More

    ರಾಹುಲ್ ಅಪ್ರಬುದ್ಧತೆಯಿಂದ ಒಕ್ಕೂಟ ಛಿದ್ರ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಐಎನ್​ಡಿಐಎ ಒಕ್ಕೂಟ ಛಿದ್ರವಾಗುತ್ತಿರುವುದರಲ್ಲಿ ಬಿಜೆಪಿಯ ಷಡ್ಯಂತ್ರ ಏನಿಲ್ಲ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಪ್ರಬುದ್ಧತೆಯಿಂದ ಬೇಸತ್ತು ಒಕ್ಕೂಟದಿಂದ ಒಬ್ಬೊಬ್ಬರೇ ಬೇರ್ಪಟ್ಟು ಹೋಗುತ್ತಿದ್ದಾರೆ. ರಾಹುಲ್ ಗಾಂಧಿ ನಂಬಿ ಯಾರೂ ಒಕ್ಕೂಟದಲ್ಲಿ ಇರಲು ಬಯಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಒಂದು ಅವಕಾಶವಾದಿಗಳ ಕೂಟ ಎಂದು ನಾನು ಆರಂಭದಲ್ಲೇ ಹೇಳಿದ್ದೆ. ಪಶ್ಚಿಮ ಬಂಗಾರದಲ್ಲಿ ಮಮತಾ ಬ್ಯಾನರ್ಜಿಯಿಂದ ನಿಜವಾಗಿಯೂ ತೊಂದರೆ ಅನುಭವಿಸುತ್ತಿರುವವರು ನಾವು. ಅವರ ಅನಾಚಾರದಿಂದ ಬಿಜೆಪಿ ಕಾರ್ಯಕರ್ತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಿರುವಾಗ ಮಮತಾ ಐಎನ್​ಡಿಐಎ ಒಕ್ಕೂಟ ಬಿಟ್ಟು ಹೊರ ಬರಲು ನಾವೇಕೆ ಷಡ್ಯಂತ್ರ ಮಾಡೋಣ ಎಂದರು.

    ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಆದರೆ, ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಬಿಜೆಪಿ ರಾಜ್ಯ ಘಟಕ ಮತ್ತು ಜೆಡಿಎಸ್ ರಾಜ್ಯ ಘಟಕದೊಂದಿಗೆ ಇಷ್ಟರಲ್ಲೇ ಹೈಕಮಾಂಡ್ ಮಾತುಕತೆ ನಡೆಸಲಿದೆ. ಬಳಿಕವೇ ಟಿಕೆಟ್ ಹಂಚಿಕೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts