆದ ಸ್ವಾತಂತ್ರೊೃತ್ಸವದಲ್ಲಿ ಜನರು ಅತ್ಯುತ್ಸಾಹದಿಂದ ಭಾಗವಹಿಸಿ ನೃತ್ಯ ಪ್ರದರ್ಶನ ವೀಕ್ಷಿಸಿದರಲ್ಲದೆ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಮೂಲಕ ಹುರಿದುಂಬಿಸಿದರು.
     ಓಂಕಾರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ವೈ.ಎಂ. ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಆಶಾ ಸತೀಶ್, ಗ್ರಾಪಂ ಪಿಡಿಒ ಜಯ್ಯಪ್ಪ, ಗೌರಮ್ಮ ಪರಮೇಶ್ವರಪ್ಪ, ಸಾಕಮ್ಮ ಮುಸ್ಟೂರಪ್ಪ, ಅನಿತ ಮಂಜಣ್ಣ, ಸಿದ್ದೇಶ, ಕಾಲೇಜು ಪ್ರಾಂಶುಪಾಲ ಭೀಮಭೋವಿ, ಉಪ ಪ್ರಾಂಶುಪಾಲ ಟಿ.ಎ.ದಿವಾಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts