More

    ಗೋ ಆಧರಿತ ಕೃಷಿ ಸಮಸ್ಯೆಗಳಿಗೆ ಉತ್ತರ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

    ವಿಟ್ಲ: ಗೋ ಆಧರಿತ ಕೃಷಿ ಇಂದಿನ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಉತ್ತರ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
    ಮಠದ ಸಂಶೋಧನಾ ಖಂಡ, ಭಾರತೀಯ ಗೋ ಪರಿವಾರ ಮತ್ತು ಗೋಫಲ ಟ್ರಸ್ಟ್ ಆಯೋಜಿಸಿದ್ದ ಸಾವಯವ ಕೃಷಿಯಲ್ಲಿ ಸಸ್ಯ ಸಂರಕ್ಷಣೆ ಮತ್ತು ಪಂಚಗವ್ಯದ ಪಾತ್ರ ಎಂಬ ಗೋ ಆಧರಿತ ಕೃಷಿ ವೆಬಿನಾರ್ ಸರಣಿಯಲ್ಲಿ ಶ್ರೀಗಳು ಮಾತನಾಡಿದರು.

    ಹಸಿರುಕ್ರಾಂತಿ ಹೆಸರಿನಲ್ಲಿ ಎತ್ತುಗಳ ಬದಲು ಯಂತ್ರ, ಗೊಬ್ಬರದ ಬದಲು ರಸಗೊಬ್ಬರ ಬಳಕೆ ಗೋಸಂಕುಲ ನಾಶಕ್ಕೆ ಮತ್ತಷ್ಟು ಒತ್ತು ನೀಡಿತು. ಸಸ್ಯ, ಮನುಷ್ಯ ಹಾಗೂ ಗೋವಿಗೆ ಅವಿನಾಭಾವ ಸಂಬಂಧವಿದೆ. ಪಂಚಗವ್ಯ ಮನುಷ್ಯರಿಗೆ ಮಾತ್ರವಲ್ಲ, ಗಿಡಮರಗಳಿಗೂ ಉಪಯುಕ್ತ. ಇದರಿಂದ ಭೂಮಿಯ ಸಾರಸಂರಕ್ಷಣೆ ಮಾಡಬಹುದು. ಮಣ್ಣಿನ ಆರೋಗ್ಯಕ್ಕೆ ಬೇಕಾದ ಕೋಟ್ಯಂತರ ಸೂಕ್ಷ್ಮಾಣುಜೀವಿಗಳ ವೃದ್ಧಿಗೆ ಪಂಚಗವ್ಯ ಸಹಕಾರಿ ಎಂದರು.
    ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಎಸ್.ಎ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಮಣ್ಣು ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪ್ರಕಾಶ್ ದಿಕ್ಸೂಚಿ ಭಾಷಣ ಮಾಡಿದರು. ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ, ರೈತ ವಿಜ್ಞಾನಿ ವಿ.ಎ.ಬಣಗಿ ಉಪಸ್ಥಿತರಿದ್ದರು. ಡಾ.ಗುರುರಾಜ ಪಡೀಲ್ ಸ್ವಾಗತಿಸಿ, ನಂದಿನಿ ವಂದಿಸಿದರು. ಆತ್ಮಿಕಾ ಕಾರ್ಯಕ್ರಮ ನಿರೂಪಿಸಿದರು. ಮಧು ಗೋಮತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ತಂಜಾವೂರಿನ ಸಮೃದ್ಧ ಭತ್ತದ ಬೆಳೆಗೆ ಗೋ ಆಧರಿತ ಕೃಷಿಯೇ ಕಾರಣ ಎನ್ನುವುದನ್ನು ಕಂಡುಕೊಂಡ ಬ್ರಿಟಿಷರು, ಭಾರತೀಯ ಗೋವಂಶ ನಾಶವಾಗದೆ ಭಾರತದ ಕೃಷಿ ಕ್ಷೇತ್ರವನ್ನು ಬರಿದುಗೊಳಿಸಲಾಗದು ಎಂಬ ನಿರ್ಧಾರಕ್ಕೆ ಬಂದರು. ಕಸಾಯಿಖಾನೆ ಆರಂಭಿಸಿ ಭಾರತೀಯ ಗೋವಂಶದ ನಾಶಕ್ಕೆ ನಾಂದಿ ಹಾಡಿದರು.
    ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಶ್ರೀರಾಮಚಂದ್ರಾಪುರ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts