ನೆಟ್ಟಿಗರ ಸಿಟ್ಟು… ವಾಹನ ಸವಾರನ ಸಮೇತ ಬೈಕ್​ ಟೋಯಿಂಗ್​ ಮಾಡಿದ ಸಿಬ್ಬಂದಿಗೆ ಶಾಕ್​..!

blank

ಪುಣೆ: ಮೋಟರ್​ ಸೈಕಲ್ ಜತೆಗೆ ವಾಹನ ಸವಾರನನ್ನು ಟೋಯಿಂಗ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟೋಯಿಂಗ್​ ಸಿಬ್ಬಂದಿ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು ನಾನ್​ ಪಾರ್ಕಿಂಗ್​​ ವಿಭಾಗದಲ್ಲಿ ನಿಲ್ಲಿಸಿದ್ದ ವಾಹನವನ್ನು ಟೋಯಿಂಗ್​ ಮಾಡಲು ಆರಂಭಿಸಿದಾಗ ಆತನೇ ಓಡಿಬಂದು ದ್ವಿಚಕ್ರ ವಾಹನದ ಮೇಲೇರಿದ ಎಂದು ತಿಳಿಸಿದ್ದಾರೆ. ​

ಈ ಘಟನೆ ಮಹಾರಾಷ್ಟ್ರದ ಪುಣೆಯ ನಾನಾಪೇಟ್​ ಏರಿಯಾದಲ್ಲಿ ಗುರುವಾರ ನಡೆದಿದೆ. ಸಮರ್ಥ್​ ಟ್ರಾಫಿಕ್​ ಶಾಖೆಯ ಪೊಲೀಸ್​ ಮ್ಯಾನ್​ಗಳು ಮತ್ತು ಗುತ್ತಿಗೆ ನೌಕರರು ಟೋಯಿಂಗ್​ ವ್ಯಾನ್​ನಿಂದ ನಾನ್​ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ ವಾಹನಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಸಂಚಾರ ಪೊಲೀಸ್​ ವಿಭಾಗದ ಡಿಸಿಪಿ ರಾಹುಲ್​ ಶ್ರೀರಾಮೆ ಹೇಳಿದ್ದಾರೆ.

ದ್ವಿಚಕ್ರ ವಾಹನವನ್ನು ಬಹುತೇಕ ಮೇಲೆತ್ತಲಾಗಿತ್ತು. ಅಷ್ಟರಲ್ಲಿ ಬೈಕ್​ ಸವಾರ ಬಂದು ಬೈಕ್​ ಮೇಲೇರಿದ. ಕೆಳಗೆ ಇಳಿಯುವಂತೆ ಪೊಲೀಸ್​ ಸಿಬ್ಬಂದಿ ಸಾಕಷ್ಟು ಮನವಿ ಮಾಡಿಕೊಂಡು. ಆದರೆ, ಆತ ಕೆಳಗಿಳಿಯಲಿಲ್ಲ. ಆತನ ಸಹ ಬೈಕ್​ ಕೆಳಗಿಳಿಸುವಂತೆ ಕೇಳಿಕೊಂಡ ಆದರೆ, ನಿಯಮ ಉಲ್ಲಂಘನೆ ಆಗಿರುವುದು ಸ್ಪಷ್ಟವಾದ್ದರಿಂದ ಸಿಬ್ಬಂದಿ ನಿರಾಕರಿಸಿದರು. ಬಳಿಕ ಬೈಕ್​ ಸವಾರನ ಸಮೇತ ವಾಹನವನ್ನು ವ್ಯಾನ್​ ಒಳಗಡೆ ಇಳಿಸಲಾಯಿತು ಎಂದು ಶ್ರೀರಾಮೆ ತಿಳಿಸಿದರು.

ಕೊನೆಗೆ ಸವಾರ ಕ್ಷಮೆಯಾಚಿಸಿ, ದಂಡವನ್ನು ಪಾವತಿಸಿದರು. ಇದೇ ವೇಳೆ ಬೈಕ್​ ಸವಾರ ಸಮೇತ ಟೋಯಿಂಗ್​ ಮಾಡಿದ ಗುತ್ತಿಗೆ ಸಿಬ್ಬಂದಿ ಮತ್ತು ತಂಡದ ಭಾಗವಾಗಿದ್ದ ಟ್ರಾಫಿಕ್ ಪೋಲೀಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು. (ಏಜೆನ್ಸೀಸ್​)

ವೆಹಿಕಲ್​ ಟೋಯಿಂಗ್​ ವಿಚಾರದಲ್ಲಿ ಗಲಾಟೆ: ಟೋಯಿಂಗ್ ಯುವಕರನ್ನು ಅಟ್ಟಾಡಿಸಿಕೊಂಡು ಥಳಿಸಿದ ಸಾರ್ವಜನಿಕರು

ತಾಲಿಬಾನ್​ ವಿರುದ್ಧ ತಿರುಗಿ ಬಿದ್ದ ಆಫ್ಘಾನ್ನರು: ಉಗ್ರರನ್ನು ಕೊಂದು 3 ಜಿಲ್ಲೆಗಳನ್ನು ಮರು ವಶಪಡಿಸಿಕೊಂಡ ಹೋರಾಟಗಾರರು

31ರ ಬಳಿಕ ತಾಲಿಬಾನ್ ಸರ್ಕಾರ: ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘನ್ ತೊರೆದ ಬಳಿಕ ನಿರ್ಧಾರ

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…