More

    ಕರೊನಾ ಲಸಿಕೆ ನೀಡಲು ಬಂದ ಆರೋಗ್ಯಾಧಿಕಾರಿಯನ್ನು ಕೆಳಗೆ ಕೆಡವಿ ಹಲ್ಲೆಗೆ ಯತ್ನ: ಮರವೇರಿದ ಮತ್ತೊಬ್ಬ

    ಲಖನೌ: ಕರೊನಾ ಲಸಿಕೆ ಬಗ್ಗೆ ಅರಿವು ಮೂಡಿಸಲು ಅಭಿಯಾನ ಕೈಗೊಂಡಿದ್ದ ಉತ್ತರ ಪ್ರದೇಶದ ಆರೋಗ್ಯಾಧಿಕಾರಿಗಳ ತಂಡವು ಬಲಿಯಾ ಜಿಲ್ಲೆಯ ಕುಗ್ರಾಮವೊಂದರ ಜನರ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆ.

    ಯುಪಿ ಚುನಾವಣೆಗೂ ಮುನ್ನ ಆದಷ್ಟು ಬೇಗ ಲಸಿಕಿಕೀರಣ ಮುಕ್ತಾಯಗೊಳಿಸಲು ಅಲ್ಲಿನ ಆರೋಗ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಬಾಕಿ ಉಳಿದಿರುವ ಮಂದಿಗೆ ಕೋವಿಡ್​ ಲಸಿಕೆ ಹಾಕಲು ಅಧಿಕಾರಿಗಳು ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಕೋವಿಡ್​ ಲಸಿಕೆಯಲ್ಲಿ ಬಲಿಯಾ ಜಿಲ್ಲೆಯ ರಾಜ್ಯದಲ್ಲೇ ಅತ್ಯಂತ ಕಳಪೆ ಸಾಧನೆ ಹೊಂದಿದ್ದು, ಅಧಿಕಾರಿಗಳು ಬುಧವಾರ ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದರು.

    ಅಧಿಕಾರಿಗಳ ಭೇಟಿ ವೇಳೆ ವ್ಯಕ್ತಿಯೊಬ್ಬ ಲಸಿಕೆಯಿಂದ ತಪ್ಪಿಸಿಕೊಳ್ಳಲು ಮರವೇರಿದರೆ, ಇನ್ನೊಬ್ಬ ವ್ಯಕ್ತಿ ಅಧಿಕಾರಿಗಳೊಂದಿಗೆ ಕುಸ್ತಿಗೆ ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಮರವೇರಿದ ವ್ಯಕ್ತಿಯನ್ನು ಕೆಳಗಿಳಿಸಲು ಜನರು ಯತ್ನಿಸಿದರು. ಆದರೆ, ಕೆಳಗೆ ಇಳಿಯಲು ಒಪ್ಪದ ವ್ಯಕ್ತಿ, ತಾನು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ನನಗೆ ಭಯವಾಗುತ್ತದೆ ಎಂದು ಹಠ ಹಿಡಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಆರೋಗ್ಯಾಧಿಕಾರಿಯೊಂದಿಗೆ ಕಿತ್ತಾಟ ನಡೆಸಿದ್ದಾನೆ. ಅಧಿಕಾರಿಯನ್ನು ಕೆಡವಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು, ಬಳಿಕ ಅಧಿಕಾರಿಗಳಿಂದ ಬಿಡಿಸಿಕೊಂಡು ಲಸಿಕೆ ಹಾಕಿಕೊಳ್ಳಲು ಒಪ್ಪದೇ, ನಾನು ಲಸಿಕೆ ಹಾಕಿಸಿಕೊಳ್ಳಲು ಆಮೇಲೆ ಬರುತ್ತೇನೆ ಎಂದು ವ್ಯಕ್ತಿ ಎಸ್ಕೇಪ್​ ಆಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ದಯವಿಟ್ಟು ಈಗಲೇ ಲಸಿಕೆ ತೆಗೆದುಕೊಳ್ಳಿ ಎಂದು ಆರೋಗ್ಯ ಅಧಿಕಾರಿಯೊಬ್ಬರು ಮನವಿ ಮಾಡಿಕೊಳ್ಳುವ ಧ್ವನಿ ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ಕೇಳುತ್ತದೆ.

    ಲಸಿಕೆ ಅಭಿಯಾನದ ಉಸ್ತುವಾರಿ ವಹಿಸಿದ್ದ ಆರೋಗ್ಯಾಧಿಕಾರಿಯೊಬ್ಬರು ಘಟನೆಯನ್ನು ವಿವರಿಸುತ್ತಾ, “ಲಸಿಕೆ ಅಭಿಯಾನದ ವೇಳೆ ಆರೋಗ್ಯ ಅಧಿಕಾರಿಗಳು ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ. ಮರವೇರಿದ ವ್ಯಕ್ತಿ ಆರಂಭದಲ್ಲಿ ಹಿಂಜರಿದರು. ನಾವು ಅವರಿಗೆ ಮನವರಿಕೆ ಮಾಡಿಕೊಟ್ಟು ಲಸಿಕೆ ಹಾಕಿದ್ದೇವೆ. ಇನ್ನೊಂದು ಸಂದರ್ಭದಲ್ಲಿ, ನಾವು ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಭಾವಿಸಿದ ವ್ಯಕ್ತಿಯೊಬ್ಬ ನಮ್ಮ ಮೇಲೆ ಆಕ್ರಮಣ ಮಾಡಿದರು ಎಂದು ತಿಳಿಸಿದ್ದಾರೆ.

    ಲಸಿಕಾ ಅಭಿಯಾನದಲ್ಲಿ ಆರೋಗ್ಯಾಧಿಕಾರಿಗಳಿಗೆ ಇರುವ ಸವಾಲುಗಳು ಎಂಥದ್ದು ಎಂಬುದನ್ನು ಈ ಎರಡು ವಿಡಿಯೋ ತೋರಿಸಿಕೊಟ್ಟಿದೆ. ಆದರೂ, ಅಧಿಕಾರಿಗಳು ಲಸಿಕೀಕರಣವನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನನ್ನು ಅಟ್ಟಾಡಿಸಿದ ಗ್ರಾಮಸ್ಥರು: ಸ್ವಕ್ಷೇತ್ರದಲ್ಲೇ ಮುಖಭಂಗ

    ಕೆಲವೇ ತಿಂಗಳ ಹಿಂದೆ ನಿಕ್ಕಿ ಗಲ್ರಾನಿ ಮನೆಯಲ್ಲಿ ಕೆಲ್ಸಕ್ಕೆ ಸೇರಿದ್ದ ಯುವಕನಿಂದ ನೀಚ ಕೃತ್ಯ..!

    ಕರೊನಾ 3ನೇ ಅಲೆ ತೀವ್ರಗೊಳ್ಳುವ ಭೀತಿಯ ನಡುವೆ ದೇಶದ ಜನತೆಗೆ ಶುಭ ಸೂಚನೆ ಕೊಟ್ಟ ಮುಂಬೈ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts