More

    ವಸತಿ ಯೋಜನೆ ಫಲಾನುಭವಿಗಳಿಂದ ಸತ್ಯಾಗ್ರಹ

    ರಬಕವಿ/ಬನಹಟ್ಟಿ: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಡಿ ಮನೆಗಳ ನಿರ್ಮಾಣಕ್ಕೆ ಸಮರ್ಪಕವಾಗಿ ಸಹಾಯಧನ ದೊರೆಯದ ಕಾರಣ ಇಲ್ಲಿನ ನಗರಸಭೆ ಮುಂಭಾಗದಲ್ಲಿ ಲಾನುಭವಿಗಳು ನಡೆಸುತ್ತಿರುವ ಸತ್ಯಾಗ್ರಹ ಮಂಗಳವಾರ ಎರಡು ದಿನ ಪೂರೈಸಿತು.

    ಸತ್ಯಾಗ್ರಹದಲ್ಲಿ ಪಾಲ್ಗೊಂಡು ನಗರಸಭೆ ಸದಸ್ಯ ಬಸವರಾಜ ಗುಡ್ಡೋಡಗಿ ಮಾತನಾಡಿ, ಕೇಂದ್ರದಿಂದ ದೊರಕಬೇಕಾದ ತಲಾ 1.5 ಲಕ್ಷ ರೂ. ಈ ಯೋಜನೆಯ ಒಟ್ಟು 239 ಲಾನುಭವಿಗಳ ಪೈಕಿ 224 ಲಾನುಭವಿಗಳಿಗೆ ಹಣವೇ ಜಮೆಯಾಗಿಲ್ಲ. ಅದರಂತೆ ರಾಜ್ಯ ಸರ್ಕಾರದಿಂದ 84 ಕುಟುಂಬಗಳಿಗೆ ಈ ಯೋಜನೆ ದೊರಕಿಲ್ಲ ಎಂದು ಆರೋಪಿಸಿದರು.

    44 ಕುಟುಂಬಗಳು ಮನೆ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಿವೆ. ಇದು 2017-18 ರ ಯೋಜನೆಯಾಗಿದ್ದು, ಕಳೆದೆರಡು ವರ್ಷಗಳಿಂದ ಫಲಾನುಭವಿಗಳು ಬಾಡಿಗೆ ಮನೆಯಲ್ಲಿಯೇ ವಾಸ ಮಾಡುತ್ತಿದ್ದಾರೆ. ಮನೆ ನಿರ್ಮಿಸಿ ಸಾಲ ಮಾಡಿಕೊಂಡು ದುಡಿದ ಹಣವನ್ನೆಲ್ಲ ಸಾಲ ಹಾಗೂ ಬಡ್ಡಿಗೆ ತುಂಬುವಂತಾಗಿದ್ದು, ಹೊಟ್ಟೆಗೆ ಹಿಟ್ಟಿಲ್ಲದೆ ಬದುಕು ಅತಂತ್ರವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಲಾನುಭವಿಗಳಿಗೆ ಹಣ ಬಿಡುಗಡೆಗೊಳಿಸುವವರೆಗೂ ಈ ಸತ್ಯಾಗ್ರಹ ಹಿಂಪಡೆಯುವುದಿಲ್ಲವೆಂದು ಎಚ್ಚರಿಸಿದರು.

    ದುಂಡಪ್ಪ ಹವೇಲಿ, ಶಂಕರ ಹಿಪ್ಪರಗಿ, ಬಸವರಾಜ ಮುರಗುಂಡಿ, ಬಸವರಾಜ ಮಹಾಲಿಂಗಪುರ, ವಿರೂಪಾಕ್ಷಯ್ಯ ಅಮ್ಮಣಗಿ, ದೀಪಕ ಕೋಪರ್ಡೆ, ರಾಮಣ್ಣ ಕಟಗಿ, ಮಹಾನಿಂಗ ಕಳ್ಳಿಗುದ್ದಿ ಸೇರಿದಂತೆ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts