More

    ಸೋಮವಾರ ಪೊಲೀಸರ ಎದುರು ಹಾಜರಾಗ್ತೀನಿ: ರಾಗಿಣಿ ಫಸ್ಟ್​ ರಿಯಾಕ್ಷನ್​

    ಡ್ರಗ್ಸ್​ ವಿಷಯವಾಗಿ ವಿಚಾರಣೆ ನಡೆಸುವುದಕ್ಕೆ ಸಿಸಿಬಿ ಪೊಲೀಸರು, ಸ್ಯಾಂಡಲ್​ವುಡ್​ ನಟಿ ರಾಗಿಣಿಗೆ ಗುರುವಾರ ಬೆಳಿಗ್ಗೆ 10.30ಕ್ಕೆ ಹಾಜರಾಗುವುದಕ್ಕೆ ಸಮನ್ಸ್​ ಕಳಿಸಿದ್ದರು. ಆದರೆ, ರಾಗಿಣಿ ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಿರಲಿಲ್ಲ.

    ಇದನ್ನೂ ಓದಿ: ರಾಗಿಣಿ ಆಪ್ತ ರವಿಶಂಕರ್​ ಸಿಸಿಬಿ ಬಲೆಗೆ ಹೇಗೆ ಬಿದ್ದ!

    ಇದೀಗ ರಾಗಿಣಿ, ಟ್ವೀಟ್​ ಮೂಲಕ ತಾವು ಏಕೆ ವಿಚಾರಣೆಗೆ ಹಾಜರಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸೋಮವಾರ (ಸೆಪ್ಟೆಂಬರ್​ 7) ಖಂಡಿತವಾಗಿಯೂ ಹಾಜರಾಗುವುದಾಗಿ ಹೇಳಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು. ‘ನನಗೆ ಸಮನ್ಸ್​​ ಸಿಕ್ಕಿದ್ದು ಶಾರ್ಟ್​ ನೋಟೀಸ್​ನಲ್ಲಾದ್ದರಿಂದ ನಾನು ಇಂದು ಸಿಸಿಬಿ ಪೊಲೀಸರೆದುರು ಹಾಜರಾಗುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ನಮ್ಮ ಕಾನೂನಿನ ಮೇಲೆ ಗೌರವ ಇರುವುದರಿಂದ, ನನ್ನ ಪರವಾಗಿ ನನ್ನ ವಕೀಲರು ಹಾಜರಾಗಿದ್ದಾರೆ. ನಾನು ಯಾಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ ಎಂಬುದನ್ನು ಪೊಲೀಸರಿಗೆ ಮನವಿ ಮಾಡಿಕೊಟ್ಟಿದ್ದಾರೆ’ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ನಟಿ ಶರ್ಮಿಳಾ ಮಾಂಡ್ರೆಗೆ ಕರೊನಾ ಪಾಸಿಟಿವ್​!

    ಪೊಲೀಸರೆದುರು ಹಾಜರಾಗುವುದಕ್ಕೆ ಒಂದಿಷ್ಟು ಕಾಲಮಿತಿಯನ್ನು ಪಡೆದುಕೊಂಡಿರುವ ಅವರು, ಮುಂದಿನ ಸೋಮವಾರದಂದು ತಪ್ಪದೇ ಹಾಜರಾಗುವುದಾಗಿ ಈ ಟ್ವೀಟ್​ ಮೂಲಕ ತಿಳಿಸಿದ್ದಾರೆ. ‘ಒಬ್ಬ ಪ್ರಜೆಯಾಗಿ ಪೊಲೀಸರು ಕರೆದಾಗ ಹಾಜರಾಗಿ, ವಿಚಾರಣೆ ಹೇಳಿಕೆ ನೀಡುವುದು ನನ್ನ ಕರ್ತವ್ಯ. ಬಚ್ಚಿಟ್ಟುಕೊಳ್ಳುವುದಕ್ಕೆ ನನ್ನಲ್ಲಿ ಏನೂ ಇಲ್ಲ ಮತ್ತು ಯಾವುದೇ ಅಕ್ರಮ ಚಟುವಟಿಕೆಗಳಲ್ಲೂ ನಾನು ಭಾಗಿಯಾಗಿಲ್ಲ. ಹಾಗಾಗಿ ಮುಂದಿನ ಸೋಮವಾರ ಪೊಲೀಸರ ಎದುರು ಹಾಜರಾಗುತ್ತೇನೆ’ ಎಂದು ರಾಗಿಣಿ ತಿಳಿಸಿದ್ದಾರೆ.

    ನಾನು ಬಚ್ಚಿಟ್ಟುಕೊಳ್ಳೋಕೆ ದಾವೂದ್​ ಅಥವಾ ಲಾಡೆನ್​​ ಅಲ್ಲ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts