More

    ಲಾಕ್​ಡೌನ್​: ಕೇವಲ 10 ಜನರ ನಡುವೆ ಸರಳ ವಿವಾಹವಾದ ಅಂತಾರಾಷ್ಟ್ರೀಯ ಕುಸ್ತಿಪಟು!

    ಧಾರವಾಡ: ಕರೊನಾ ಸೋಂಕು ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕುಸ್ತಿಪಟು ಧಾರವಾಡದ ರಫಿಕ್​ ಹೊಳಿಯವರು ಇಂದು ಸರಳ ವಿವಾಹವಾಗಿದ್ದಾರೆ.

    ತಂದೆ-ತಾಯಿ ಸೇರಿದಂತೆ ಕೇವಲ ಐದು ಜನರೊಂದಿಗೆ ತೆರಳಿ ಚಿತ್ರದುರ್ಗದ ಹಿನಾ ಕೌಸರ್ ಜತೆ ಹತ್ತು ಜನರ ನಡುವೆ ರಫಿಕ್​ ವಿವಾಹವಾಗಿದ್ದಾರೆ. ಮದುವೆ ಮೊದಲೇ ನಿಶ್ಚಯವಾಗಿದ್ದರಿಂದ ಮುಂದೂಡಲು ಸಾಧ್ಯವಾಗದೇ ಲಾಕ್​ಡೌನ್​ ನಡುವೆ ತಮ್ಮ ಜವಾಬ್ದಾರಿಯನ್ನು ಅರಿತು ಸಾಮಾಜಿಕ ಅಂತರ ಕಾಯ್ದುಕೊಂಡು ನಿಖಾ ಮಾಡಿಕೊಂಡಿದ್ದಾರೆ.

    ರಫಿಕ್, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಇವರ ವಿವಾಹದಲ್ಲಿ ನೂರಕ್ಕೂ ಹೆಚ್ಚು ಕ್ರೀಡಾ ಸೆಲೆಬ್ರಿಟಿಗಳು ಭಾಗವಹಿಸಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಅದು ಸಾಧ್ಯವಾಗದೇ ಇರುವುದರಿಂದ. ಆರೋಗ್ಯ ಬಿಕ್ಕಟ್ಟು ಮುಗಿದು, ಲಾಕ್​ಡೌನ್​ ತೆರವಾದ ಬಳಿಕ ಅದ್ಧೂರಿ ರಿಸೆಪ್ಷನ್ ಮಾಡಲು‌ ನಿರ್ಧಾರ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸೋನಿಯಾ ಗಾಂಧಿಗೆ ಅವಹೇಳನ ಆರೋಪ: ಪತ್ರಕರ್ತ ಅರ್ನಬ್​ ಗೋಸ್ವಾಮಿ ವಿರುದ್ಧ ದೇಶದ ಹಲವೆಡೆ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts