More

    ಪ್ರಾಯೋಗಿಕ ಶಿಕ್ಷಣದಿಂದ ಕಲಿಕಾ ಸಾಮರ್ಥ್ಯ ವೃದ್ಧಿ

    ರಬಕವಿ/ಬನಹಟ್ಟಿ: ಪ್ರಾಯೋಗಿಕ ಶಿಕ್ಷಣದಿಂದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಸಮೀಪದ ಹೊಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಚಿತ್ರಕಲಾ ದರ್ಶನ ಗ್ಯಾಲರಿ ಉದ್ಘಾಟಿಸಿ ಅವರು ಮಾತನಾಡಿದರು.

    ಚಿತ್ರಕಲೆ ಮೂಲಕ ಮಕ್ಕಳಲ್ಲಿ ಜ್ಞಾನಸುಧೆ ತುಂಬುತ್ತಿರುವ ಚಿತ್ರಕಲಾ ಶಿಕ್ಷಕ ಡಾ.ಸಂಗಮೇಶ ಬಗಲಿಯವರ ಪ್ರಯತ್ನ ಮೆಚ್ಚುವಂಥದ್ದು. ರಾಜ್ಯದಲ್ಲೇ ವಿಶಿಷ್ಟವಾದ ಕಲಿಕಾ ಕಾರ್ಯಕ್ರಮ ಇದಾಗಿದ್ದು, ಇದು ಇತರರಿಗೂ ಮಾದರಿಯಾಗಿದೆ ಎಂದರು.

    ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ ಕಲಿಕಾ ಕಾರ್ಡ್ ಬಿಡುಗಡೆಗೊಳಿಸಿದರು.
    ಜಮಖಂಡಿಯ ಸಿಟಿಇ ಸಹ ನಿರ್ದೇಶಕ ರಾಜೀವ ನಾಯಕ, ಬಾಗಲಕೋಟೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಎ.ಕೆ. ಬಸನ್ನವರ, ಬಿಇಒ ಸಿ.ಎಂ. ನ್ಯಾಮಗೌಡ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ, ಎಂ.ಡಿ. ಸಂಖ, ಭೂದಾನಿ ಗೋವಿಂದಪ್ಪ ನಿಂಗಸಾನಿ, ಹಿರಿಯರಾದ ಬಾಬಾಗೌಡ ಪಾಟೀಲ, ಸುರೇಶಗೌಡ ಪಾಟೀಲ, ಸಂತೋಷ ತಳಿಕೇರಿ, ಸುರೇಶ ಅಕ್ಕಿವಾಟ, ವೆಂಕಟೇಶ ನಿಂಗಸಾನಿ, ಮಂಜುನಾಥ ಪರಕಾಳಿ, ಮಹಾದೇವ ನಲೂಡಿ, ನಾಗಪ್ಪ ಲೆಂಡಿ ಮತ್ತಿತರರು ಇದ್ದರು.

    ಮುಖ್ಯಶಿಕ್ಷಕ ಎಂ.ಸಿ. ಹೊಸಮಠ ಸ್ವಾಗತಿಸಿದರು. ಚನ್ನು ಕರಲಟ್ಟಿ ನಿರೂಪಿಸಿದರು. ಡಾ.ಸಂಗಮೇಶ ಬಗಲಿ ವಂದಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts