More

    ಸರ್ಕಾರಿ ವೈದ್ಯರು ಆಸ್ಪತ್ರೆಗೆ ಗೈರು

    ರಬಕವಿ/ಬನಹಟ್ಟಿ: ಕೇಂದ್ರ ಸರ್ಕಾರ ಬಡವರಿಗಾಗಿ ಜಾರಿಗೆ ತಂದಿರುವ ಆಯುಷ್ಮಾನ್ ಯೋಜನೆ ಸರಿಯಾಗಿ ಬಳಕೆಯಾಗುತ್ತಿಲ್ಲ. ತಾಲೂಕಿನ ಎಲುಬು-ಕೀಲು ವೈದ್ಯರು 25 ದಿನಗಳಿಂದ ಕರ್ತವ್ಯಕ್ಕೆ ಬಂದಿಲ್ಲ. ಅವರು ಸರ್ಕಾರಿ ಆಸ್ಪತ್ರೆ ಕೆಲಸದ ಜತೆಗೆ ಖಾಸಗಿ ಆಸ್ಪತ್ರೆಯನ್ನು ಹೊಂದಿದ್ದಾರೆ. ಹೆಚ್ಚಾಗಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿಯೇ ಶಸ್ತ್ರ ಚಿಕಿತ್ಸೆಗಳನ್ನು ನಡೆಸುತ್ತಿರುವುದರಿಂದ ಬಡ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ತಾಪಂ ಸದಸ್ಯ ಗುರುಪಾದಯ್ಯ ಮರಡಿಮಠ ಹಾಗೂ ಇತರ ಸದಸ್ಯರು ಆರೋಪಿಸಿದರು.

    ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಬಡವರ ಹಣ ಹೀರುತ್ತಿವೆ. ಇಂಥ ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ ಯಾವ ಕ್ರಮಗಳನ್ನು ತೆಗೆದುಕೊಂಡಿರುವಿರಿ ಎಂಬುದನ್ನು ತಿಳಿಸಬೇಕು ಎಂದು ಸದಸ್ಯರು ಅಧ್ಯಕ್ಷರಿಗೆ ಪ್ರಶ್ನಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ಮಾತನಾಡಿ, ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 72 ಶಾಲೆ ಕೊಠಡಿಗಳು ಹಾನಿಯಾಗಿದ್ದು ದುರಸ್ತಿಗಾಗಿ ಮತ್ತು ತಾಲೂಕಿನಲ್ಲಿನ 33 ಶಾಲೆಗಳಲ್ಲಿ ಶೌಚಗೃಹ ಕಟ್ಟಡಕ್ಕಾಗಿ ಕ್ರಿಯಾ ಯೋಜನೆಯನ್ನು ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. 39 ಶಾಲೆಗಳಲ್ಲಿ ಕುಡಿ ನೀರಿನ ಸಮಸ್ಯೆ ನಿವಾರಿಸಲು ಮುಂಬರುವ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಉಪಾಧ್ಯಕ್ಷೆ ಸುನಂದಾ ಮುಗಳಖೋಡ ಮಾತನಾಡಿ, ನ್ಯಾಯಬೆಲೆ ಅಂಗಡಿಯವರು ತಿಂಗಳಪೂರ್ತಿ ಪಡಿತರ ಧಾನ್ಯ ವಿತರಣೆ ಮಾಡಬೇಕು. ಆದರೆ ಕೇವಲ ನಾಲ್ಕು ದಿನಗಳಲ್ಲಿ ಅಂಗಡಿ ಮುಚ್ಚುತ್ತಾರೆ. ಕೆಲವು ಗ್ರಾಮಗಳಲ್ಲಿ 2 ಕೆ.ಜಿ ಗೋಧಿ ಬದಲಾಗಿ ಕೇವಲ ಒಂದು ಕೆ.ಜಿ. ಗೋಧಿ ನೀಡುತ್ತಿದ್ದಾರೆ. ಇಂಥ ನ್ಯಾಯ ಬೆಲೆ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

    ಜಿಪಂ ಸದಸ್ಯ ಪುಂಡಲೀಕ ಪಲಭಾವಿ ಮಾತನಾಡಿ, ಆದಷ್ಟು ಬೇಗನೆ ರಬಕವಿ-ಬನಹಟ್ಟಿ ನಗರದಿಂದ ಯಲ್ಲಟ್ಟಿ, ಕುಲಹಳ್ಳಿ ಮಾರ್ಗವಾಗಿ ಹಿಪ್ಪರಗಿ ಗ್ರಾಮಕ್ಕೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ತಾಪಂ ಅಧ್ಯಕ್ಷ ಶಿವಾನಂದ ಮಂಟೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಪಟ್ಟಣಶೆಟ್ಟಿ, ಸಿಡಿಪಿಒ ಮಹಾನಂದಾ ಹಾದಿಮನಿ, ಅಧಿಕಾರಿಗಳಾದ ಡಿ.ಬಿ. ದೇಶಪಾಂಡೆ, ಸಿ.ಎಂ. ನೇಮಗೌಡ, ರವಿ ಹುಕ್ಕೇರಿ, ಬಿ.ಆರ್. ಬಿರಾದಾರ, ಅಭಯಕುಮಾರ ಮೊರಬ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ
    ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದವರು ಶಾಲೆ ಮತ್ತು ವಸತಿ ನಿಲಯಗಳು ಆರಂಭ ಇರದಿದ್ದರೂ ಲಕ್ಷಾಂತರ ರೂ. ಹಣವನ್ನು ಖರ್ಚು ಹಾಕಿದ್ದಾರೆ. ಈ ಕುರಿತು ತನಿಖೆಯಾಗಬೇಕು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts