More

    ಜನನಾಂಗಕ್ಕೆ ಮೊಳೆ, ಕಲ್ಲು ತುರುಕಿ ವಿಕೃತಿ: 11 ದಿನ 23 ಸೈನಿಕರಿಂದ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಮಹಿಳೆ!

    ಅಡಿಸ್ ಅಬಾಬ: ಇಥಿಯೋಪಿಯಾದ ಟೈಗ್ರೇ ವಲಯದ 27 ವರ್ಷದ ಮಹಿಳೆಯೊಬ್ಬಳು ತನ್ನ ಮೇಲೆ 11 ದಿನಗಳ ಕಾಲ ನಿರಂತರವಾಗಿ 23 ಯೋಧರು ನಡೆಸಿದ ಅತ್ಯಾಚಾರದ ಕರಾಳ ಘಟನೆಯನ್ನು ವಿವರಿಸಿದ್ದಾಳೆ.

    ಸಂತ್ರಸ್ತ ಮಹಿಳೆಯನ್ನು ಯೋಧರು ನಿರಂತರವಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಜನನಾಂಗಕ್ಕೆ ಮೊಳೆ, ಕಲ್ಲು ಮತ್ತು ಇತರೆ ವಸ್ತುಗಳನ್ನು ತುರುಕಿ ವಿಕೃತಿ ಮೆರೆದಿದ್ದಾರೆ. ಇಷ್ಟೇ ಅಲ್ಲದೆ, ಚಾಕು ತೋರಿಸಿ ಎಲ್ಲಿಯು ಬಾಯಿಬಿಡದಂತೆ ಹೆದರಿಸಿದ್ದಾರೆ.

    ಮಹಿಳೆ ಅಪಹರಣ ಹೇಗೆ?
    ಸಂತ್ರಸ್ತೆ ತನ್ನ ಮಕ್ಕಳೊಂದಿಗೆ ಮನೆಗೆ ಹೋಗುವಾಗ ಸಮವಸ್ತ್ರದಲ್ಲಿ ಯೋಧರು ಮೆಕೆಲ್ಲೆಯಿಂದ ಅಡಿಗ್ರಾತ್​ ನಗರಕ್ಕೆ ತೆರಳುತ್ತಿದ್ದ ಮಿನಿಬಸ್​ ಅನ್ನು ನಿಲ್ಲಿಸಿ ಆಕೆಯನ್ನು ಬಸ್​ನಿಂದ ಕೆಳಕ್ಕೆ ಇಳಿಯುವಂತೆ ಆದೇಶಿಸಿದ್ದಾರೆ. ಬಸ್​ ಓವರ್​ಲೋಡ್​ ಆಗಿದೆ ಕೆಳಗಿಳಿ ಎಂದು ಇಳಿಸಿದ್ದಾರೆ. ಕೆಳಗೆ ಇಳಿಯುತ್ತಿದ್ದಂತೆ ಆಕೆ ಕಟ್ಟಿ ದಾರಿಯುದ್ದಕ್ಕೂ ಮೆರವಣಿಗೆ ಮಾಡಿ ನಿರ್ಜನ ಪ್ರದೇಶದಲ್ಲಿದ್ದ ತಮ್ಮ ಶಿಬಿರಕ್ಕೆ ಕರೆದೊಯ್ದಿದ್ದಾರೆ.

    ಯೋಧರು ತಮ್ಮ ಶಿಬಿರದಲ್ಲಿ ಆಕೆಯನ್ನು 11 ದಿನಗಳ ಕಾಲ ಬಂಧಿಯಾಗಿಟ್ಟುಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಕ್ರೂರ ಮೃಗಗಳಿಗಿಂತಲೂ ಅಮಾನವೀಯವಾಗಿ ವರ್ತಿಸಿದ್ದು, ಮಹಿಳೆಯ ಜನನಾಂಗಕ್ಕೆ ಮೊಳೆ, ಹತ್ತಿ, ಪ್ಲಾಸ್ಟಿಕ್​ ಬ್ಯಾಗ್​ ಮತ್ತು ಕಲ್ಲುಗಳನ್ನು ತುರುಕಿ ಹಿಂಸಿಸಿದ್ದಾರೆ.

    ಜನನಾಂಗಕ್ಕೆ ಮೊಳೆ, ಕಲ್ಲು ತುರುಕಿ ವಿಕೃತಿ: 11 ದಿನ 23 ಸೈನಿಕರಿಂದ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಮಹಿಳೆ!

    11 ದಿನಗಳ ಬಳಿಕ ಮಹಿಳೆಯನ್ನು ಬಿಡುಗಡೆ ಮಾಡಿ, ಪೊದೆಯೊಂದರಲ್ಲಿ ಕೈಬಿಡಲಾಯಿತು. ಈ ವೇಳೆ ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ನೋಡಿದ ಗ್ರಾಮಸ್ಥರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ದೇಹದೊಳಗೆ ಆಗಿರುವ ಗಂಭೀರ ಗಾಯದಿಂದ ಈಗಲೂ ರಕ್ತಸ್ರಾವ ಆಗುತ್ತಿರುವುದಾಗಿ ವೈದ್ಯರು ಹೇಳಿದರು. ಇದರ ಪರಿಣಾಮ ಫೆಬ್ರವರಿ ಮಧ್ಯದವರೆಗೂ ಮುಂದುವರಿದಿತ್ತು. ಮೂತ್ರವನ್ನು ಸಹ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಆಕೆಯ ಕಾಲು ಸಹ ಮುರಿದು ಸರಿಯಾಗಿ ನಡೆಯಲು ಮತ್ತು ಕುಳಿತುಕೊಳ್ಳಲು ಆಕೆಗೆ ಆಗುತ್ತಿರಲಿಲ್ಲ.

    ಇನ್ನು ವೈದ್ಯರು ರಾಯಿಟರ್ಸ್​ ಮಾಧ್ಯಮಕ್ಕೆ ಮಹಿಳೆಯ ಜನನಾಂಗದಲ್ಲಿದ್ದ ರಕ್ತದ ಕಲೆಯುಳ್ಳ ಕಲ್ಲು ಮತ್ತು 3 ಇಂಚಿನ ಮೊಳೆ ತೋರಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿದ್ದಾಗ ವಿಭಿನ್ನ ರೀತಿಯ ಕಳವಳ ವ್ಯಕ್ತಪಡಿಸಿದ್ದಾಳೆ. ಸೈನಿಕರು ಅವಳ ಫೋನ್ ತೆಗೆದುಕೊಂಡ ಕಾರಣ, ತನ್ನಿಬ್ಬರು ಮಕ್ಕಳ ಸಂಪರ್ಕ ಹೇಗೆ ಎಂಬುದು ಸಹ ಅವಳಿಗೆ ತಿಳಿದಿಲ್ಲ ಎಂದು ಅವರು ಹೇಳಿದರು.

    ಆಘಾತಕಾರಿಯೆಂದರೆ ಮಹಿಳೆ ಆಹಾರ ಹುಡುಕಿ ಹೊರಟಿದ್ದಾಗಲೇ ಆಕೆಯನ್ನು ಯೋಧರು ಎಳೆದೊಯ್ದಿದ್ದರು. ತನ್ನ ಮಕ್ಕಳು ಬದುಕಿದ್ದಾರೋ? ಅಥವಾ ಮೃತಪಟ್ಟಿದ್ದಾರೋ? ಒಂದು ತಿಳಿಯುತ್ತಿಲ್ಲ. ಶತ್ರುಗಳ ನನ್ನ ಜೀವನವನ್ನು ಸಂಪೂರ್ಣ ನಾಶಮಾಡಿಬಿಟ್ಟರು ಎಂದು ಸಂತ್ರಸ್ತೆ ಕಣ್ಣೀರಿಟ್ಟಿದ್ದಾಳೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್, ಪ್ರಾದೇಶಿಕ ನಾಯಕರ ವಿರುದ್ಧ ಸರ್ಕಾರದ ಆಕ್ರಮಣವನ್ನು ಘೋಷಿಸಿದ ಬಳಿಕ ನೂರಾರು ಮಹಿಳೆಯರು ಇಥೋಪಿಯನ್​ ಅಥವಾ ಮಿತ್ರರಾಷ್ಟ್ರ ಎರಿಟ್ರಿಯನ್ ಸೈನಿಕರ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.

    ಜನನಾಂಗಕ್ಕೆ ಮೊಳೆ, ಕಲ್ಲು ತುರುಕಿ ವಿಕೃತಿ: 11 ದಿನ 23 ಸೈನಿಕರಿಂದ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಮಹಿಳೆ!

    ಅತ್ಯಾಚಾರಕ್ಕೆ ಒಳಗಾದವರಲ್ಲಿ ಹೆಚ್ಚಿನವರು ತಮ್ಮ ದಾಳಿಕೋರರನ್ನು ಇಥಿಯೋಪಿಯನ್ ಸರ್ಕಾರಿ ಸೈನಿಕರು ಅಥವಾ ಎರಿಟ್ರಿಯನ್ ಪಡೆಗಳೆಂದು ಆರೋಪಿಸಿದ್ದಾರೆ ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದ್ದಾರೆ.

    ಅಲ್ಲದೆ, ಮಹಿಳೆಯರನ್ನು ಯೋಧರು ಲೈಂಗಿಕ ಗುಲಾಮರಾಗಿ ಇರಿಸಿಕೊಂಡಿದ್ದಾರೆ. ಈ ವಿಚಾರ ವಿಶ್ವಸಂಸ್ಥೆಯ ಗಮನವನ್ನು ಸೆಳೆದಿದೆ. ಇಥಿಯೋಪಿಯದ ವಿಶ್ವಸಂಸ್ಥೆ ಸಹಾಯಕ ಸಂಯೋಜಕಿಯಾದ ವಾಫಾ ಸೆಡ್​ ಮಾತನಾಡಿ, ಉತ್ತರ ರಾಜ್ಯದ 5 ಮೆಡಿಕಲ್​ ಕೇಂದ್ರಗಳಲ್ಲಿ 500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ಈವರೆಗೂ ವರದಿಯಾಗಿವೆ. ಆದರೆ, ಇದು ಅಸಲಿ ಸಂಖ್ಯೆಯಲ್ಲ. ಇದಕಿಂತಲೂ ಹೆಚ್ಚಿನ ದೌರ್ಜನ್ಯಗಳು ನಡೆದಿವೆ ಎಂದಿದ್ದಾರೆ. ಈ ದೌರ್ಜನ್ಯ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸುವುದರೊಂದಿಗೆ ಎಚ್ಚರಿಕೆಯನ್ನು ನೀಡಿದೆ. (ಏಜೆನ್ಸೀಸ್​)

    ಪಾಲಕರ ಮುಂದೆಯೇ ಮಹಿಳೆಯರ ಗ್ಯಾಂಗ್​ರೇಪ್​, ಪುರುಷರಿಂದಲೇ ಕುಟುಂಬಸ್ಥರ ಅತ್ಯಾಚಾರ: ವಿಶ್ವವೇ ಬೆಚ್ಚಿಬೀಳಿಸೋ ಘಟನೆ!

    ಹನಿಮೂನ್​ನಲ್ಲಿರೋ ಅರೆಬರೆ​ ಡ್ರೆಸ್​ ವಿಡಿಯೋ ಶೇರ್​ ಮಾಡಿ ಎನ್​ಜಾಯ್​ ಮಾಡಿ ಎಂದ ನಟಿ- ನೆಟ್ಟಿಗರು ಗರಂ

    ವಾರದಲ್ಲಿ ಶೇ.58 ಸೋಂಕು ಹೆಚ್ಚಳ; ಏ.11ಕ್ಕೆ ಶೇ.7.72 ಇದ್ದ ಸೋಂಕು ದರ ಇದೀಗ ಶೇ.12.20ಕ್ಕೆ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts