More

    ಸಂಸತ್​ ಸ್ಥಾನದಿಂದ ರಾಹುಲ್​ ಅನರ್ಹ; ರಾಜಕೀಯವಾಗಿ-ಕಾನೂನಾತ್ಮಕವಾಗಿ ಹೋರಾಡ್ತೀವಿ ಎಂದ ಕಾಂಗ್ರೆಸ್​​

    ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನ ಲೋಕಸಭೆ ಸದಸ್ಯತ್ವದಿಂದ ವಜಾ ಮಾಡಿರುವ ಬೆನ್ನಲ್ಲೇ ರಾಜಕೀಯವಾಗಿ-ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಎಐಸಿಸಿ ಪ್ರತಿಕ್ರಿಯಿಸಿದೆ.

    ಈ ಕುರಿತು ಟ್ವೀಟ್​ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಅದಾನಿ ಸಮೂಹ ಸಂಸ್ಥೆಗಳ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ(JPC) ತನಿಖೆಯ ಬದಲಿಗೆ ರಾಹುಲ್​ ಗಾಂಧಿ ಅವರನ್ನ ಅನರ್ಹಗೊಳಿಸಲಾಗಿದೆ. ಈ ರೀತಿಯ ಕ್ರಮಗಳಿಂದ ವಿರೋಧ ಪಕ್ಷಗಳ ಧ್ವನಿಯನ್ನ ಹತ್ತಿಕ್ಕಲು ಸಾಧ್ಯವಿಲ್ಲ ಇದನ್ನ ನಾವು ರಾಜಕೀಯವಾಗಿ-ಕಾನೂನಾತ್ಮಕವಾಗಿ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

    ಸಂಸತ್​​ ಸದಸ್ಯತ್ವದಿಂದ ರಾಹುಲ್​ ಗಾಂಧಿ ಅವರನ್ನ ಅನರ್ಹಗೊಳಿಸಿರುವ ಕುರಿತು ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್​ ಕೇಂದ್ರ ಸರ್ಕಾರದ ಈ ಕ್ರಮದಿಂದ ತಾವು ದಿಗ್ಭ್ರಮೆಗೊಂಡಿರುವುದಾಗಿ ಹೇಳಿದ್ದಾರೆ. ಈ ರೀತಿಯ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಟ್ವೀಟ್​ ಮಾಡಿ ಕಿಡಿಕಾರಿದ್ದಾರೆ.

    ಇದನ್ನು ಓದಿ: ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಪಕ್ಷಗಳ ನಾಯಕರು ಪೊಲೀಸ್​ ವಶಕ್ಕೆ

    ಇದನ್ನು ಓದಿ: SC-ST ಮೀಸಲಾತಿ ವಿಳಂಬ ಖಂಡಿಸಿ ಕಾಂಗ್ರೆಸ್​​ ನಾಯಕರಿಂದ ರಾಜಭವನ ಚಲೋ; ಪೊಲೀಸ್​​ ವಶಕ್ಕೆ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts