More

    ಗಣೇಶನ ಮೇಲೆ ವಿಜಯಪುರದ ಮುಸ್ಲಿಂ PSIಗೆ ವಿಶೇಷ ಪ್ರೀತಿ! ಹಣೆಗೆ ತಿಲಕವಿಟ್ಟು ಭಕ್ತಿ ಮೆರೆದ ಆರೀಫ್ ಮುಶಾಪುರಿ

    ವಿಜಯಪುರ: ಗೌರಿಗಣೇಶ ಹಬ್ಬ ಬಂತೆಂದರೆ ಸಾಕು ಎಲ್ಲೆಡೆ ಸಂಭ್ರಮ, ಸಡಗರ ಮನೆ ಮಾಡುತ್ತದೆ. ಅದರಲ್ಲೂ ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳಲ್ಲಿಯೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಿಸುವುದು ವಾಡಿಕೆ. ಅದರಂತೆ ವಿಜಯಪುರ ನಗರದ ಗಾಂಧಿಚೌಕ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆಯ ಸಡಗರ ಕೊಂಚ ವಿಶೇಷವಾಗಿತ್ತು. ಏಕೆಂದರೆ, ಇಲ್ಲಿ ಗಣೇಶ ಮೂರ್ತಿ ಕೂರಿಸುವುದು ಮುಸ್ಲಿಂ ಧರ್ಮಕ್ಕೆ ಸೇರಿದ ಸಬ್ ಇನ್ಸ್​ಪೆಕ್ಟರ್​.

    ಗಣೇಶನ ಮೇಲೆ ವಿಜಯಪುರದ ಮುಸ್ಲಿಂ PSIಗೆ ವಿಶೇಷ ಪ್ರೀತಿ! ಹಣೆಗೆ ತಿಲಕವಿಟ್ಟು ಭಕ್ತಿ ಮೆರೆದ ಆರೀಫ್ ಮುಶಾಪುರಿ

    ಹೌದು, ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯ ಆರೀಫ್ ಮುಶಾಪುರಿ ಉತ್ಸಾಹದಿಂದಲೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಎಲ್ಲ ಸಿಬ್ಬಂದಿಗಳ ಜೊತೆಗೆ ತೆರಳಿ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ತಂದು ಸ್ಥಾಪಿಸಿದ್ದಾರೆ.

    ಗಣೇಶನ ಮೇಲೆ ವಿಜಯಪುರದ ಮುಸ್ಲಿಂ PSIಗೆ ವಿಶೇಷ ಪ್ರೀತಿ! ಹಣೆಗೆ ತಿಲಕವಿಟ್ಟು ಭಕ್ತಿ ಮೆರೆದ ಆರೀಫ್ ಮುಶಾಪುರಿ

    ಹಿಂದುಗಳಂತೆ ಹಣೆಗೆ ತಿಲಕ ಇಟ್ಟು, ಟೋಪಿ ಧರಿಸಿ ಗಣೇಶನ ಮೇಲಿನ ಭಕ್ತಿ ಮೆರೆದಿದ್ದಾರೆ. ಇತರರಲ್ಲೂ ಹಿಂದೂ-ಮುಸ್ಲಿಂ ಭಾವೈಕ್ಯತೆ ಮೂಡಿಸಿದ್ದಾರೆ. ಸದ್ಯ ಗಾಂಧಿಚೌಕ ಪೊಲೀಸ್ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಆಗಿರುವ ಆರೀಫ್ ಮುಶಾಪುರಿ, ಇದೇ ಮೊದಲ ಬಾರಿ ಏನು ಗಣೇಶನ ಮೂರ್ತಿ ಪ್ರತಿಷ್ಟಾಪಿಸಿಲ್ಲ. ಬದಲಿಗೆ ಕಳೆದ 6 ವರ್ಷಗಳಿಂದಲು ಗಣೇಶ ಚತುರ್ಥಿಯಂದು ಗಣೇಶನನ್ನ ಕೂರಿಸುತ್ತ ಬಂದಿದ್ದಾರೆ.

    ಗಣೇಶನ ಮೇಲೆ ವಿಜಯಪುರದ ಮುಸ್ಲಿಂ PSIಗೆ ವಿಶೇಷ ಪ್ರೀತಿ! ಹಣೆಗೆ ತಿಲಕವಿಟ್ಟು ಭಕ್ತಿ ಮೆರೆದ ಆರೀಫ್ ಮುಶಾಪುರಿ

    2010ರಲ್ಲಿ ಪಿಎಸ್ಐ ಆದ ಆರೀಫ್ ಮುಶಾಪೂರಿ ಕಳೆದ 6 ವರ್ಷಗಳ ಹಿಂದೆ ಬಾಗಲಕೋಟೆ-ವಿಜಯಪುರ ಜಿಲ್ಲೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯಪುರ ಗಾಂಧಿಚೌಕ, ಟ್ರಾಫಿಕ್​ನಲ್ಲಿ ಕೆಲಸ ಮಾಡಿದ್ದಾರೆ. ಪ್ರತಿವರ್ಷ ಗಣೇಶ ಚತುರ್ಥಿಯಂದು ತಾವಿರುವ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪಿಸುತ್ತಾರೆ. ಹಣೆಗೆ ನಾಮ ಹಾಕಿ, ಟೋಪಿ ಹಾಕಿ ಯಾವುದೇ ಭೇದ-ಭಾವ ಇಲ್ಲದೆ ಗಣೇಶ ಚತುರ್ಥಿ ಆಚರಿಸುತ್ತ ಬಂದಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಂ ಭಾತೃತ್ವಕ್ಕೆ ಸಾಕ್ಷಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ನಿಯಮ ಉಲ್ಲಂಘನೆಯೇ ಸ್ಫೂರ್ತಿ: 12.51 ಕೋಟಿ ರೂ. ಗುತ್ತಿಗೆಗಿಲ್ಲ ಟೆಂಡರ್, ಯೋಜನೆ ಅನುಷ್ಠಾನದಲ್ಲಿ ಅಕ್ರಮ ಆರೋಪ

    ಡಬಲ್​ಡೆಕ್ಕರ್ ಎಂಬ ಸಾರಿಗೆ ರಾಜನ ನೆನಪುಗಳು..

    ಕಾಶಿಯಾತ್ರೆಗೆ ಪ್ರಮೋದ್ ಶೆಟ್ಟಿ; ಶಿಕಾರಿ ಬಳಿಕ ಮತ್ತೆ ಹೀರೋ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts