More

    ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಯಲಿದ್ದಾರೆ ದ್ರಾವಿಡ್; ಬಿಸಿಸಿಐ ಮಹತ್ವದ ನಿರ್ಧಾರ

    ನವದೆಹಲಿ: 2023ರ ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಬದಲಾಗುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎದುರಾಗಿತ್ತು. ಈ ಕುರಿತಾಗಿ ಬಿಸಿಸಿಐ ಇದೀಗ ಉತ್ತರ ನೀಡಿದೆ

    ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಹುಲ್ ದ್ರಾವಿಡ್  ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.

    ವಿಶ್ವಕಪ್ ಫೈನಲ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿತ್ತು. ಅಂದಿನಿಂದ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಲಾಗುತ್ತದೆ ಎಂಬ ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ಇದೀಗ ಈ ಹಿಂದೆ ಕೋಚ್​ ಆಗಿದ್ದ ರಾಹುಲ್​  ದ್ರಾವಿಡ್​ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

    ಭಾರತ ಡಿಸೆಂಬರ್ 10 ರಿಂದ ಮೂರು T20I ಮತ್ತು ಮೂರು ODI ಪಂದ್ಯಗಳನ್ನು ಆಡಲಿದೆ, ನಂತರ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಡಿಸೆಂಬರ್ 10 ರಿಂದ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗಲಿದೆ. ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ 5 ಪಂದ್ಯಗಳ ಟಿ20 ಸರಣಿಗಾಗಿ ಭಾರತಕ್ಕೆ ಆಗಮಿಸಲಿರುವ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಸ್ವಾಗತಿಸಲು ರಾಹುಲ್ ದ್ರಾವಿಡ್ ಸಿದ್ಧವಾಗಬೇಕಿದೆ. ದ್ರಾವಿಡ್ ಅದೇ ರೀತಿಯ ಸಹಾಯಕ ಕೋಚ್‌ಗಳೊಂದಿಗೆ ಮುಂದುವರಿಯಲಿದ್ದಾರೆ. ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್, ಪಾರಸ್ ಮಾಂಬ್ರೆ ಬೌಲಿಂಗ್ ಕೋಚ್ ಮತ್ತು ಟಿ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ.

    ಟೀಮ್​ ಇಂಡಿಯಾಗೆ ದ್ರಾವಿಡ್​ ಕೊಡುಗೆಯನ್ನು ಎಂದೂ ಮರೆಯುವಂತಿಲ್ಲ. ಶುಭಮಾನ್​ ಗಿಲ್ಲ, ಇಶಾನ್​ ಕಿಶಾನ್​, ಶ್ರೇಯಸ್​ ಅಯ್ಯರ್ ಮತ್ತು ಮೊಹಮ್ಮದ್​ ಸಿರಾಜ್​ ಎಲ್ಲರೂ ದ್ರಾವಿಡ್​ ಗರಡಿಯಲ್ಲಿ ತಯಾರಾದ ಹುಡುಗರು ಮತ್ತು ಭವಿಷ್ಯದ ಟೀಮ್​ ಇಂಡಿಯಾ ಸ್ಟಾರ್​ಗಳು.​ ದ್ರಾವಿಡ್​ ಅವರ ತರಬೇತಿ ಅಡಿಯಲ್ಲಿ ಅಂಡರ್​ 19 ವಿಶ್ವಕಪ್, ಭಾರತ ಎ ತಂಡಗಳಿಗೆ ಪ್ರವೇಶ ಪಡೆದ​ ಎಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ರಿಷಭ್​ ಪಂತ್​, ಸರ್ಫರಾಜ್​ ಖಾನ್​, ವಾಸಿಂಗ್ಟನ್​ ಸುಂದನ್​, ಆವೇಶ್​ ಖಾನ್​ ಒಳಗೊಂಡ ಇಶಾನ್​ ಕಿಶಾನ್​ ನೇತೃತ್ವದ ಅಂಡರ್​ 19 ತಂಡಕ್ಕೂ ದ್ರಾವಿಡ್​ ಕೋಚ್​ ಆಗಿದ್ದರು. 2016ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ಸೋಲುಂಡಿತು. ಇದಾದ ಎರಡು ವರ್ಷಗಳ ಬಳಿಕ ಫೃಥ್ವಿ ಶಾ ನೇತೃತ್ವದಲ್ಲಿ ನ್ಯೂಜಿಲೆಂಡ್​ನಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ವಿಶ್ವಕಪ್​ ಗೆದ್ದಿತು. ದ್ರಾವಿಡ್‌ ಅವರ ಏಕೈಕ ಗುರಿಯು ಬಲಿಷ್ಠ ಭಾರತ ತಂಡದ ನಿರ್ಮಾಣವಾಗಿತ್ತು. ವಯಸ್ಸಿನ ವಂಚನೆಯು ಭಾರತೀಯ ಕ್ರಿಕೆಟ್ ಅನ್ನು ಕಾಡುತ್ತಿರುವ ದೊಡ್ಡ ಕಾಯಿಲೆ ಎಂದು ಗುರುತಿಸಿದ ನಂತರ ಕೇವಲ ಒಂದು ಅಂಡರ್-19 ವಿಶ್ವಕಪ್‌ನಲ್ಲಿ ಮಾತ್ರ ಆಟಗಾರ ಆಡಬಹುದು ಎಂಬ ನಿಯಮವನ್ನು 19 ವರ್ಷದೊಳಗಿನವರ ತರಬೇತುದಾರರಾಗಿ ದ್ರಾವಿಡ್​ ಮಾಡಿದರು.

    ಅಂಡರ್​ 19 ತಂಡದ ಬಳಿಕ ಟೀಮ್​ ಇಂಡಿಯಾದ ಮುಖ್ಯ ತಂಡದ ಕೋಚ್​ ಆಗಿ ಆಯ್ಕೆಯಾದ ರಾಹುಲ್​ ಸಾಕಷ್ಟು ಸುಧಾರಣೆಯನ್ನು ತಂದರು. ಪ್ರಸಕ್ತ ಟೂರ್ನಿಯಲ್ಲಿ ಆಡಿದ 10 ಲೀಗ್​ ಪಂದ್ಯಗಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್​ಗೆ ಬಂದ ಭಾರತ ಕೊನೆಯಲ್ಲಿ ಮುಗ್ಗರಿಸಿತು. ಆದರೆ, ಅಲ್ಲಿಯವರೆಗೆ ಭಾರತ ಅಂದರೆ, ಎಲ್ಲರು ಭಯ ಬೀಳುತ್ತಿದ್ದರು. ಅಷ್ಟರ ಮಟ್ಟಿಗೆ ಟೀಮ್​ ಇಂಡಿಯಾ ಪ್ರದರ್ಶನ ನೀಡಿತ್ತು. ಇದಕ್ಕೆ ಮುಖ್ಯ ಕಾರಣಮ ದ್ರಾವಿಡ್​ ಅವರು ಎಂದು ಸ್ವತಃ ರೋಹಿತ್​ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬೇಕು. ಏಕೆಂದರೆ, ಪ್ರತಿಯೊಬ್ಬ ಆಟಗಾರನಿಗೂ ತಮ್ಮದೇಯಾದ ಆಟ ಆಡಲು ದ್ರಾವಿಡ್​ ಅವರು ಸ್ವತಂತ್ರ ನೀಡಿದ್ದರು. ಆದರೆ, ಫೈನಲ್​ ಫಲಿತಾಂಶ ಏನೇ ಇರಬಹುದು ರಾಹುಲ್​ ಅವರ ಪಾತ್ರವನ್ನು ಮಾತ್ರ ಎಂದೂ ಮರೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts