More

    ಯುಗಾದಿ ಹಬ್ಬ ಸರಳವಾಗಿ ಆಚರಿಸಿ

    ರಬಕವಿ/ಬನಹಟ್ಟಿ: ದೇಶದಲ್ಲಿ ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

    ಮಂಗಳವಾರ ಸಂಜೆ ಶ್ರೀಶೈಲ ಕ್ಷೇತ್ರದಿಂದ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎರಡನೇ ಹಂತದಲ್ಲಿರುವ ಕರೊನಾ ವೈರಸ್ ಮೂರನೇ ಹಂತಕ್ಕೆ ಹೋಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಒಂದು ವೇಳೆ ಮೂರನೇ ಹಂತಕ್ಕೆ ತಲುಪಿದರೆ ಮನುಷ್ಯರ ಮಾರಣ ಹೋಮವೇ ಆರಂಭವಾಗಬಹುದು. ಭಾರತವು ಮತ್ತೊಂದು ಇಟಲಿ ಆಗಬಾರದು. ಆದ್ದರಿಂದ ಯುಗಾದಿ ಹಬ್ಬದ ನೆಪದಲ್ಲಿ ಹಣ್ಣು, ಕಾಯಿ, ಪೂಜೆ ಸಾಮಗ್ರಿ ಮುಂತಾದ ವಸ್ತುಗಳನ್ನು ಖರೀದಿಸಲೂ ಯಾರೂ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲಿರುವ ಸಾಮಗ್ರಿಗಳನ್ನು ಮಾತ್ರ ಬಳಸಿ ಆರೋಗ್ಯಕರವಾದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಂಕ್ಷಿಪ್ತವಾಗಿ ಯುಗಾದಿ ಹಬ್ಬವನ್ನು ಆಚರಿಸಿ ಎಂದು ಭಕ್ತರಿಗೆ ಸಲಹೆ ನೀಡಿದ್ದಾರೆ.

    ನಾವು ಇಂದು ಉತ್ಸಾಹದಿಂದ ವ್ಯಾಪಕವಾದ ಯುಗಾದಿ ಹಬ್ಬವನ್ನು ಆಚರಿಸಲು ಮುಂದಾದರೆ ಮುಂದೊಮ್ಮೆ ಈ ಯುಗಾದಿ ಹಬ್ಬವೇ ನಮ್ಮ ಪಾಲಿಗೆ ಮಾರಿಹಬ್ಬವಾಗಬಹುದು. ನಮ್ಮ ಸಾಮಾನುಗಳ ಕ್ರಯ-ವಿಕ್ರಯವು ಕರೊನಾ ವೈರಸ್ ಹರಡುವ ಮಾಧ್ಯಮವಾಗಬಾರದು. ಆದ್ದರಿಂದ ಮನೆಯಲ್ಲಿಯೇ ಇದ್ದು ಸರ್ವರೂ ಸಂಕ್ಷಿಪ್ತ ಯುಗಾದಿ ಹಬ್ಬವನ್ನು ಆಚರಿಸಬೇಕೆಂದು ಈ ಮೂಲಕ ದೇಶದ ಸರ್ವ ಜನರಿಗೆ ವಿಶೇಷವಾಗಿ ಕರ್ನಾಟಕದ ಜನರಿಗೆ ಕರೆ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೂಡ ಈ ವೈರಸ್ ನಿಯಂತ್ರಣಕ್ಕಾಗಿ ಮಹಾ ಮೃತ್ಯುಂಜಯ ಹೋಮ, ಜಪ, ತಪ ಮುಂತಾದ ಪೂಜೆಗಳು ಏಕಾಂತದಲ್ಲಿ ನಿರಂತರವಾಗಿ ನಡೆದಿರುತ್ತವೆ. ಇದಲ್ಲದೆ ಭಾರತದಲ್ಲಿ ಭವ್ಯ ಜಾತ್ರೆಯಂದು ಪ್ರಸಿದ್ಧವಾದ ಶ್ರೀಶೈಲದ ಯುಗಾದಿ ಜಾತ್ರೆಯನ್ನು ಕೂಡ ಇಲ್ಲಿ ಅತ್ಯಂತ ಸಂಕ್ಷಿಪ್ತವಾಗಿ ಅತ್ಯಂತ ಸರಳವಾಗಿ ಮತ್ತು ಏಕಾಂತವಾಗಿ ಆಚರಿಸಲಾಗುತ್ತದೆ. ಇದನ್ನೇ ಮಲ್ಲಯ್ಯನ ಭಕ್ತರು ಕೂಡ ತಮ್ಮ ಗ್ರಾಮಗಳಲ್ಲಿ, ಮನೆಗಳಲ್ಲಿ ಅನುಸರಿಸಬೇಕು ಎಂದು ತಿಳಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts