More

    ರಬಕವಿ-ಬನಹಟ್ಟಿ ಸಂಪೂರ್ಣ ಲಾಕ್

    ರಬಕವಿ/ಬನಹಟ್ಟಿ: ಕರೊನಾ ಎರಡನೇ ಅಲೆ ಕಟ್ಟಿಹಾಕಲು ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅವಳಿ ನಗರ ಬುಧವಾರ ಸಂಪೂರ್ಣ ಲಾಕ್ ಆಗಿದ್ದವು. ಜನರು ಹೊರಬರದೆ ಸ್ವಯಂ ಪ್ರೇರಿತವಾಗಿ ಕರೊನಾ ಮಹಾಮಾರಿ ಹತೋಟಿಗೆ ಸಹಕರಿಸಿದರು.

    ಕೆಲ ಕಿಡಿಗೇಡಿಗಳು ವಿನಾಕಾರಣ ಹಳೇ ಗುಳಿಗೆ ಚೀಟಿ ಕಿಸೆಯಲ್ಲಿಟ್ಟುಕೊಂಡು ತಿರುಗಾಡುವುದು, ನೀರಿನ ಬಾಟಲ್, ಖಾಲಿ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ತಿರುಗಾಡುವುದು ಕಂಡು ಬಂದಿತು. ಅಂಥವರಿಗೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟು ದಂಡ ಹಾಕಿದರು.

    ರಸ್ತೆಗಳು ಖಾಲಿ ಖಾಲಿ
    ರಬಕವಿಯ ಈಶ್ವರ ಸಣಕಲ್ ರಸ್ತೆ, ಬನಹಟ್ಟಿಯ ಮಂಗಳವಾರ ಪೇಟೆ ರಸ್ತೆ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದವು. ಆದರೆ, ಕಟ್ಟುನಿಟ್ಟಿನ ಕ್ರಮದಿಂದ ಜನ ಇಲ್ಲದೆ ಬಿಕೋ ಎನ್ನುತ್ತಿರುವುದು ಕಂಡುಬಂದಿತು. ರಸ್ತೆಯಲ್ಲಿ ಚಿಕ್ಕ ಮಕ್ಕಳು ಕ್ರಿಕೆಟ್ ಆಟವಾಡುವುದು ಸಾಮಾನ್ಯವಾಗಿತ್ತು.

    ತಹಸೀಲ್ದಾರ್ ಸಂಜಯ ಇಂಗಳೆ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜನ ಸ್ವಯಂ ಪ್ರೇರಿತವಾಗಿ ಬೆಳಗ್ಗೆ 10 ಗಂಟೆ ನಂತರ ಬಂದ್‌ಗೆ ಸಹರಿಸಿದ್ದು ನಮಗೂ ಖುಷಿ ನೀಡಿದೆ. ಅಲ್ಲದೆ, ನಗರಸಭೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಕೂಡ ಸಹರಿಸುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅನುಕೂಲವಾಗಿದೆ ಎಂದರು. ಬನಹಟ್ಟಿ ಸಿಪಿಐ ಜೆ.ಕರುಣೇಶಗೌಡ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಸೇರಿ ಅನೇಕರಿದ್ದರು.

    ಸರ್ಕಾರದ ನಿಯಮಾವಳಿಗಳ ಪ್ರಕಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಮಾರುಕಟ್ಟೆ ಪ್ರಾರಂಭಿಸಬೇಕು. ಮರುದಿನ ಬೆಳಗಿನ 6 ರವರೆಗೆ ಸಂಪೂರ್ಣ ಲಾಕ್ ಆಗಿರುತ್ತದೆ. ಹೀಗೆ ಮೇ 12 ರವರೆಗೆ ಪ್ರಕ್ರಿಯೆ ನಡೆಯಲಿದ್ದು, ಸಾರ್ವಜನಿಕರು ಸಹರಿಸಬೇಕು. ವಿನಾಕಾರಣ ಹೊರಬಂದರೆ ಪೊಲೀಸ್ ಬೆತ್ತದ ರುಚಿ ತಿನ್ನಬೇಕಾಗುತ್ತದೆ.
    ಜೆ. ಕರುಣೇಶಗೌಡ ಸಿಪಿಐ ಬನಹಟ್ಟಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts