More

    ರಾಹುಲ್​ ಗಾಂಧಿ ಒಪ್ಪದೆ ಇದ್ದರೆ ಬೇರೆಯವರನ್ನು ಕಾಂಗ್ರೆಸ್​ ಅಧ್ಯಕ್ಷರನ್ನಾಗಿ ಮಾಡಬೇಕು…: ಶಶಿ ತರೂರ್​

    ನವದೆಹಲಿ: ರಾಹುಲ್​ ಗಾಂಧಿಯವರು ಕಾಂಗ್ರೆಸ್​ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸೋನಿಯಾ ಗಾಂಧಿಯವರೇ ಮಧ್ಯಂತರ ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ. ಅವರ ಅವಧಿ ಆಗಸ್ಟ್​ನಲ್ಲಿ ಮುಕ್ತಾಯವಾಗಲಿದ್ದು, ಈಗಾಗಲೇ ಪಕ್ಷದ ಹಲವು ನಾಯಕರು ಮತ್ತೊಮ್ಮೆ ರಾಹುಲ್​ ಗಾಂಧಿಯೇ ಅಧ್ಯಕ್ಷರಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದೀಗ ಕಾಂಗ್ರೆಸ್​ ಸಂಸದ ಶಶಿ ತರೂರ್​ ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ.

    ಪಕ್ಷಕ್ಕೆ ಶೀಘ್ರವಾಗಿ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಬೇಕು. ಕಾಂಗ್ರೆಸ್​ ಸಿದ್ಧಾಂತ ರಹಿತ, ನೆಲೆಯಿಲ್ಲದ ಪಕ್ಷ. ಅಸಮರ್ಥ ಪ್ರತಿಪಕ್ಷ ಎಂದೇ ಅನೇಕರು ಗ್ರಹಿಸುತ್ತಿದ್ದಾರೆ. ಮಾಧ್ಯಮಗಳೂ ಇದೇ ಆಯಾಮದಲ್ಲಿ ಸುದ್ದಿ, ವಿಶ್ಲೇಷಣೆಗಳು ಬಿತ್ತರವಾಗುತ್ತಿವೆ. ಪಕ್ಷ ಇದರಿಂದ ಹೊರಬರಬೇಕು, ಜನರಲ್ಲಿ ನಂಬಿಕೆ ಹುಟ್ಟಿಸಬೇಕು ಎಂದರೆ ಕೂಡಲೇ ಪೂರ್ಣಾವಧಿಯ ಅಧ್ಯಕ್ಷನ ನೇಮಕವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.

    ರಾಹುಲ್​ ಗಾಂಧಿಯವರಿಗೆ ಖಂಡಿತ ಪಕ್ಷವನ್ನು ಮುನ್ನಡೆಸುವ ಕೆಚ್ಚು, ಸಾಮರ್ಥ್ಯ ಇದೆ. ಹಾಗಾಗಿ ಮತ್ತೊಮ್ಮೆ ಅವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಏರಲು ಒಲವು ತೋರಿಸಬೇಕು ಎಂದು ಶಶಿ ತರೂರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಇದೀಗ ಮತ್ತೊಮ್ಮೆ ಸೋನಿಯಾ ಗಾಂಧಿಯವರೇ ಮಧ್ಯಂತರ ಅವಧಿಗೆ ಪಕ್ಷದ ಅಧ್ಯಕ್ಷೆಯಾಗಬೇಕು. ಎಲ್ಲ ಹೊರೆ ಹೊರಬೇಕು ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದ ಮೇಲ್ಛಾವಣಿ; ಓರ್ವ ಬಾಲಕ ಸಾವು, ಮೂವರಿಗೆ ಗಂಭೀರ ಗಾಯ

    ಈ ಬಾರಿ ರಾಹುಲ್​ ಗಾಂಧಿಯವರೇನಾದರೂ ಅಧ್ಯಕ್ಷನಾಗಲು ಒಪ್ಪದೆ ಇದ್ದರೆ, ಬೇರೆ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್​ ಗಂಭೀರವಾಗಿ ಯೋಚಿಸಬೇಕು ಮತ್ತು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ರಾಹುಲ್​ ಗಾಂಧಿಯವರು ಕಳೆದ ಲೋಸಕಭಾ ಚುನಾವಣೆಯ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ನಂತರ ಸೋನಿಯಾ ಗಾಂಧಿಯವರು ಅನಿರ್ಧಿಷ್ಟಾವಧಿಗೆ ಅಧ್ಯಕ್ಷೆಯಾಗಿದ್ದರು. ನಾಳೆ ಆಗಸ್ಟ್​ 10ರಂದು ಈ ಅವಧಿ ಮುಕ್ತಾಯಗೊಳ್ಳಲಾಗಿದೆ. (ಏಜೆನ್ಸೀಸ್​)

    ಸುಶಾಂತ್​ ಸಹೋದರಿಯ ಎಫ್​ಡಿಯಿಂದ 2.63 ಕೋಟಿ ರೂ. ಸಿಎಗೆ ವರ್ಗಾವಣೆ, ಇಡಿ ವಿಚಾರಣೆಯಲ್ಲಿ ಬಾಯ್ಬಿಟ್ಟ ರಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts