More

    ನಿಮ್ಮನ್ನ ಸ್ಕ್ರೀನ್​ ಮೇಲೆ ನೋಡೋದು ಯಾವಾಗ? ಈ ಪ್ರಶ್ನೆಗೆ ಏನಂದ್ರು ರಾಧಿಕಾ?

    ಬರೀ ಯಶ್​ ಅಷ್ಟೇ ಅಲ್ಲ, ರಾಧಿಕಾ ಪಂಡಿತ್​ ಪಾಲಿಗೂ ಇಂದು ವಿಶೇಷವಾದ ದಿನ. ಏಕೆಂದರೆ, ಯಶ್​ ಅವರಂತೆ ರಾಧಿಕಾಗೂ ‘ಮೊಗ್ಗಿನ ಮನಸ್ಸು’ ಮೊದಲ ಚಿತ್ರ. ಇಂದಿಗೆ ಚಿತ್ರ ಬಿಡುಗಡೆಯಾದ 12 ವರ್ಷ ಆದ ಹಿನ್ನೆಲೆಯಲ್ಲಿ, ರಾಧಿಕಾ ಸಹ ಚಿತ್ರರಂಗಕ್ಕೆ ಬಂದು 12 ವರ್ಷಗಳಾಗಿವೆ.

    ಹಾಗೆ ನೋಡಿದರೆ, ರಾಧಿಕಾ ಪಂಡಿತ್, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇನ್ನೂ ಜಾಸ್ತಿ ವರ್ಷಗಳಾಗಿವೆ. ‘ಶಿಷ್ಯ’ ದೀಪಕ್​ ಅಭಿನಯದ ’18ನೇ ಕ್ರಾಸ್​’ ಎಂಬ ಚಿತ್ರದ ಮೂಲಕ ರಾಧಿಕಾ ಪಂಡಿತ್​, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿತ್ರದ ಮುಹೂರ್ತ ಜೋರಾಗಿ ನಡೆಯಿತಾದರೂ, ಚಿತ್ರೀಕರಣ ಕಾರಣಾಂತರಗಳಿಂದ ತಡವಾಗುತ್ತಾ ಹೋಯಿತು.

    ಇದನ್ನೂ ಓದಿ: ಐ ಆಮ್​ ಇನ್​ ಲವ್​ … ಯಾರ ಜತೆಗೆ ಅಂತ ಕೇಳಬೇಡಿ!

    ಈ ಮಧ್ಯೆ, ಶಶಾಂಕ್​ ನಿರ್ದೇಶನದ ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು ರಾಧಿಕಾ ಪಂಡಿತ್​. ‘ಮುಂಗಾರು ಮಳೆ’ ನಿರ್ಮಿಸಿದ್ದ ಇ.ಕೃಷ್ಣಪ್ಪ ನಿರ್ಮಾಣದ ಈ ಚಿತ್ರವು ರಾಧಿಕಾಗೆ ಬ್ರೇಕ್​ ನೀಡಿದ್ದಷ್ಟೇ ಅಲ್ಲ, ಚಿತ್ರರಂಗದಲ್ಲಿ ಬೇಡಿಕೆಯನ್ನೂ ಹೆಚ್ಚಿಸಿತು. ಇದೀಗ ಆ ಚಿತ್ರ 12 ವರ್ಷಗಳನ್ನು ಪೂರೈಸಿದೆ.

    ಯಶ್​ ಹೀರೋ ಆಗಿ 12 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳು ಕಾಮನ್​ ಡಿಸ್​ಪ್ಲೇ ಪಿಕ್ಚರ್​ ಮಾಡಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ರಾಧಿಕಾ ಪಂಡಿತ್​ ಅಭಿಮಾನಿಗಳು ಸಹ, ರಾಧಿಕಾ ಅಭಿನಯದ ಕೆಲವು ಪ್ರಮುಖ ಚಿತ್ರಗಳ ಫೋಟೋಗಳನ್ನಿಟ್ಟುಕೊಂಡು ಒಂದು ಸಿಡಿಪಿ ಮಾಡಿದ್ದಾರೆ. ಇಂದು ಸೋಷಿಯಲ್​ ಮೀಡಿಯಾದಲ್ಲಿ, ಆ ಸಿಡಿಪಿ ಸಾಕಷ್ಟು ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ವಿಚಾರಣೆಗೆ ಹಾಜರಾದ ಆದಿತ್ಯ ಚೋಪ್ರಾ

    ಇನ್ನು, ರಾಧಿಕಾ ಪಂಡಿತ್​ ಇಂದು ಬೆಳಿಗ್ಗೆ ಇನ್​ಸ್ಟಾಗ್ರಾಂನಲ್ಲೊಂದು ಫೋಟೋ ಶೇರ್​ ಮಾಡಿಕೊಂಡಿದ್ದರು. ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಕಮೆಂಟ್ ಮಾಡಲು ಶುರು ಮಾಡಿದರು. ಈ ಪೈಕಿ ಅಭಿಮಾನಿಯೊಬ್ಬರು, ‘ಹೇಗಿದ್ದೀರಾ ರಾಧಿಕಾ? ನಾವು ನಿಮ್ಮನ್ನು ಮತ್ತೆ ಪರದೆ ಮೇಲೆ ನೋಡುವುದು ಯಾವಾಗ..? ಆದಷ್ಟು ಬೇಗ ಬನ್ನಿ’ ಎಂದು ಹೇಳಿದ್ದರು. ಇದಕ್ಕೆ ರಾಧಿಕಾ, ‘ಖಂಡಿತ’ ಎಂದು ಒಂದೇ ಪದದಲ್ಲಿ ಉತ್ತರಿಸಿದರು.

    ಹಾಗಾದರೆ, ರಾಧಿಕಾ ಪಂಡಿತ್​ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಯಾವಾಗ? ಸದ್ಯಕ್ಕಂತೂ ಅಂತಹ ಲಕ್ಷಣ ಕಾಣುತ್ತಿಲ್ಲ. ಎರಡು ಮಕ್ಕಳ ಜವಾಬ್ದಾರಿ ಇರುವುದರಿಂದ, ಅವರ ಪಾಲನೆ-ಪೋಷಣೆಗಳನ್ನು ನೋಡಿಕೊಳ್ಳಬೇಕಿರುವುದರಿಂದ, ಸದ್ಯಕ್ಕಂತೂ ರಾಧಿಕಾ ಪಂಡಿತ್​ ಬಣ್ಣ ಹಚ್ಚುವಂತೆ ಕಾಣುತ್ತಿಲ್ಲ. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅಥವಾ ಇನ್ನೊಂದೈದು ವರ್ಷಗಳ ನಂತರ ಅವರು ಮತ್ತೆ ಬಣ್ಣ ಹಚ್ಚಬಹುದೇನೋ? ಸದ್ಯಕ್ಕಂತೂ ಈ ಪ್ರಶ್ನೆಗೆ ಉತ್ತರವಿಲ್ಲ.

    ಶುರುವಾಯಿತು ಕಪಿಲ್​ ಶರ್ಮ ಶೋ ಶೂಟಿಂಗ್​ … ಹೊಸ ಎಪಿಸೋಡ್​ಗಳ ಪ್ರಸಾರ ಯಾವಾಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts