More

    ನ್ಯಾಷನಲ್​​ ಹೆರಾಲ್ಡ್​ ಪ್ರಕರಣ: ಮೂರನೇ ದಿನದ ವಿಚಾರಣೆಗೆ ಹಾಜರಾದ ರಾಹುಲ್​ ಗಾಂಧಿ

    ನವದೆಹಲಿ: ನ್ಯಾಷನಲ್​​ ಹೆರಾಲ್ಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ ನೀಡಿರುವ ಹಿನ್ನೆಲೆಯಲ್ಲಿ​ ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ಮೂರನೇ ದಿನದ ವಿಚಾರಣೆ ಎದುರಿಸಲು ಇಂದು ಬೆಳಗ್ಗೆ 11.50ರ ಸುಮಾರಿಗೆ ದೆಹಲಿಯಲ್ಲಿರುವ ಇ.ಡಿ. ಹೆಡ್ ಕ್ವಾರ್ಟರ್ಸ್​ಗೆ ಆಗಮಿಸಿದರು.

    ಇಡಿ ಕಚೇರಿಗೆ ರಾಹುಲ್​ ಆಗಮಿಸುವ ಮುನ್ನ ದೆಹಲಿಯ ಕಾಂಗ್ರೆಸ್ ಕಚೇರಿಯ ಮುಂದೆ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ಹೈಡ್ರಾಮ ನಡೆಯಿತು. ಕೆಲವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಕಳೆದ ಎರಡು ದಿನಗಳಿಂದಲೂ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

    ರಾಹುಲ್​ ಗಾಂಧಿ ಈಗಾಗಲೇ ಎರಡು ದಿನಗಳ ಕಾಲ ಸುಮಾರು 20 ಗಂಟೆ ವಿಚಾರಣೆ ಎದುರಿಸಿದ್ದಾರೆ. ನಿನ್ನೆ ಬೆಳಗ್ಗೆ 11.05ಕ್ಕೆ ಸಹೋದರಿ ಪ್ರಿಯಾಂಕಾ ಗಾಂಧಿ ಜತೆ ಇಡಿ ಕಚೇರಿಗೆ ಆಗಮಿಸಿದ ರಾಹುಲ್​ ಗಾಂಧಿ, ರಾತ್ರಿ 9.30ರವರೆಗೂ ವಿಚಾರಣೆ ಎದುರಿಸಿದರು. ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಸುಮಾರು 11.30ರ ಸಮಯದಲ್ಲಿ ರಾಹುಲ್​ ಗಾಂಧಿ ಇಡಿ ಕಚೇರಿಯಿಂದ ಹೊರಬಂದರು. ಮೂಲಗಳ ಪ್ರಕಾರ ರಾಹುಲ್​ ಅವರಿಗೆ ಇಡಿ ಸುಮಾರು 20 ಪ್ರಶ್ನೆಗಳನ್ನು ಕೇಳಿದೆ ಎಂದು ಹೇಳಲಾಗಿದೆ.

    ಇನ್ನೊಂದೆಡೆ ಇಡಿ ನಡೆಯನ್ನು ವಿರೋಧಿಸಿ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರಿಯಲಿದೆ. ಎಲ್ಲಿಯವರೆಗೆ ಇಡಿ ರಾಹುಲ್​ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತದೆಯೋ ಅಲ್ಲಿಯವರೆಗೂ ಕಾಂಗ್ರೆಸ್​ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​ ಹೇಳಿದ್ದಾರೆ.

    ಜೂ.19ರಂದು ರಾಹುಲ್ ಗಾಂಧಿಯ 52ನೇ ಜನ್ಮದಿನಾಚರಣೆ ಇರಲಿದ್ದು, ಹುಟ್ಟಿದ ಹಬ್ಬದ ಸಂಭ್ರಮವನ್ನೂ ಇ.ಡಿ. ಮಸಕು ಮಾಡುವುದೇ ಎಂಬ ಆತಂಕ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡತೊಡಗಿದೆ. ಅಲ್ಲದೆ, ಕಾಂಗ್ರೆಸ್​ ಪ್ರತಿಭಟನೆಯು ಮುಂದುವರಿದಿದೆ. (ಏಜೆನ್ಸೀಸ್​)

    ಇಡಿಯಿಂದ ರಾಹುಲ್​ ಗಾಂಧಿ ಬಂಧನವಾಗುತ್ತಾ? ಛತ್ತೀಸ್​ಗಢ ಮುಖ್ಯಮಂತ್ರಿ ಕೊಟ್ಟ ಸ್ಫೋಟಕ ಉತ್ತರ ಹೀಗಿದೆ…

    ಬಾತ್​ರೂಮ್​ ಕಿಟಕಿಯಲ್ಲಿ ವ್ಯಕ್ತಿಯ ನೆರಳು ಕಂಡು ಮಹಿಳೆ ಶಾಕ್​: ರಾಜಕೀಯ ನಾಯಕನ ಮುಖವಾಡ ಬಯಲು

    ಮತ್ತೊಂದು ದಾಖಲೆ ಬರೆದ ಚಿನ್ನದ ಹುಡುಗ ನೀರಜ್​ ಜೋಪ್ರಾ: ಫಿನ್‌ಲ್ಯಾಂಡ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts