More

    ಉಪರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ, ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

    ನವದೆಹಲಿ: ನೂತನ ಉಪ ರಾಷ್ಟ್ರಪತಿ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯ ಮತದಾನ ಇಂದು ಬೆಳಗ್ಗೆ 10 ಗಂಟೆಗೆ ಸಂಸತ್ತಿನಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮತವನ್ನು ಚಲಾಯಿಸಿದರು.

    ಉಪರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ, ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

    ಸಂಸತ್ತಿನ ಉಭಯ ಸದನಗಳ ಸದಸ್ಯರು ಮತದಾನ ಮಾಡುತ್ತಿದ್ದಾರೆ. ಎನ್​ಡಿಎ ಕೂಟದ ಅಭ್ಯರ್ಥಿ ಜಗದೀಪ್ ಧನಕರ್ ಮತ್ತು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ಕಣದಲ್ಲಿದ್ದಾರೆ. ಮತದಾರರ ಬಲಾಬಲ ಎನ್​ಡಿಎ ಪರವಾಗಿ ಇರುವುದರಿಂದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಧನಕರ್ ಸುಲಭವಾಗಿ ಜಯಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

    ಆಳ್ವಾರನ್ನು ಆಯ್ಕೆ ಮಾಡುವಾಗ ಸಮಾಲೋಚನೆ ನಡೆಸಲಿಲ್ಲವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪಿಸಿರುವುದರಿಂದ ಪ್ರತಿಪಕ್ಷಗಳಲ್ಲಿ ಬಿರುಕು ಉಂಟಾದಂತೆ ಕಾಣಿಸುತ್ತಿದೆ. ಕಾಂಗ್ರೆಸ್​ನ ಹಿರಿಯ ನಾಯಕಿಯಾಗಿದ್ದ 80 ವರ್ಷದ ಆಳ್ವಾ, ರಾಜಸ್ಥಾನ ಮತ್ತು ಉತ್ತರಾಖಂಡದ ರಾಜ್ಯಪಾಲರಾಗಿದ್ದ ಅನುಭವಿಯಾಗಿದ್ದಾರೆ. 71 ವರ್ಷದ ಧನಕರ್ ರಾಜಸ್ಥಾನದ ಜಾಟ್ ನಾಯಕರಾಗಿದ್ದು ಸಮಾಜವಾದಿ ಹಿನ್ನೆಲೆ ಹೊಂದಿದ್ದಾರೆ. ಆಮ್ ಆದ್ಮಿ ಪಕ್ಷ (ಆಪ್) ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬೆಂಬಲ ಸಾರಿದ ಎರಡು ದಿನಗಳ ನಂತರ, ಶುಕ್ರವಾರ ಇನ್ನೊಂದು ಪ್ರಾದೇಶಿಕ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ವಿಪಕ್ಷ ಹುರಿಯಾಳು ಆಳ್ವಾರಿಗೆ ಬೆಂಬಲ ಘೋಷಿಸಿದೆ. ಎಐಎಂಐಎಂ ಕೂಡ ಬೆಂಬಲಿಸಿದೆ.

    ಜೆಡಿಯು, ವೈಎಸ್​ಆರ್​ಸಿಪಿ, ಬಿಎಸ್​ಪಿ, ಎಐಎಡಿಎಂಕೆ ಮತ್ತು ಶಿವಸೇನಾದಂಥ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನೂ ಗಳಿಸಿರುವ ಎನ್​ಡಿಎ ಉಮೇದುವಾರ ಧನಕರ್ ಸರಾಗ ವಿಜಯಕ್ಕೆ ಅಗತ್ಯವಾದ 515 ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಆಳ್ವಾರಿಗೆ 200ಕ್ಕೂ ಅಧಿಕ ಮತಗಳು ಲಭಿಸುವ ಸಾಧ್ಯತೆ ಇದೆ. ಹಾಲಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಧಿಕಾರಾವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ.

    ಸಿಎಂ ಬಸವರಾಜ ಬೊಮ್ಮಾಯಿಗೆ ಕರೊನಾ ಪಾಸಿಟಿವ್​: ಕೊನೇ ಕ್ಷಣದಲ್ಲಿ ದೆಹಲಿ ಪ್ರವಾಸ ರದ್ದು

    VIDEO| ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿರುವ TRS ಪಕ್ಷದ ಈ ಸಾಂಗ್ ವೈರಲ್ ಆಗ್ತಿದೆ!

    ಇಂದಿನಿಂದ ಬಿಗ್ ಬಾಸ್ ಓಟಿಟಿ; ವೂಟ್ ಸೆಲೆಕ್ಟ್​ನಲ್ಲಿ ರಾತ್ರಿ 7ಕ್ಕೆ ಗ್ರಾಂಡ್ ಪ್ರೀಮಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts