More

    VIDEO! ಮೂರು ಹುಲಿಗಳೊಂದಿಗೆ ಸೆಣಸಾಡಿ ಬದುಕುಳಿದ ಬೆಕ್ಕಿನ ಮರಿ: ಮೈನವಿರೇಳಿಸೋ ವಿಡಿಯೋ ಇದು!

    ದುಬೈ: ಯುನೈಟೆಡ್​ ಅರಬ್​ ಎಮಿರೆಟ್ಸ್​ ಪ್ರಮುಖ ನಗರಗಳಲ್ಲಿ ಒಂದಾದ ದುಬೈನ ಆಡಳಿತಾಗರ ಮೊಹಮ್ಮದ್​ ಬಿನ್​ ರಶೀದ್​ ಅಲ್​ ಮಕ್ತೌಮ್​ ಪುತ್ರಿಯಲ್ಲಿ ಒಬ್ಬರಾದ ಶೇಖ್​ ಲತೀಫಾ ಅವರು, ಮೂರು ಹುಲಿಗಳೊಂದಿಗೆ ಬೆಕ್ಕಿನ ಮರಿಯೊಂದು ಸೆಣಸಾಡುವ ಮೈನವಿರೇಳಿಸುವ ವಿಡಿಯೋಗಳನ್ನು ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ.

    ಲತೀಫಾ ಅವರು ಶೇರ್​ ಮಾಡಿರುವುದು ಸಿಟಿಟಿವಿ ವಿಡಿಯೋಗಳಾಗಿವೆ. ಹುಲಿಗಳಿರುವ ಜಾಗಕ್ಕೆ ಆಕಸ್ಮಿಕವಾಗಿ ಎಂಟ್ರಿ ನೀಡುವ ಬೆಕ್ಕಿನ ಮರಿಯನ್ನು ನೋಡಿ ಮೂರು ಹುಲಿಗಳು ಏಕಾಏಕಿ ದಾಳಿ ಮಾಡುತ್ತವೆ. ಯಾವುದಕ್ಕೂ ಹೆದರದ ಬೆಕ್ಕಿನ ಮರಿ, ಮೂರು ಹುಲಿಗಳೊಂದಿಗೆ ಸೆಣಸಾಡಿ ಕೊನೆಗೆ ಕೊನೆಗೆ ಇಬ್ಬರು ಕಾವಲುಗಾರರ ರಕ್ಷಣೆಯಿಂದ ಬದುಕುಳಿದಿದೆ.

    ಇನ್​ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿರುವ ಲತಿಫಾ, ಈ ಪುಟ್ಟ ಬೆಕ್ಕಿನ ಮರಿಯು ಹುಲಿಗಳಿರುವ ಬೋನಿನಲ್ಲಿ ಸಿಲುಕಿಕೊಂಡಿತ್ತು. ಕೆಚ್ಚದೆಯ ಬೆಕ್ಕು ಹುಲಿಗಳೊಂದಿಗೆ ಹೋರಾಡಿ ಕೊನೆಗೆ ಕಾವಲುಗಾರರಿಂದ ರಕ್ಷಣೆಗೆ ಒಳಗಾಗಿದೆ. ಇನ್ನು ಮುಂದೆ ಈ ಬೆಕ್ಕಿನ ಮರಿ ಸ್ವಲ್ಪವೂ ದಾರಿ ತಪ್ಪುವುದಿಲ್ಲ ಎಂದು ಲತಿಫಾ ಅವರು ಬರೆದುಕೊಂಡಿದ್ದಾರೆ.

    ಕಪ್ಪು ಮತ್ತು ಬಿಳಿ ಬಣ್ಣದ ಬೆಕ್ಕಿನ ಮರಿಯಾಗಿದ್ದು, ಹುಲಿಗಳ ದಾಳಿಗೆ ಸಿಲುಕಿ ತುಂಬಾ ಹೆದರಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ಹುಲಿಗಳು ಬಾಯಲ್ಲಿ ಕಚ್ಚಿ ಹಿಡಿದಿದ್ದರೂ ಬೆಕ್ಕಿನ ಮರಿಯಲ್ಲಿ ಬಾಹ್ಯವಾಗಿ ಯಾವುದೇ ಗಾಯಗಳಾಗಿರುವಂತೆ ಕಾಣುತ್ತಿಲ್ಲ. ಆದರೆ, ಆಂತರಿಕವಾಗಿ ಏನಾದರೂ ನೋವಾಗಿರಬಹುದಾ ಎಂದು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಸದ್ಯ ಬೆಕ್ಕಿನ ಮರಿ ಒಂದು ದೊಡ್ಡ ಅಪಾಯದಿಂದ ಪಾರಾಗಿದೆ.

    ಇನ್ನು ಶೇಖ್​ ಲತೀಫಾ ಅವರು ಪ್ರಾಣಿ ಪ್ರಿಯರು. ಆಗಾಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅನೇಕ ಪ್ರಾಣಿಗಳ ವಿಡಿಯೋಗಳನ್ನು ಅಪ್​​ಲೋಡ್​ ಮಾಡುತ್ತಿರುತ್ತಾರೆ. (ಏಜೆನ್ಸೀಸ್​)

     

     
     
     
     
     
    View this post on Instagram
     
     
     
     
     
     
     
     
     
     
     

     

    A post shared by Latifa Rashed Al Maktoum (@latifaalmaktoum)

    ಪೊಲೀಸ್​ ಠಾಣೆಯಿಂದ ಮನೆಗೆ ಬಂದು ಯುವತಿ ಆತ್ಮಹತ್ಯೆ: ಠಾಣೆಯಲ್ಲೇ ನಡೆಯಿತು ಮಹಾ ಪ್ರಮಾದ!

    ಅಪ್ಪು ಅಗಲಿಕೆ ನೋವು ಇನ್ನೂ ಮಾಸಿಲ್ಲ… ಈಗಲೇ ಇದೆಲ್ಲಾ ಬೇಕಿತ್ತಾ? ಸುಮಲತಾ ಅಂಬರೀಷ್​ ಬೇಸರ

    ಸಮಂತಾರ ಹಾದಿಯನ್ನೇ ಹಿಡಿದ ಪ್ರಿಯಾಂಕಾ ಚೋಪ್ರಾ! ಜಾಲತಾಣದಲ್ಲಿ ಸಿಡಿಯಿತು ಬಾಂಬ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts