More

    ದೇಗುಲ ನಿರ್ಮಾಣ ಸ್ಮರಣೀಯ

    ರಬಕವಿ/ಬನಹಟ್ಟಿ: ರಾಂಪುರ ನಗದಲ್ಲಿ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಹಾಗೂ ಹನುಮ ದೇವರ ಮೂಲ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಮಂದಿರ ನಿರ್ಮಾಣ ಕಾರ್ಯ ನಮಗೆ ಸಂತಸ ತಂದಿದೆ ಎಂದು ಹಳೇ ಹುಬ್ಬಳ್ಳಿ ನೀಲಕಂಠಮಠದ ಶಿವಶಂಕರ ಶಿವಾಚಾರ್ಯರು ಹೇಳಿದರು.

    ನಗರಸಭೆ ವ್ಯಾಪ್ತಿಯ ರಾಂಪುರ ನಗರದಲ್ಲಿ ಬುಧವಾರ ಬೆಳಗ್ಗೆ ನೂತನ ರಾಮಮಂದಿರ ಉದ್ಘಾಟನೆ ಸಮಾರಂಭದ ನಂತರ ಜರುಗಿದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ವಧರ್ಮದವರು ಸೇರಿ ಶಿಥಿಲಗೊಂಡ ಹಳೆಯ ದೇವಸ್ಥಾನ ಜಾಗದಲ್ಲಿ ಹೊಸ ದೇಗುಲ ನಿರ್ಮಿಸಿದ್ದು ಈ ಭಾಗದ ಎಲ್ಲ ಭಕ್ತರಿಗೂ ಸಂತಸ ತಂದಿದೆ ಎಂದರು.

    ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, 1928 ರಲ್ಲಿ ಗ್ರಾಮದ ಖಟಾವಕರ ಮತ್ತು ಭಸ್ಮೆ ಪರಿವಾರದವರು ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಿದ್ದು ಅವರ ಭಕ್ತಿಗೆ ಸಾಟಿಯೇ ಇಲ್ಲ. ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲು ಪ್ರತಿ ಹಳ್ಳಿ, ನಗರದಲ್ಲೂ ರಾಮನ ಮಂದಿರಗಳು ಹೆಚ್ಚು ಹೆಚ್ಚು ಸ್ಥಾಪನೆ ಆಗಬೇಕು ಎಂದರು.

    ಹೆಬ್ಬಳ್ಳಿಯ ಚೈತನ್ಯಾಶ್ರಮದ ಪೀಠಾಧಿಪತಿ ದತ್ತಾವಧೂತ ಮಹಾರಾಜರು, ಹಿಪ್ಪರಗಿಯ ಪ್ರಭು ಬೆನ್ನಾಳೆ ಮಹಾರಾಜರು, ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ಹಳಿಂಗಳಿಯ ಕಮರಿಮಠದ ಶಿವಾನಂದ ಸ್ವಾಮಿಗಳು, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಚಿಮ್ಮಡದ ಜನಾರ್ದನ ಯರಗಟ್ಟಿಕರ ಮಹಾರಾಜರು, ರಾಂಪುರದ ಪವಾಡೇಶ್ವರ ಮಠದ ಸಂಗಮೇಶ್ವರ ಸ್ವಾಮೀಜಿ, ಪೇಠ ವಡಗಾಂವದ ಬಾಪೂಸಾ ಬಾಳಕೃಷ್ಣ ಗುರೂಜಿ, ಹೊಸೂರ ಶಿವಾನಂದ ಮಠದ ಪರಮಾನಂದ ಶ್ರೀಗಳು, ರಘುನಾಥ ಮಹಾರಾಜರು, ಗಂಗಾಧರ ಬುದ್ನಿ, ಸದಾಶಿವ ಭಸ್ಮೆ ಮಹಾರಾಜರು, ಶಂಕರಪ್ಪ ಅಮ್ಮಲಜೇರಿ ಸೇರಿ ಅನೇಕರು ಆಶೀರ್ವಚನ ನೀಡಿದರು.

    ಅವಳಿ ನಗರದ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಡಾ.ಪದ್ಮಜೀತ ನಾಡಗೌಡಪಾಟೀಲ, ಸಿದ್ಧರಾಜ ಪೂಜಾರಿ, ಮೋಹನ ಭಸ್ಮೆ, ಶಿವಾನಂದ ಗಾಯಕವಾಡ, ರಾಮಣ್ಣ ಹುಲಕುಂದ, ಪರಪ್ಪ ಬಿಳ್ಳೂರ, ಗಣಪತರಾವ್ ಹಜಾರೆ, ಭವರಲಾಲ ಶಾಹಾ, ಶಿವಜಾತ ಉಮದಿ, ಕಲ್ಲಪ್ಪ ಭಸ್ಮೆ, ಲಕ್ಷ್ಮಣ ತಳವಾರ, ವಿಜಯ ಕಲಾಲ, ವಿವೇಕಾನಂದ ಭಸ್ಮೆ ಅನೇಕ ಗಣ್ಯರು ಇದ್ದರು. ಪ್ರಕಾಶ ಸಿಂಘನ ಹಾಗೂ ಎಂ.ಎಂ. ಹೊಸಮನಿ ನಿರೂಪಿಸಿದರು. ಎಂ.ಎಂ. ಕವಟಗಿ ವಂದಿಸಿದರು.

    ಮೂರ್ತಿಗಳಿಗೆ ಅಭಿಷೇಕ
    ಮೂಲ ಮೂರ್ತಿಗಳಿಗೆ ವಿಶೇಷ ಅಭಿಷೇಕ ಹಾಗೂ ಹೋಮ ಹವನಗಳನ್ನು ಮಾಡಿ ಪ್ರತಿಷ್ಠಾಪಿಸಲಾಯಿತು. ನಂತರ 1001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಜರುಗಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts