More

    ‘ಮಮ್ಮಿ’ ಲೋಹಿತ್​ ನಿರ್ಮಾಣದ ಚಿತ್ರದಲ್ಲಿ ಡಿಂಪಲ್​ ಕ್ವೀನ್​ ರಚಿತಾ ನಾಯಕಿ

    ಬೆಂಗಳೂರು: ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಬಿಜಿಯಾಗಿದ್ದಾರೆ. ಒಂದಾದ ನಂತರ ಒಂದು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದೆಲ್ಲದರ ಜತೆಗೆ ಹೊಸಬರ ಹೊಸ ಪ್ರಯತ್ನಗಳಿಗೂ ಅವರು ಕೈ ಜೋಡಿಸುತ್ತಿದ್ದಾರೆ. ಈಗ ಅಂಥದ್ದೇ ಮತ್ತೊಂದು ಹೊಸ ಸಿನಿಮಾವೊಂದಕ್ಕೆ ರಚಿತಾ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

    ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರಕ್ಕೆ ರಚಿತಾ ನಾಯಕಿ. ನಾಯಕಿ ಹಿನ್ನೆಲೆಯಲ್ಲಿಯೇ ಸಾಗುವ ಈ ಚಿತ್ರವನ್ನು ಅರುಣ್​ ಕುಮಾರ್ ಮತ್ತು ಸಾಬು ಅಲೋಯಿಸಿಸ್​ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಕನ್ನಡದಲ್ಲಿ ಪೃಥ್ವಿ ಅಂಬರ್​ ನಾಯಕನಾಗಿ ನಟಿಸುತ್ತಿರುವ ಲೈಫ್​ ಈಸ್​ ಬ್ಯೂಟಿಫುಲ್​ ಚಿತ್ರವನ್ನೂ ಈ ನಿರ್ದೇಶಕ ಜೋಡಿಯೇ ಆ್ಯಕ್ಷನ್​ ಕಟ್​ ಹೇಳುತ್ತದೆ.

    ಇದನ್ನೂ ಓದಿ: ನಾವಿಬ್ರು ಮದ್ವೆಯಾಗೋಣ ನಾಗಚೈತನ್ಯಗೆ ಡಿವೋರ್ಸ್​ ಕೊಡಿ ಎಂದ ಫ್ಯಾನ್: ಸಮಂತಾ ಉತ್ತರಕ್ಕೆ ಭಾರಿ ಮೆಚ್ಚುಗೆ!

    ಸರ್ವೈವಲ್​ ಶೈಲಿಯ ಸಿನಿಮಾ ಇದಾಗಿರಲಿದೆ ಎಂದು ಮಾಹಿತಿ ನೀಡುವ ನಿರ್ಮಾಪಕ ಲೋಹಿತ್​, ‘ಈ ರೀತಿಯ ಸಿನಿಮಾ ಕನ್ನಡದಲ್ಲಿ ಇಲ್ಲಿಯವರೆಗೂ ಮೂಡಿಬಂದಿಲ್ಲ. ಹೊಸದಾದ ಶೈಲಿಯನ್ನು ಪರಿಚಯಿಸುತ್ತಿದ್ದೇವೆ. ಭಾವನಾತ್ಮಕವಾದ ಎಳೆ ಇಲ್ಲಿರಲಿದೆ’ ಎನ್ನುತ್ತಾರೆ.

    ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಕೊನೇ ಹಂತದಲ್ಲಿದೆಯಂತೆ. ಇತ್ತ ಲೈಫ್ ಈಸ್​ ಬ್ಯೂಟಿಫುಲ್​ ಸಿನಿಮಾದ ಶೂಟಿಂಗ್​ ಇನ್ನೆರಡು ದಿನ ಮುಗಿದರೆ, ಪೋಸ್ಟ್ ಪ್ರೊಡಕ್ಷನ್​ ಕೆಲಸ ಶುರುವಾಗಲಿದೆ. ಆ ಬಳಿಕ ರಚಿತಾ ಅವರ ಡೇಟ್ಸ್ ನೋಡಿಕೊಂಡು, ಸಿನಿಮಾ ಶುರು ಮಾಡುವುದು ತಂಡದ ಪ್ಲಾನ್​.

    ಇದನ್ನೂ ಓದಿ: 2050ರಲ್ಲಿ ಶ್ರದ್ಧಾ ಏನ್​ ಮಾಡ್ತಾರೆ ಗೊತ್ತಾ?

    ಲೈಫ್​ ಈಸ್​ ಬ್ಯೂಟಿಫುಲ್​ ಸಿನಿಮಾದ ತಂಡವೇ ಈ ಚಿತ್ರದಲ್ಲಿ ಮುಂದುವರಿದಿದ್ದು, ಪ್ರೈಡೇ ಫಿಲಂಸ್​ನ ಲೋಹಿತ್​ , ಸಿಲ್ವರ್​ ಟ್ರೇನ್​ ಎಂಟರ್​ಟೈನ್​ಮೆಂಟ್​ನ ಬಿಜಿ ಅರುಣ್​, ಕಿಶೋರ್​ ನರಸಿಂಹಯ್ಯ ಹೊಸ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. 1500ಕ್ಕೂ ಅಧಿಕ ಆ್ಯಡ್​ ಫಿಲಂ ಮಾಡಿದ ಕೇರಳ ಮೂಲದ ಕ್ರಿಶ್​ ಕೈಮಲ್​ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನುಳಿದಂತೆ ಪಾತ್ರಗಳ ಆಯ್ಕೆ ಮತ್ತು ತಾಂತ್ರಿಕ ವರ್ಗದ ಆಯ್ಕೆ ಆಗಬೇಕಿದೆ.

    ಗೋವಾದ ಐಶಾರಾಮಿ ಹಡಗಿನಲ್ಲಿ ಮಗನ ಬರ್ತ್​ಡೇ ಆಚರಿಸಿದ ಯಶ್​- ರಾಧಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts