More

    ಸೆನ್ಸಾರ್ ಅನುಮತಿ ಕೊಟ್ಟರೂ, ಸ್ವಯಂಪ್ರೇರಿತವಾಗಿ 21 ಕಟ್ ಮಾಡಿದ `ರಾಧೆ’ ಚಿತ್ರತಂಡ

    ಮುಂಬೈ: ಸಲ್ಮಾನ್ ಖಾನ್ ಅಭಿನಯದ `ರಾಧೇ’ ಚಿತ್ರವು ಮೇ ೧೩ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಜೀ೫ ಮತ್ತು ಜೀಪ್ಲೆಕ್ಸ್ ಓಟಿಟಿಗಳಲ್ಲಿ ಬಿಡುಗಡೆಯಾಗುವುದರ ಜತೆಗೆ, ಡಿಶ್, ಡಿ೨ಎಚ್, ಟಾಟಾ ಸ್ಕೆöÊ, ಏರ್‌ಟೆಲ್ ಡಿಜಿಟಲ್ ಟಿವಿ ಮುಂತಾದ ಡಿಟಿಎಚ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

    ಇದನ್ನೂ ಓದಿ: ಫ್ರಾನ್ಸ್​​ನಿಂದ ಆಮ್ಲಜನಕ ಪ್ಲಾಂಟ್ ತರಿಸಲು ಸೋನು ಸೂದ್ ತಯಾರಿ

    ಇತ್ತೀಚೆಗಷ್ಟೇ ಚಿತ್ರವು ಸೆನ್ಸಾರ್ ಆಗಿದ್ದು, `ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಚಿತ್ರವು ಒಂದು ಗಂಟೆ ೫೪ ನಿಮಿಷಗಳ ಅವಧಿಯದ್ದಾಗಿದ್ದು, ಈ ಚಿತ್ರವು ಸಲ್ಮಾನ್ ಖಾನ್ ಅವರ ಇದುವರೆಗಿನ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಅವಧಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸ್ವಾರಸ್ಯಕರ ವಿಷಯವೆಂದರೆ, ಸೆನ್ಸಾರ್​ ಮಂಡಳಿಯು ಯಾವುದೇ ಕಟ್​ಗಳಿಲ್ಲದೆ `ಯು/ಎ’ ಪ್ರಮಾಣಪತ್ರ ಕೊಟ್ಟಿದ್ದರೂ, ಚಿತ್ರತಂಡದವರೇ ಸ್ವಯಂಪ್ರೇರಿತರಾಗಿ 21 ಕಟ್​ಗಳನ್ನು ಮಾಡಿರುವುದು ವಿಶೇಷ. ಅದಕ್ಕೆ ಕಾರಣವೂ ಇದೆ. ಚಿತ್ರವೂ ನೇರವಾಗಿ ಓಟಿಟಿ ಮತ್ತು ಡಿಟಿಎಚ್​ಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಮತ್ತು ಫ್ಯಾಮಿಲಿ ಆಡಿಯನ್ಸ್​ ನೋಡುತ್ತಿರುವುದರಿಂದ, ಆಕ್ಷನ್​ ಮತ್ತು ಕ್ರೌರ್ಯ ಇರುವ ದೃಶ್ಯಗಳನ್ನು ಚಿತ್ರತಂಡದವರೇ ಸ್ವಯಂಪ್ರೇರಿತರಾಗಿ ತೆಗೆದು ಹಾಕಿದ್ದಾರಂತೆ.

    ಇದಲ್ಲದೆ, ಪ್ರಮುಖುವಾಗಿ, ಮಕ್ಕಳು ಡ್ರಗ್ಸ್​ ತೆಗೆದುಕೊಳ್ಳುತ್ತಿರುವ ಒಂದೆರೆಡು ಶಾಟ್​ಗಳು ಚಿತ್ರದಲ್ಲಿದ್ದು, ಅದನ್ನು ನೋಡಿದವರಿಗೆ ಕಿರಿಕಿರಯಾಗಬಾರದು ಎಂಬ ಕಾರಣಕ್ಕೆ, ಅಂತಹ ದೃಶ್ಯಗಳನ್ನೆಲ್ಲಾ ಚಿತ್ರತಂಡದವರೇ ಯಾರ ಅಭಿಪ್ರಾಯಕ್ಕೂ ಕಾಯದೇ ಕಿತ್ತು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಆಸ್ಪತ್ರೆಗೆ ಸೆಟ್ ಪ್ರಾಪರ್ಟಿ ದಾನ ಮಾಡಿದ ರಾಧೇ ಶ್ಯಾಮ್ ತಂಡ

    `ರಾಧೆ’ ಚಿತ್ರದಲ್ಲಿ ಸಲ್ಮಾನ್, ದಿಶಾ, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ನಟಿಸಿದ್ದು, ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಫಿಲಂಸ್ ಬ್ಯಾನರ್‌ನಡಿ, ಈ ಚಿತ್ರವನ್ನು ಅವ ಸಹೋದರ ಸೊಹೈಲ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.

    ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts