More

    ನೀಟ್ ಪರೀಕ್ಷೆಯ ಸಾಧಕರಿಗೆ ಸನ್ಮಾನ

    ರಬಕವಿ/ಬನಹಟ್ಟಿ: ವಿದ್ಯಾರ್ಥಿಗಳು ಸಾಧನೆ ಮಾಡಲು ಶ್ರದ್ಧೆ, ಪರಿಶ್ರಮ ಅವಶ್ಯವಾಗಿದೆ. ಪಾಲಕರು ಮತ್ತು ಉಪನ್ಯಾಸಕರ ಪ್ರೋತ್ಸಾಹ ಅಗತ್ಯ ಎಂದು ಎಂದು ಭೌತವಿಜ್ಞಾನ ಉಪನ್ಯಾಸಕ ಪ್ರೊ.ಕೆ.ಎಚ್. ಸಿನ್ನೂರ ತಿಳಿಸಿದರು.

    ಬನಹಟ್ಟಿಯ ಎಸ್‌ಆರ್‌ಎ ಸಂಯುಕ್ತ ಪಪೂ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

    ಗಣಿತ ಉಪನ್ಯಾಸಕ ಪ್ರೊ.ಬಿ.ನಾಗರಾಜ ಮಾತನಾಡಿ, ವಿದ್ಯಾರ್ಥಿಗಳ ಲಿತಾಂಶದಿಂದ ಉಪನ್ಯಾಸಕರು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಪ್ರಾಚಾರ್ಯ ಪ್ರೊ.ಬಿ.ಆರ್. ಗೊಡ್ಡಾಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಆಕಾಶ ಗಡೆನ್ನವರ, ಚೇತನ ಸಿದ್ದಾಪುರ, ಸಹನಾ ಹಳಿಂಗಳಿ, ಸುಶ್ಮೀತ ಮುತ್ತೂರ ಹಾಗೂ ಪ್ರದೀಪ ಮಾದರ ಅವರನ್ನು ಸನ್ಮಾನಿಸಲಾಯಿತು. ಎನ್.ಆರ್. ಮೀನಾಕ್ಷಿ, ಎಸ್.ಸಿ. ಚಾಂಗ್ಲೇರಿ, ಮಂಜುನಾಥ ಆಲಗೂರ, ವಿನೀತ ಹಿರೇಮಠ, ಆಶಾ ಸಜ್ಜನ, ಸಂಗಮೇಶ ಉಮರಾಣಿ, ಬಸವರಾಜ ಜಂಬಗಿ, ಮೋಹನ ಇಟಿ, ಕುಮಾರ ಸಜ್ಜನ, ಮಲ್ಲಪ್ಪ ಹಳಿಂಗಳಿ ಸೇರಿ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts