More

    ಭಾರತದ ಯುವ ಕ್ರಿಕೆಟಿಗರಿಗೆ ರಾಹುಲ್ ದ್ರಾವಿಡ್ ಮತ್ತೊಮ್ಮೆ ಮಾರ್ಗದರ್ಶನ

    ನವದೆಹಲಿ: ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಶಿಖರ್ ಧವನ್ ಸಾರಥ್ಯದ ಭಾರತ ತಂಡಕ್ಕೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಖಚಿತಪಡಿಸಿದ್ದಾರೆ. ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಹಾಗೂ ಆತಿಥೇಯ ಶ್ರೀಲಂಕಾ ತಂಡಗಳ ನಡುವೆ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ವಿರುದ್ಧದ ಸರಣಿಗೆ ರಾಹುಲ್ ದ್ರಾವಿಡ್ ಕೋಚ್ ಆಗಿರಲಿದ್ದಾರೆ ಎಂದು ಷಾ ಹೇಳಿದ್ದಾರೆ. ಇದರೊಂದಿಗೆ ಲಂಕಾ ಪ್ರವಾಸದಲ್ಲಿ ಭಾರತ ತಂಡದ ಕೋಚ್ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಷಾ ತೆರೆಎಳೆದಿದ್ದಾರೆ.

    ಇದನ್ನೂ ಓದಿ: ಟೀಂ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ಸ್ಫೋಟಿಸಿದ ರಿಷಭ್​ ಪಂತ್​,

    ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡದೊಂದಿಗೆ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಇರುವುದರಿಂದ, ಲಂಕಾ ಪ್ರವಾಸದ ಎರಡನೇ ಸ್ತರದ ತಂಡಕ್ಕೆ ನೂತನ ಕೋಚ್ ಅಗತ್ಯವಿತ್ತು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರೂ ಆಗಿರುವ ರಾಹುಲ್ ದ್ರಾವಿಡ್ ಎದುರು ಈ ಹುದ್ದೆಗೆ ಬಲವಾಗಿ ಕೇಳಿಬಂದಿತ್ತು. ಭಾರತ ತಂಡಕ್ಕೆ ರಾಹುಲ್ 2ನೇ ಬಾರಿಗೆ ತರಬೇತಿ ನೀಡಲಿದ್ದಾರೆ.

    ಇದನ್ನೂ ಓದಿ: ಕರ್ನಾಟಕದ ಮನೀಷ್ ಪಾಂಡೆ ಲಂಕಾ ಪ್ರವಾಸಕ್ಕೆ ನಾಯಕನಾಗಬೇಕಿತ್ತು ಎಂದ ಭಾರತ ತಂಡದ ಮಾಜಿ ವೇಗಿ,

    ರಾಹುಲ್ ದ್ರಾವಿಡ್, ಇದಕ್ಕೂ ಮೊದಲು 2014ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ತೆರಳಿದ್ದರು. ಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತದ ಆಟಗಾರರು ಸೋಮವಾರ ಮುಂಬೈಗೆ ಆಗಮಿಸಿದ್ದು, ಆರಂಭಿಕ 7 ದಿನಗಳ ಕಾಲ ಕಠಿಣ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಬಳಿಕ 7 ದಿನ ಕ್ವಾರಂಟೈನ್ ಜತೆಗೆ ಒಳಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಕ್ವಾರಂಟೈನ್ ಮುಕ್ತಾಯಗೊಂಡ ಬಳಿಕ ಜೂನ್ 28 ರಂದು ಲಂಕಾಗೆ ತೆರಳಲಿದ್ದಾರೆ. ಭಾರತ ತಂಡ ಲಂಕಾದಲ್ಲಿಯೂ ಜುಲೈ 3ರವರೆಗೂ ಕಠಿಣ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಜುಲೈ 4 ರಿಂದ ಅಭ್ಯಾಸ ಆರಂಭಿಸಲಿದೆ. ಜುಲೈ 13 ರಿಂದ ನಿಗದಿತ ಓವರ್‌ಗಳ ಸರಣಿ ಆರಂಭವಾಗಲಿದೆ.

    ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕಿಲ್ಲ ಕನ್ನಡಿಗರು ; 15ರ ಬಳಗದಲ್ಲೂ ಕೆಎಲ್ ರಾಹುಲ್, ಮಯಾಂಕ್‌ಗೆ ಸ್ಥಾನವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts