More

    ಗಡ್ಡ, ಮೀಸೆ ಟ್ರಿಮ್; ಹೊಸ ಲುಕ್​ನೊಂದಿಗೆ ಕೇಂಬ್ರಿಡ್ಜ್ ವಿವಿಯಲ್ಲಿ ರಾಹುಲ್ ಗಾಂಧಿ ಉಪನ್ಯಾಸ

    ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಬುಧವಾರ ಬ್ರಿಟನ್‌ಗೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಬ್ರಿಟನ್​ಗೆ ತೆರಳುವ ಮುನ್ನ ತಮ್ಮ ಲುಕ್​ನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ತಮ್ಮ ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದಾರೆ.

    ಉಪನ್ಯಾಸ ನೀಡಲು ತೆರಳುತ್ತಿದ್ದಂತೆ ರಾಹುಲ್ ಗಾಂಧಿ ಲುಕ್ ಬದಲಾಗಿದೆ. ಟೀ-ಶರ್ಟ್ ಕಳಚಿಟ್ಟು ಕೋಟು, ಟೈ ಧರಿಸಿ ಮಿಂಚುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಕೊನೆಗೊಳ್ಳುವವರೆಗೆ ತಮ್ಮ ಗಡ್ಡ ಟ್ರಿಮ್ ಮಾಡಿಸಿಕೊಂಡಿರಲಿಲ್ಲ. ಈ ಲುಕ್ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿತ್ತು ಮತ್ತು ಟ್ರೋಲ್​ಗೂ ಒಳಗಾಗಿತ್ತು. ಇದೀಗ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ತೆಳಿರುವ ರಾಹುಲ್, ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಸದ್ಯ ರಾಹುಲ್ ಗಾಂಧಿಯ ಹೊಸ ಲುಕ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ, ಸದ್ದಾಂ ಹುಸೇನ್‌ನಂತೆ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದರು. ಈ ಟೀಕೆಗೆ ತಿರುಗೇಟು ನೀಡಿದ್ದ ಕಾಂಗ್ರೆಸ್ ನಿಮ್ಮ ನಾಯಕ ಮೋದಿ ಗಡ್ಡ ಬಿಟ್ಟಿದ್ದಾಗ ನಾವು ಏನೂ ಹೇಳಿರಲಿಲ್ಲ ಎಂದು ಹೇಳಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts