More

    ADGP ಅಲೋಕ್​ ಕುಮಾರ್​ ಎಚ್ಚರಿಕೆಗೆ ಹೆದರಿ ಕೋರ್ಟ್​ಗೆ ಶರಣಾದ ಭೀಮಾತೀರದ ಕುಖ್ಯಾತ ಹಂತಕನ ಪತ್ನಿ

    ವಿಜಯಪುರ: ಎಡಿಜಿಪಿ ಅಲೋಕ್​ ಕುಮಾರ್​ ಖಡಕ್​ ಎಚ್ಚರಿಕೆಗೆ ಹೆದರಿದ ಭೀಮಾತೀರದ ಕುಖ್ಯಾತ ಹಂತಕ ಮಲ್ಲಿಕಾರ್ಜುನ್ ಚಡಚಣನ ಪತ್ನಿ ವಿಮಲಾಬಾಯಿ ಚಡಚಣ ನ್ಯಾಯಾಲಯಕ್ಕೆ ಆಗಮಿಸಿ ಬಂದು ಶರಣಾಗಿದ್ದಾಳೆ.

    ವಿಜಯಪುರ 4ನೇ JMFC ನ್ಯಾಯಾಲಯಕ್ಕೆ ಆಗಮಿಸಿ ವಿಮಲಾಬಾಯಿ ಶರಣಾಗಿದ್ದಾಳೆ. 2020ರ ನವೆಂಬರ್ 2 ರಂದು ಮಹಾದೇವ ಸಾಹುಕಾರ ಬೈರಗೊಂಡ ಮೇಲೆ ನಡೆದ ದಾಳಿಯ ಬಳಿಕ ವಿಮಲಾಬಾಯಿ ಭೂಗತಳಾಗಿದ್ದಳು. ಕೆಲ ದಿನಗಳ ಹಿಂದಷ್ಟೇ ಅಲೋಕ್​ ಕುಮಾರ್​ ಅವರು ಭೂಗತರಾದ ಚಡಚಣ ಗ್ಯಾಂಗ್‌ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು.

    ಕೋರ್ಟ್​ ಮುಂದೆ ಶರಣಾಗಿ, ಇಲ್ಲದಿದ್ದರೆ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಭೀಮಾತೀರದ ಮಾಸ್ಟರ್ ಮೈಂಡ್ ನಟೋರಿಯಸ್ ಹಂತಕ ಮಲ್ಲಿಕಾರ್ಜುನ್ ಚಡಚಣ, ಆತನ ಪತ್ನಿ ವಿಮಲಾಬಾಯಿಗೆ ಅಲೋಕ್​ ಕುಮಾರ್​ ಖಡಕ್​ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಇಬ್ಬರ ವಿರುದ್ಧವು ಪೊಲೀಸ್​ ಇಲಾಖೆ ಉದ್ಘೋಷಣೆ ಸಹ‌ ಹೊರಡಿಸಿತ್ತು.

    ಇದೀಗ ಆಸ್ತಿ ಜಪ್ತಿಯಾಗುವ ಭಯದಿಂದ ವಿಮಲಾಬಾಯಿ ಹಾಗೂ ಸಹಚರ ಸೋನ್ಯಾ ರಾಠೋಡ ಕೋರ್ಟ್​ಗೆ ಹಾಜರಾಗಿದ್ದಾರೆ. ಮಹಾದೇವ ಬೈರಗೊಂಡ ಮೇಲೆ ನಡೆದ ದಾಳಿಯಲ್ಲಿ ವಿಮಲಾಬಾಯಿ ಎ2 ಹಾಗೂ ಸೋನ್ಯಾ ರಾಠೋಡ ಎ39 ಆರೋಪಿಯಾಗಿದ್ದಾರೆ. ಇಂದು ಇಬ್ಬರು ಬಂದು 4ನೇ JMFC ನ್ಯಾಯಾಲಯಕ್ಕೆ ಶರಾಗಿದ್ದಾರೆ.

    ADGP ಅಲೋಕ್​ ಕುಮಾರ್​ ಎಚ್ಚರಿಕೆಗೆ ಹೆದರಿ ಕೋರ್ಟ್​ಗೆ ಶರಣಾದ ಭೀಮಾತೀರದ ಕುಖ್ಯಾತ ಹಂತಕನ ಪತ್ನಿ
    ವಿಮಲಾಬಾಯಿ ಮತ್ತು ಸೋನ್ಯಾ ರಾಠೋಡ

    ನ್ಯಾಯಾಲಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಕೋರ್ಟ್​ನಿಂದ ಅನುಮತಿ ಪಡೆದ ಬಳಿಕ ಪೊಲೀಸರು, ವಿಮಲಾಬಾಯಿ ವಿಚಾರಣೆ ನಡೆಸಲಿದ್ದಾರೆ. ಮಹಾದೇವ ಸಾಹುಕಾರ ಬೈರಗೊಂಡ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಇಬ್ಬರನ್ನೂ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)

    ಇಬ್ಬರದ್ದು ಅಲ್ವಂತೆ, ಹಾಗಾದ್ರೆ ಮತ್ಯಾರದ್ದು!? ಭಾರೀ ಚರ್ಚೆ ಹುಟ್ಟು ಹಾಕಿದ ನಟಿ ಅರ್ಪಿತಾ ಹೇಳಿಕೆ

    ಕಾಬೂಲ್​ ದಾಳಿಯಲ್ಲಿ ಅಮೆರಿಕ ಉಡೀಸ್​ ಮಾಡಿದ ಈ ಭಯಾನಕ ಉಗ್ರ ಕರ್ನಾಟಕದಲ್ಲೂ ಫೇಮಸ್​! ಯಾಕೆ ಅಂತೀರಾ?

    ವೃದ್ಧರಿಬ್ಬರಿಗೆ ಬೆತ್ತಲೆ ವಿಡಿಯೋ ಕಾಲ್​ ಮಾಡಿ 3.63 ಲಕ್ಷ ರೂ. ವಸೂಲಿ ಮಾಡಿದ ಐನಾತಿ ಲೇಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts