More

    ರೈತರ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡುತ್ತಿದೆ ಮೋದಿ ಸರ್ಕಾರ: ರಾಹುಲ್​ ಗಾಂಧಿ ಟ್ವೀಟ್​

    ನವದೆಹಲಿ: ಕರೊನಾ ಸೋಂಕು ನಿಯಂತ್ರಣ, ಚೀನಾ ಗಡಿ ಬಿಕ್ಕಟ್ಟು ಸೇರಿ ಹಲವು ವಿಷಯಗಳಲ್ಲಿ ರಾಹುಲ್​ ಗಾಂಧಿಯವರು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಲೇಬಂದಿದ್ದಾರೆ.

    ಹಾಗೇ ಇಂದು 2 ಪ್ರಮುಖ ಕೃಷಿ ಮಸೂದೆಗಳು ಪಾಸ್​ ಆಗುತ್ತಿದ್ದಂತೆ ಮತ್ತೊಮ್ಮೆ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ರೈತರ ವಿರುದ್ಧ ಡೆತ್​ ವಾರೆಂಟ್​ ಹೊರಡಿಸಿದ್ದು, ಇದು ಪ್ರಜಾಪ್ರಭುತ್ವಕ್ಕೇ ಅವಮಾನ ಎಂದು ಹೇಳಿದ್ದಾರೆ. ರೈತರು ತಮ್ಮ ಕೃಷಿ ಕ್ಷೇತ್ರದಲ್ಲಿ ಬಂಗಾರವನ್ನು ಬೆಳೆಯುತ್ತಾರೆ. ಆದರೆ ಮೋದಿ ಸರ್ಕಾರ ರೈತರು ರಕ್ತ ಕಣ್ಣೀರು ಸುರಿಸುವಂತೆ ಮಾಡುತ್ತಿದೆ ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕರೊನಾ ಟೆಸ್ಟಿಂಗ್​ ಟಾರ್ಗೆಟ್​ ತಲುಪಲು ಈ ವೈದ್ಯ ಮಾಡಿದ್ದೇನು ಗೊತ್ತಾ? ಇದೊಂದು ಶಾಕಿಂಗ್​ ಘಟನೆ

    ‘ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020’ಹಾಗೂ ‘ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿಯ ಒಪ್ಪಂದ ಮತ್ತು ಕೃಷಿ ಸೇವಾ ಮಸೂದೆ-2020’ ಈ ಎರಡೂ ಮಸೂದೆಗಳು ಕೃಷಿ ವಿರೋಧಿಯಾಗಿವೆ. ಕೃಷಿ ಕ್ಷೇತ್ರಕ್ಕೆ ಕಪ್ಪುಚುಕ್ಕೆಯಂತೆ ಎಂದು ಹೇಳಿದ್ದ ರಾಹುಲ್​ ಗಾಂಧಿ ಇದೀಗ ಮತ್ತೆ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. ಮೋದಿ ಸರ್ಕಾರ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸುತ್ತಿದೆ ಎಂದೂ ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಕೃಷಿ ಮಸೂದೆಗಳು ಅನುಮೋದನೆಗೊಂಡ ಬೆನ್ನಲ್ಲೇ ಪ್ರಧಾನಿಯಿಂದ ಭರವಸೆ; ಎಂಎಸ್​ಪಿಗೆ ಇಲ್ಲ ನಿರ್ಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts