More

    ದೇಶದಲ್ಲಿ ಹರಡಿರುವ ರಾಜಕೀಯ ದ್ವೇಷಕ್ಕೆ ಅಂತ್ಯ ಹಾಡಿ: ನೂರಕ್ಕೂ ಹೆಚ್ಚು ಮಾಜಿ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ

    ನವದೆಹಲಿ: ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ನೂರಕ್ಕೂ ಹೆಚ್ಚು ಮಾಜಿ ಅಧಿಕಾರಿಗಳು ದೇಶದಲ್ಲಿ ಹರಡುತ್ತಿರುವ ರಾಜಕೀಯ ದ್ವೇಷಕ್ಕೆ ಅಂತ್ಯ ಹಾಡುವಂತೆ ಮನವಿ ಮಾಡಿದ್ದಾರೆ.

    ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಧಾನ ಕಾರ್ಯದರ್ಶಿ ಟಿಕೆಎ ನಾಯರ್ ಸೇರಿದಂತೆ 108 ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.

    ಪ್ರಧಾನಿಗೆ ಬರೆದಿರುವ ಪತ್ರದಲ್ಲಿ, ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಜಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಹಿಂದೆಂದು ಕಂಡಿರದ ಬೆದರಿಕೆಯನ್ನು ದೇಶದಲ್ಲಿ ಎದುರಿಸುತ್ತಿದ್ದೇವೆ. ಅಪಾಯದಲ್ಲಿರುವುದು ಕೇವಲ ಸಾಂವಿಧಾನಿಕ ನೈತಿಕತೆ ಮತ್ತು ನಡವಳಿಕೆಯಲ್ಲ, ಇದು ನಮ್ಮ ಶ್ರೇಷ್ಠ ನಾಗರಿಕತೆಯ ಪರಂಪರೆ ಮತ್ತು ನಮ್ಮ ಸಂವಿಧಾನವನ್ನು ಸಂರಕ್ಷಿಸಲು ತುಂಬಾ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾದ ವಿಶಿಷ್ಟವಾದ ಸಾಮಾಜಿಕ ರಚನೆಯು ನಾಶವಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಮುಖದಲ್ಲಿರುವ ಮೌನವು ಸಮಾಜಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಬರೆಯಲಾಗಿದೆ.

    ದ್ವೇಷದ ರಾಜಕಾರಣಕ್ಕೆ ಕಡಿವಾಣ ಹಾಕುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿರುವ ಮಾಜಿ ಅಧಿಕಾರಿಗಳು, “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂಬ ನಿಮ್ಮ ಭರವಸೆಯನ್ನು ನಾವು ಹೃದಯದಿಂದ ಸ್ವೀಕರಿಸುತ್ತೇವೆ. ನಿಮ್ಮ ಆತ್ಮಸಾಕ್ಷಿಗೆ ನಾವು ಮನವಿ ಮಾಡುತ್ತೇವೆ. ಈ ವರ್ಷದ ‘ಆಜಾದಿ ಕಾ ಅಮೃತ ಮಹೋತ್ಸವ’ದಲ್ಲಿ ಪಕ್ಷಪಾತದ ಅಂಶಗಳನ್ನು ಮೀರಿ ನೀವು ರಾಜಕೀಯ ದ್ವೇಷದ ಅಂತ್ಯಕ್ಕೆ ಕರೆ ಕೊಡುತ್ತೀರಿ ಎಂಬುದು ನಮ್ಮ ಆಶಯವಾಗಿದೆ ಎಂದರು.

    ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧದ ದೇಶದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿಗೆ ಮಾಜಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಹಲವಾರು ರಾಜ್ಯಗಳಲ್ಲಿ ಕಳೆದ ಕೆಲವು ವರ್ಷಗಳು ಮತ್ತು ತಿಂಗಳುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು, ವಿಶೇಷವಾಗಿ ಮುಸ್ಲಿಮರ ವಿರುದ್ಧ ಹಿಂಸಾಚಾರವು ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಅಧಿಕಾರಿಗಳು ಪತ್ರವನ್ನು ಬರೆದಿದ್ದಾರೆ. (ಏಜೆನ್ಸೀಸ್​)

    ದಾಖಲಾತಿ ಪರಿಶೀಲನೆಗೆ ಹೋಗಿದ್ದ ಪಿಎಸ್​ಐ ಅಭ್ಯರ್ಥಿ ಸಿಐಡಿ ಅಧಿಕಾರಿಗಳ ಬಳಿಕ ಲಾಕ್ ಆಗಿದ್ದೆ ವಿಚಿತ್ರ..!

    ಪಿಎಸ್​ಐ ನೇಮಕಾತಿ ಹಗರಣ: ಅಕ್ರಮಕ್ಕೆ ಬಳಸ್ತಿದ್ದ ಬ್ಲೂಟೂತ್​ ಡಿವೈಸ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗ

    ದೇವಸ್ಥಾನದ ಪಲ್ಲಕ್ಕಿ ಉತ್ಸವ ವೇಳೆ ವಿದ್ಯುತ್​ ಶಾಕ್​: 11 ಮಂದಿ ದುರ್ಮರಣ, 15 ಜನರ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts