More

    ಕಠಿಣ ಕ್ರಮ ಜರುಗಿಸಿದರೆ ಹತೋಟಿ ಸಾಧ್ಯ

    ರಬಕವಿ/ಬನಹಟ್ಟಿ: ಜೀವ ಇದ್ದರೆ ಜೀವನ. ಅದಕ್ಕಾಗಿ ಸಾರ್ವಜನಿಕರು ಕರೊನಾ ತಡೆಗಟ್ಟಲು ಸಹರಿಸಬೇಕು. ಸರ್ಕಾರದ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಂದಾಗ ಕರೊನಾ ಹತೋಟಿ ಸಾಧ್ಯವಾಗಲಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ರಬಕವಿ ಬನಹಟ್ಟಿ ನಗರಸಬೆ ಸಭಾಭವನದಲ್ಲಿ ಗುರುವಾರ ಜರುಗಿದ ತಾಲೂಕಿನ ಎಲ್ಲ ಹಿರಿಯ ವೈದ್ಯರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಜೀವವನ್ನೇ ಮುಡುಪಾಗಿಟ್ಟು ಜನರ ಜೀವ ಉಳಿಸಲು ಹೋರಾಡುತ್ತಿರುವ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಸಹರಿಸಬೇಕು ಎಂದರು.

    ವೈದ್ಯ ಡಾ.ರವಿ ಜಮಖಂಡಿ ಮಾತನಾಡಿ, ಗಂಟಲು ದ್ರವ ಮಾದರಿ ವರದಿ ಬರುವುದು ತಡವಾಗುತ್ತದೆ. ಸಿಟಿ ಸ್ಕಾೃನ್ ಮಾಡಿಸಿದರೆ ತಕ್ಷಣವೇ ವರದಿ ಬರುತ್ತದೆ. ಇದರಿಂದ ಸೋಂಕಿತರಿಗೆ ಶೀಘ್ರ ಚಿಕಿತ್ಸೆ ನೀಡಿ ಜೀವ ಉಳಿಸಬಹುದು. ಎರಡನೇ ಅಲೆ ಜೋರಾಗಿದೆ. ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಸಿಟಿ ಸ್ಕಾೃನ್ ಮಾಡಿಸಿ ಬಂದ ವರದಿಯೂ ಕೋವಿಡ್ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಅದನ್ನು ಒಂದು ಅಂಕಿಯನ್ನಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

    ಡಾ.ವಿನೋದ ಮೇತ್ರಿ ಮಾತನಾಡಿ, ಅವಳಿ ನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟ ಶವ ಪಡೆಯಲು ಅವರ ಮನೆಯವರು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಶವಗಳನ್ನು ನಗರಸಭೆಯವರು ಅಂತ್ಯಸಂಸ್ಕಾರ ಮಾಡಬೇಕು ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸಿದ ತಾಲೂಕು ವೈದ್ಯಾಧಿಕಾರಿ ಜಿ.ಎಸ್. ಗಲಗಲಿ ಸಭೆಯಲ್ಲಿಯೇ ನಗರಸಭೆ ಪೌರಾಯುಕ್ತರಿಗೆ ಅದೇಶ ನೀಡಿದರು.

    ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರ ಸಿಬ್ಬಂದಿಯಿಂದ ಮಾಡಿಸುವುದಾಗಿ ತಿಳಿಸಿದರು.
    ವೈದ್ಯಾಧಿಕಾರಿ ಜಿ.ಎಸ್. ಗಲಗಲಿ ಮಾತನಾಡಿ, ಇಂದಿನಿಂದಲೇ ತಾಲೂಕಾದ್ಯಂತ ಇರುವ ಆರ್‌ಎಂಪಿ ಆಸ್ಪತ್ರೆಗಳನ್ನು ಬಂದ್ ಮಾಡಿಸಲಾಗುವುದು. ವೈದ್ಯರ ಸಲಹೆ ಇಲ್ಲದೆ ಮೆಡಿಕಲ್ ಶಾಪ್‌ಗಳಲ್ಲಿ ಜ್ವರದ ಗುಳಿಗೆಗಳನ್ನು ನೀಡಬಾರದೆಂದು ಎಚ್ಚರಿಕೆ ನೀಡಲಾಗುವುದು ಎಂದರು.

    ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ದುಬಾರಿ ಬಿಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದಷ್ಟು ಕಡಿಮೆ ಮಾಡಿ ಎಂದರು. ಇದಕ್ಕೆ ಉತ್ತರಿಸಿದ ಡಾ.ಜಿ.ಎಚ್. ಚಿತ್ತರಗಿ ಸರ್ಕಾರ ನಿಗದಿ ಪಡಿಸಿದಷ್ಟೆ ಪಡೆಯುತ್ತಿದ್ದೇವೆ ಎಂದರು. ಸಭೆಯಲ್ಲಿ ಸಿಪಿಐ ಜೆ.ಕರುಣೇಶಗೌಡ, ತೇರದಾಳ ಪಿಎಸ್‌ಐ ಸಂಜಯ ಕಾಂಬಳೆ, ಬನಹಟ್ಟಿ ಪಿಎಸ್‌ಐ ರವಿಕುಮಾರ ಧರ್ಮಟ್ಟಿ, ಉಪ ತಹಸೀಲ್ದಾರ್ ಎಸ್.ಜಿ. ಕಾಂಬಳೆ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ ಇತರರು ಇದ್ದರು.

    ಆಸ್ಪತ್ರೆ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಸೇರಿ ಹಲವಾರು ಸೇವಾ ಕ್ಷೇತ್ರಗಳ ಸಿಬ್ಬಂದಿಗೆ ಆಯಾ ಸಂಸ್ಥೆಯವರೆ ಪರವಾನಗಿ ಕಾರ್ಡ್ ಮಾಡಿಸಿ ಕೊಟ್ಟು ನಮ್ಮ ಗಮನಕ್ಕೆ ತರಬೇಕು.
    ಸಂಜಯ ಇಂಗಳೆ ತಹಸೀಲ್ದಾರ್

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts