More

    ನಿಮಗೆ ದುಡ್ಡು ಬೇಕು, ನಮಗೆ ಜನ ಬೇಕು..ದಯಮಾಡಿ ಜನರನ್ನು ಬದುಕಿಸಿ ಎಂದು ಕೈ ಮುಗಿದ ಇನ್ಸ್​ಪೆಕ್ಟರ್​!

    ವಿಜಯನಗರ: ಲಾಕ್​ಡೌನ್​ ಸಂದರ್ಭದಲ್ಲಿ ಅನಗತ್ಯವಾಗಿ ಹೊರ ಬಂದವರನ್ನು ಬಿಡಿಸಲು ಬಂದ ಕುಟುಂಬಸ್ಥರಿಗೆ ಪೊಲೀಸ್​ ಇನ್ಸ್​ಪೆಕ್ಟರ್​ ಕೈ ಮುಗಿದ ಬೇಡಿಕೊಂಡ ಘಟನೆ ಹೊಸಪೇಟೆಯ ಉದ್ಯೋಗ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

    ಸರ್​ ನನ್ನ ತಮ್ಮನನ್ನು ಬಿಟ್ಟುಬಿಡಿ ಎಂದು ವ್ಯಾಪಾರಿಯೊಬ್ಬರು ಕೇಳಿಕೊಂಡು ಬಂದಿದ್ದರು. ಈ ವೇಳೆ ಮಾತನಾಡಿದ ಇನ್ಸ್​ಪೆಕ್ಟರ್​, ದಯಮಾಡಿ ನಿಮಗೆ ಕೈ ಮುಗಿದು ಕೇಳುವೆ ಜನರನ್ನು ಬದುಕಿಸಿ ಎಂದರು.

    ನಿಮಗೆ ದುಡ್ಡು ಬೇಕು, ನಮಗೆ ಜನ ಬೇಕು. ನಾವು ಕೂಡ ಹೆಂಡತಿ ಮಕ್ಕಳನ್ನು ಬಿಟ್ಟು ಸಮಾಜಕ್ಕಾಗಿ ಬಂದಿದ್ದೇವೆ. ಜನ ಮತ್ತು ಇಡೀ ಸಮಾಜ ಬದುಕಬೇಕಿದೆ, ದಯಮಾಡಿ ನಿಯಮ ಪಾಲಿಸಿ ಎಂದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಶ್ರೀನಿವಾಸ್​ ಕೈ ಮುಗಿದರು.

    ಕಠಿಣ ಲಾಕ್​​ಡೌನ್ ಹಿನ್ನೆಲೆಯಲ್ಲಿ ಅನಗತ್ಯವಾಗಿ ಹೊರ ಬಂದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರೊನಾ ಕಂಟ್ರೋಲ್​ಗೆ ಹೊಸಪೇಟೆಯಲ್ಲಿ ಎರಡನೇ ದಿನ ಬಿಗಿ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸರು ಹೊರಗಡೆ ಕುಳಿತಿದ್ದವರನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಲಾಕ್‌ಡೌನ್‌ನಿಂದ ಬೀದಿಗೆ ಬಂದ ಹಂಪಿಯ 100 ಮಂದಿ ಗೈಡ್ಸ್‌ ನೆರವಿಗೆ ಧಾವಿಸಿದ ಸುಧಾ ಮೂರ್ತಿ

    ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳ ದಾಂಧಲೆ, 17ಕ್ಕೂ ಹೆಚ್ಚು ವಾಹನ ಜಖಂ, ಅಶಾಂತಿ ಸೃಷ್ಟಿಗೆ ಯತ್ನ

    ಪರಸ್ತ್ರೀ ಜತೆ ಯುವಕನ ಸಲ್ಲಾಪ! ಸೆಕ್ಸ್​ ಮಾಡುತ್ತಿರುವಾಗಲೇ ಸಿಕ್ಕಿಬಿದ್ದ ಜೋಡಿ… ಕ್ಷಣಾರ್ಧದಲ್ಲೇ ನಡೆಯಿತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts