More

    ಸಾವು ಮತ್ತು ವಿನಾಶಕ್ಕೆ ರಷ್ಯಾ ಮಾತ್ರ ಹೊಣೆಯಾಗಲಿದೆ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುಡುಗು​

    ವಾಷಿಂಗ್ಟನ್​: ಜಾಗತಿಕ ವಿರೋಧದ ನಡುವೆಯೂ ಯೂಕ್ರೇನ್​ ವಿರುದ್ಧ ಸಮರ ಸಾರಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಆಕ್ರೋಶ ಹೊರಹಾಕಿದ್ದಾರೆ. ದಾಳಿಗಳಿಂದಾಗುವ ಸಾವು ಮತ್ತು ವಿನಾಶಕ್ಕೆ ರಷ್ಯಾ ಮಾತ್ರ ಹೊಣೆಯಾಗಲಿದೆ ಎಂದಿದ್ದಾರೆ.

    ಯುಎಸ್​ ಮತ್ತು ಅದರ ಮಿತ್ರ ರಾಷ್ಟ್ರಗಳು ಸಂಘಟಿತ ಮತ್ತು ನಿರ್ಣಾಯಕ ಮಾರ್ಗದಲ್ಲಿ ಪ್ರತಿಕ್ರಿಯಿಸಲಿವೆ. ಇಡೀ ಜಗತ್ತು ರಷ್ಯಾವನ್ನು ಹೊಣೆಗಾರನನ್ನಾಗಿ ಮಾಡುತ್ತದೆ ಎಂದು ಬೈಡೆನ್​ ಹೇಳಿದರು.

    ರಷ್ಯಾದ ಮಿಲಿಟರಿ ಪಡೆಯಿಂದ ಅನ್ಯಾಯಯುತವಾದ ಮತ್ತು ಅಪ್ರಚೋದಿತ ದಾಳಿಗೆ ಯೂಕ್ರೇನ್​ ಮಂದಿ ಬಳಲಬೇಕಾಗಿದ್ದು, ಇಡೀ ಜಗತ್ತಿನ ಪ್ರಾರ್ಥನೆ ಯೂಕ್ರೇನ್​ ಜನರೊಂದಿಗೆ ಇದೆ. ರಷ್ಯಾ ಅಧ್ಯಕ್ಷ ಪುತಿನ್ ಅವರು ಪೂರ್ವಯೋಜಿತ ಯುದ್ಧವನ್ನು ಆರಿಸಿದ್ದು, ಅದು ದುರಂತದ ಜೀವಹಾನಿ ಮತ್ತು ಮಾನವ ಸಂಕಟವನ್ನು ತರುತ್ತದೆ ಎಂದು ಹೇಳಿದ್ದಾರೆ.

    ಯೂಕ್ರೇನ್​ ವಿರುದ್ಧ ಯುದ್ಧ ಘೋಷಿಸಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಯೂಕ್ರೇನ್ ಅನ್ನು ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಈ ಸೇನಾ ಕಾರ್ಯಾಚರಣೆಯು ಯೂಕ್ರೇನ್​ ಅನ್ನು ಸೈನ್ಯೀಕರಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಯೂಕ್ರೇನ್ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಂದಿದೆ ಎಂದು ಹೇಳಿದ್ದಾರೆ.

    ರಷ್ಯಾ ಮತ್ತು ಯೂಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು ಸದ್ಯ ಅನಿವಾರ್ಯ ಎಂದಿರುವ ಪುತಿನ್, ಯೂಕ್ರೇನಿಯನ್ ಸೇವಾ ಸದಸ್ಯರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಕರೆ ನೀಡಿದ್ದಾರೆ. ಈ ವಿಚಾರದಲ್ಲಿ ಹೊರಗಿನಿಂದ ಹಸ್ತಕ್ಷೇಪ ಮಾಡುವವರಿಗೂ ಎಚ್ಚರಿಕೆಯ ಸಂದೇಶವನ್ನು ಪುತಿನ್​ ರವಾನಿಸಿದ್ದಾರೆ. ಯಾರಾದರೂ ಹಸ್ತಕ್ಷೇಪ ಮಾಡಿದರೆ, ಇತಿಹಾಸದಲ್ಲೇ ಎಂದಿಗೂ ಎದುರಿಸದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧಿತ ಎಲ್ಲ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ನಾನು ಹೇಳುವುದನ್ನು ನೀವು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

    ಯುದ್ಧ ಕಾರ್ಮೋಡ ಸನ್ನಿಹಿತ: ಯೂಕ್ರೇನ್​ ವಿರುದ್ಧ ಸೇನಾ ಕಾರ್ಯಾಚರಣೆ ಘೋಷಿಸಿದ ರಷ್ಯಾ ಅಧ್ಯಕ್ಷ

    ಸೇವೆಯಲ್ಲಿರುವಾಗಲೇ ಹಿಮಪಾತದಲ್ಲಿ ಸಿಲುಕಿ ಹುತಾತ್ಮನಾದ ಕೊಡಗಿನ ಯೋಧ

    ಕ್ಲೀನ್‌ಸ್ವೀಪ್ ಕನಸಿನಲ್ಲಿ ಭಾರತ ತಂಡ ; ಇಂದು ಶ್ರೀಲಂಕಾ ಎದುರು ಮೊದಲ ಟಿ20 ಹಣಾಹಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts