More

    ಜಮಖಂಡಿ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಪಾದಯಾತ್ರೆ

    ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕು ಕೇಂದ್ರಗಳು ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ ತುಂಬಾ ದೂರ ಇರುವುದರಿಂದ ಜಮಖಂಡಿಯನ್ನು ಜಿಲ್ಲೆಯನ್ನಾಗಿಸಬೇಕು ಎಂದು ಒತ್ತಾಯಿಸಿ ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕು ಕೇಂದ್ರದಿಂದ ಸಾವಿರಾರು ಜನರು ಪಾದಯಾತ್ರೆಯ ಬೃಹತ್ ಪ್ರತಿಭಟನೆ ರ‌್ಯಾಲಿ ಮೂಲಕ ತೆರಳಿ ಜಮಖಂಡಿ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ತಿರ್ಮಾನಿಸಲಾಗಿದೆ ಎಂದು ಸಾಹಿತಿ ಸಿದ್ದರಾಜ ಪೂಜಾರಿ ತಿಳಿಸಿದರು.

    ಬನಹಟ್ಟಿ ಐಬಿಯಲ್ಲಿ ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕು ಕೇಂದ್ರದ ನೂರಾರು ಹಿರಿಯರ ಸಮ್ಮುಖದಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಕೇಂದ್ರವಾಗಲು ಜಮಖಂಡಿ ಸೂಕ್ತವಾದ ಕೇಂದ್ರ ಸ್ಥಾನವಾಗಿದ್ದು ಅದಕ್ಕೆ ಸರ್ವರ ಸಮ್ಮತಿ ಇದೆ ಎಂದರು.

    ಬನಹಟ್ಟಿಯ ಭೀಮಶಿ ಮಗದುಮ್, ಸಾಹಿತಿಗಳಾದ ಮಲ್ಲಿಕಾರ್ಜುನ ಹುಲಗಬಾಳಿ, ಬಸವರಾಜ ಕೊಣ್ಣೂರ, ಪ್ರೊ.ಎಂ.ಎಸ್. ಬದಾಮಿ, ರಾಮಣ್ಣ ಹುಲಕುಂದ, ತೇರದಾಳದ ಬಸವರಾಜ ಬಾಳಿಕಾಯಿ, ಡಾ.ಎಂ.ಎಸ್. ದಾನಿಗೊಂಡ ಮಾತನಾಡಿ, ಜಮಖಂಡಿ ಜಿಲ್ಲಾ ಕೇಂದ್ರವಾಗಲು ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿಯೇ ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ ಹಾಗೂ ಮುಧೋಳ ನಗರಗಳು ಅತಿ ಹೆಚ್ಚು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಮತ್ತು ಕಂದಾಯ ಕಟ್ಟುವ ಕೇಂದ್ರಗಳಾಗಿವೆ. ಸಂಪೂರ್ಣ ನೀರಾವರಿ ಕ್ಷೇತ್ರಗಳಾಗಿದ್ದು ಎಲ್ಲರೂ ಪಕ್ಷಾತೀತವಾಗಿ ಸಾಮರಸ್ಯದಿಂದ ಒಗ್ಗಟ್ಟಾಗಿ ಹೋರಾಟ ಮಾಡಲು ಸಿದ್ಧರಾಗೋಣ ಎಂದು ಹೇಳಿದರು.

    ಮುಖಂಡರಾದ ಸಿದ್ದನಗೌಡ ಪಾಟೀಲ, ಮನೋಹರ ಶಿರೋಳ, ಮಲ್ಲಣ್ಣ ಕಕಮರಿ, ಶಂಕರ ಜುಂಜಪ್ಪನವರ, ಶಂಕರ ಜಾಲಿಗಿಡದ, ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ನೀಲಕಂಠ ಮುತ್ತೂರ, ಬಸವರಾಜ ತೆಗ್ಗಿ, ಶಂಕರ ಸೊರಗಾಂವಿ, ಈಶ್ವರ ಕಾಡದೇವರ, ಮಹಾದೇವ ದೂಪದಾಳ, ಬಸವರಾಜ ದಲಾಲ, ಈಶ್ವರ ಕಾಡದೇವರ, ಮಲ್ಲಿಕಾರ್ಜುನ ಬಾಣಕಾರ, ಈಶ್ವರ ನಾಗರಾಳ, ಸಂಜು ತೆಗ್ಗಿ ಹಾಗೂ ತೇರದಾಳ, ಮಹಾಲಿಂಗಪುರ, ರಬಕವಿ-ಬನಹಟ್ಟಿ ತಾಲೂಕಿನ ಅನೇಕ ಹಿರಿಯರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ತುಂಗಳ ನಿರೂಪಿಸಿದರು. ಪ್ರಕಾಶ ಕುಂಬಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts