More

    ಕೊನೆಗೂ ಉಸ್ತುವಾರಿ ಸಚಿವರಾಗಲೇ ಇಲ್ಲ: ಖಾತೆಗಿಂತ ಉಸ್ತುವಾರಿ ಮುಖ್ಯ ಎನ್ನುತ್ತಿದ್ದರು ಉಮೇಶ್​ ಕತ್ತಿ

    ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತ‌ನದ ಬಳಿಕ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಳ್ಳಲು ದಿ. ಉಮೇಶ ಕತ್ತಿ ಹರಸಾಹಸ ಪಟ್ಟಿದ್ದರು.

    ಅವತ್ತಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಖಾಲಿಯಾದ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಸಿಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಕೊನೆಯ ಗಳಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಹಿಸಲಾಯಿತು. ‌ಇದರಿಂದ ಸ್ವಲ್ಪ ಬೇಜಾರ ಮಾಡಿಕೊಂಡಿದ್ದರು.

    ತದನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಹಲವು ಖಾತೆಗಳು, ಜಿಲ್ಲಾ ಉಸ್ತುವಾರಿಗಳು ಅದಲು‌ ಬದಲಾದವು. ಆಗ ಉಮೇಶ ಕತ್ತಿ ಅವರಿಗೆ ಬೆಳಗಾವಿ ಬದಲಾಗಿ ಬಾಗಲಕೋಟೆ ಉಸ್ತುವಾರಿ ನೀಡಲಾಯಿತು. ಆದರೂ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮುಂದುವರಿಸಿದ್ದರು.

    ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಖಾತೆಗಿಂತ ಉಸ್ತುವಾರಿ ಮುಖ್ಯ ಎನ್ನುತ್ತಿದ್ದರು. ಆದರೆ, ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರಾಗುವ ನಿರೀಕ್ಷೆಯಲ್ಲಿಯೇ ಎಲ್ಲರನ್ನು ಬಿಟ್ಟು ಅಗಲಿದ್ದಾರೆ.

    ಸಚಿವ ಉಮೇಶ್​ ಕತ್ತಿ ನಿಧನ: ಗೌರವಾರ್ಥವಾಗಿ ರಾಜ್ಯಾದ್ಯಂತ ಇಂದು ಶೋಕಾಚರಣೆ

    ಜೀವರಕ್ಷಕ ಸೀಟ್ ಬೆಲ್ಟ್​ಗಳು ಹೇಗೆ ರಕ್ಷಿಸುತ್ತವೆ? ಇಲ್ಲಿದೆ ಸಂಪೂರ್ಣ ವಿವರ…

    ಸಚಿವ ಉಮೇಶ್​ ಕತ್ತಿ ವಿಧಿವಶ: ಮಾಜಿ ಸಿಎಂ ಬಿಎಸ್​ವೈ ಸೇರಿದಂತೆ ರಾಜಕೀಯ ಗಣ್ಯರಿಂದ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts