More

    ಗಂಟೆಗೆ 183 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಚಾಲನೆ: ಲೋಟದಲ್ಲಿ ತುಂಬಿಟ್ಟಿದ್ದ ನೀರು ಏನಾಯ್ತು ನೋಡಿ…

    ನವದೆಹಲಿ: ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಸ್ಥಿರತೆಯನ್ನು ಪರೀಕ್ಷೆ ಮಾಡಿರುವ ವಿಡಿಯೋ ಒಂದನ್ನು ಸದರನ್​ ರೈಲ್ವೆ ತನ್ನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಒಂದು ಗ್ಲಾಸ್​ನಲ್ಲಿ ಅದರ ತುದಿಯವರೆಗೂ ನೀರು ತುಂಬಿ, ಸೀಟ್​ ಮೇಲಿಟ್ಟು ಅದರ ಪಕ್ಕದಲ್ಲಿ ಸ್ಪೀಡ್​ ಟ್ರ್ಯಾಕರ್​ ಇಡಲಾಗಿದೆ. ರೈಲು ಗಂಟೆಗೆ 180 ರಿಂದ 183 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದರೂ ಗ್ಲಾಸ್​ನಲ್ಲಿದ್ದ ನೀರು ಅಲುಗಾಡಿತು ಹೊರತು ಒಂದೇ ಒಂದು ಹನಿ ನೀರು ಹೊರಗೆ ಚೆಲ್ಲಲಿಲ್ಲ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, 16 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ವಂದೇ ಭಾರತ್​ ಎಕ್ಸ್​ಪ್ರೆಸ್​ನಲ್ಲಿ ಒಮ್ಮೆ ಪ್ರಯಾಣದ ಅನುಭವ ಪಡೆಯಬೇಕೆಂದು ಬಯಸಿದ್ದಾರೆ.

    ಇನ್ನು ವಂದೇ ಭಾರತ್​ ಎಕ್ಸ್​ಪ್ರೆಸ್​ ಭಾರತೀಯ ರೈಲ್ವೆ ನಡೆಸುವ ಸ್ವಯಂ ಚಾಲಿತ ಇಎಮ್​ಯು ಸಾರಿಗೆಯಾಗಿದೆ. ಇದನ್ನು ಮೇಕ್ ಇನ್ ಇಂಡಿಯಾ ಅಭಿಯಾನದ ಬ್ಯಾನರ್ ಅಡಿಯಲ್ಲಿ ಚೆನ್ನೈನ ಪೆರಂಬೂರ್‌ನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ.

    ಸದ್ಯ ಎರಡು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ದೆಹಲಿ, ವಾರಾಣಸಿ ಮತ್ತು ಕರ್ತಾ ನಡುವೆ ಸಂಚರಿಸುತ್ತಿವೆ. ಶೀರ್ಘದಲ್ಲೇ ಮುಂಬೈ-ಅಹಮದಬಾದ್​ನಲ್ಲಿ ಸಂಚಾರ ಆರಂಭ ಮಾಡಲಿದೆ.

    ವಂದೇ ಭಾರತ್​ ರೈಲಿನ ವೈಶಿಷ್ಟ್ಯಗಳೇನು?
    1) ಹೊಸ ವಂದೇ ಭಾರತ್ ರೈಲುಗಳು ಸ್ವಯಂಚಾಲಿತ ಬಾಗಿಲು ತೆರೆಯುವಿಕೆಯನ್ನು ಒಳಗೊಂಡಿದೆ. ಚಲಿಸುವ ರೈಲುಗಳಿಂದ ಪ್ರಯಾಣಿಕರನ್ನು ಹತ್ತಲು ಅಥವಾ ಇಳಿಯಲು ಅನುಮತಿಸಲಾಗುವುದಿಲ್ಲ.
    2) ಚಾಲಕನ ಕ್ಯಾಬಿನ್ ನಲ್ಲಿ ಲೊಕೊ ಪೈಲಟ್‌ಗಳು ಆರಾಮದಾಯಕ ಕಾರ್ಯಾಚರಣಾ ಸ್ಥಳವನ್ನು ಹೊಂದಿರುತ್ತಾರೆ.
    3) ವಿಕಲಾಂಗ ಪ್ರಯಾಣಿಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಶೌಚಾಲಯಗಳು ಇರುತ್ತವೆ.
    4) ವಂದೇ ಭಾರತ್ ರೈಲನ್ನು ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಪರೀಕ್ಷಿಸಲಾಗುವುದು ಮತ್ತು 50,000 ಕಿಲೋಮೀಟರ್ ಪ್ರಯಾಣಿಸಲಾಗುವುದು. ರೈಲು ಸುಧಾರಿತ ವೇಗವರ್ಧನೆ ಮತ್ತು ಬ್ರೇಕಿಂಗ್ ಸಾಮರ್ಥ್ಯಗಳನ್ನು ಹೊಂದಿರುತ್ತದೆ.
    5) ಪರೀಕ್ಷೆಯು ಡೈನಾಮಿಕ್, ಸ್ಟ್ಯಾಟಿಕ್, ಲೋಡ್ ಪರೀಕ್ಷೆಗಳು ಮತ್ತು ವಿವಿಧ ಸಂದರ್ಭಗಳಲ್ಲಿ ಆಸಿಲೇಷನ್ ಪ್ರಯೋಗಗಳನ್ನು ಒಳಗೊಂಡಿರುತ್ತದೆ.
    6) ಎಲ್ಲಾ ಕೋಚ್‌ಗಳು ತುರ್ತು ಬೆಳಕಿನ ವ್ಯವಸ್ಥೆ, ಜಿಪಿಎಸ್-ಆಧಾರಿತ ಆಡಿಯೋ-ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನೆಗಾಗಿ ಆನ್‌ಬೋರ್ಡ್ ಹಾಟ್‌ಸ್ಪಾಟ್ ವೈ-ಫೈ ಮತ್ತು ಹೆಚ್ಚು ಆರಾಮದಾಯಕ ಆಸನಗಳನ್ನು ಹೊಂದಿವೆ.
    7) ಶೌಚಾಲಯಗಳು ಎಲ್ಲಾ ಜೈವಿಕವಾಗಿವೆ. ದೀಪವು ಡ್ಯುಯಲ್-ಮೋಡ್ ಆಗಿದೆ.
    8) ಪ್ರತಿ ಕೋಚ್‌ನಲ್ಲಿ ಪ್ಯಾಂಟ್ರಿ ಇರುತ್ತದೆ, ಅಲ್ಲಿ ಬಿಸಿ ಊಟ ಮತ್ತು ತಂಪು ಪಾನೀಯಗಳನ್ನು ನೀಡಬಹುದು. ಹೆಚ್ಚುವರಿ ಪ್ರಯಾಣಿಕರ ಸೌಕರ್ಯಕ್ಕಾಗಿ ಶಾಖ ಮತ್ತು ಶಬ್ದವನ್ನು ಕನಿಷ್ಠಕ್ಕೆ ಇರಿಸಲು ನಿರೋಧನವನ್ನು ವಿನ್ಯಾಸಗೊಳಿಸಲಾಗಿದೆ.
    9) ಈ ರೈಲುಗಳು ಪ್ಲಾಟ್‌ಫಾರ್ಮ್ ಬದಿಯ ಕ್ಯಾಮೆರಾಗಳು ಮತ್ತು ಹಿಂಬದಿಯ ಕ್ಯಾಮೆರಾಗಳೊಂದಿಗೆ ಸಜ್ಜುಗೊಳಿಸಲ್ಪಡುತ್ತವೆ. (ಏಜೆನ್ಸೀಸ್​)

    ATMನಲ್ಲಿ ಹಣ ಡ್ರಾ ಮಾಡುವಾಗ ಕೇಳಿಬಂತು ವಿಚಿತ್ರ ಶಬ್ದ: ಏನೆಂದು ತಿರುಗಿ ನೋಡಿದ ಮಹಿಳೆಗೆ ಕಾದಿತ್ತು ಶಾಕ್​

    ಸಚಿವ ಉಮೇಶ್​ ಕತ್ತಿ ನಿಧನ: ಗೌರವಾರ್ಥವಾಗಿ ರಾಜ್ಯಾದ್ಯಂತ ಇಂದು ಶೋಕಾಚರಣೆ

    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts