More

    ಚಿತ್ರಮಂದಿರಗಳಲ್ಲಿ ವಾರಾಂತ್ಯಕ್ಕೆ ಸಲ್ಮಾನ್ ಖಾನ್​ ಸಿನಿಮಾ ಗಳಿಕೆ ಇಷ್ಟೇನಾ?; 3 ದಿನದಲ್ಲಿ ಕೇವಲ 216 ಟಿಕೆಟ್ ಮಾರಾಟ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾ ಜೀ ಫ್ಲೆಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿ ಒಳ್ಳೆಯ ಓಪನಿಂಗ್ ಸಿಕ್ಕಿತಾದರೂ, ಸಲ್ಮಾನ್ ಕರಿಯರ್​ನಲ್ಲಿಯೇ ತುಂಬ ಕೆಟ್ಟದಾದ ಸಿನಿಮಾ ಎಂಬಂಥ ರೀತಿಯ ಕಮೆಂಟ್​ಗಳು ಚಿತ್ರಕ್ಕೆ ಬಂದವು. ಅದಾದ ಬಳಿಕ ಮಹಾರಾಷ್ಟ್ರದ ಎರಡು ಚಿತ್ರಮಂದಿರಗಳಲ್ಲಿಯೇ ಸಿನಿಮಾ ತೆರೆಕಂಡಿತಾದರೂ, ಅಲ್ಲಿಯೂ ಕಲೆಕ್ಷನ್​ ಅಷ್ಟಕಷ್ಟೇ!

    ಇದನ್ನೂ ಓದಿ: ಅಕ್ರಮ ಸಂಬಂಧದ ಗುಟ್ಟು ಪತಿ ಬಿಚ್ಚಿಡುತ್ತಲೇ ಶಿಲ್ಪಾ ಶೆಟ್ಟಿಯಿಂದ ಕುತೂಹಲದ ಪೋಸ್ಟ್‌- ಕೆಲವೇ ಗಂಟೆಗಳಲ್ಲಿ ಡಿಲೀಟ್‌

    ಹೌದು, ಸಲ್ಮಾನ್ ಖಾನ್ ಸಿನಿಮಾ ಅಂದರೆ, ಗಳಿಕೆ ಲೆಕ್ಕಾಚಾರವೇ ಕೋಟಿ ಕೋಟಿ. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿಲ್ಲ. ಕೋವಿಡ್ ನಿಧಾನಕ್ಕೆ ಹತೋಟಿಗೆ ಬರುತ್ತಿದ್ದಂತೆ, ಮಹಾರಾಷ್ಟ್ರದಲ್ಲಿನ ಎರಡು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಹಾಗೆ ಬಿಡುಗಡೆ ಆದ ರಾಧೆ ಚಿತ್ರ ವಾರಾಂತ್ಯದಲ್ಲಿ ಗಳಿಸಿದ್ದೆಷ್ಟು ಗೊತ್ತೆ? ಕೇವಲ 17,792 ರೂಪಾಯಿ!

    ಜೂನ್​ನಲ್ಲಿ 11ರಂದು ಎಂಜಾಯ್ ಡ್ರೈವ್ ಇನ್ ಸಿನಿಮಾ ಮತ್ತು ಅಪ್ಸರಾ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. 12ರಂದು ಕೇವಲ 62 ಟಿಕೆಟ್​ಗಳು ಮಾರಾಟವಾದರೆ, ರಾತ್ರಿ 9.30ರ ಶೋ ಪ್ರೇಕ್ಷಕರಿಲ್ಲದೆ ರದ್ದಾಗಿತ್ತು. ಅಪ್ಸರಾದಲ್ಲಿ 4 ಶೋ ಸೇರಿ 22 ಟಿಕೆಟ್ ಸೋಲ್ಡ್ ಆಗಿದ್ದವು. ಹೀಗೆ ಒಟ್ಟಾರೆ ವಾರಾಂತ್ಯದಲ್ಲಿ ಈ ಎರಡು ಚಿತ್ರಮಂದಿರಗಳಿಂದ 216 ಟಿಕೆಟ್ ಮಾರಾ​ಟವಾಗಿ, 17792 ರೂ ಮಾತ್ರ ಗಳಿಸಿತ್ತು.

    ಇದನ್ನೂ ಓದಿ: ನಾವಿಬ್ಬರೂ 8 ವರ್ಷದ ರೂಂಮೇಟ್ಸ್: ಸಂಚಾರಿ ವಿಜಯ್ ಜತೆಗಿನ ಸ್ನೇಹದ ನೆನಪು ಬಿಚ್ಚಿಟ್ಟ ಅಪರ ಜಿಲ್ಲಾಧಿಕಾರಿ

    ಇನ್ನು ಮೇ 13ರಂದೇ ಅರ್ಗತಲಾ ಮತ್ತು ತ್ರಿಪುರಾದ ಚಿತ್ರಮಂದಿರಗಳಲ್ಲಿ ರಾಧೆ ಸಿನಿಮಾ ಬಿಡುಗಡೆ ಆಗಿತ್ತು. ಮೊದಲ ವಾರ 63,248 ಗಳಿಕೆ ಮಾಡಿತ್ತು. ಒಟ್ಟಾರೆಯಾಗಿ ಚಿತ್ರಮಂದಿರದಿಂದ ರಾಧೆ ಚಿತ್ರ 81,040 ಗಳಿಕೆ ಮಾಡಿದೆ. ಪ್ರಭುದೇವ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದಿಶಾ ಪಟಾಣಿ ನಾಯಕಿಯಾಗಿ ನಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts