More

    ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಕೊನೆ ಎಂದು? ಹೊರಬಿತ್ತು ಸ್ಫೋಟಕ ಮಾಹಿತಿ!

    ಕೀಯೆವ್​/ಮಾಸ್ಕೋ: ಫೆಬ್ರವರಿ 24 ರಂದು ಆರಂಭವಾದ ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧ ಜಾಗತಿಕವಾಗಿ ತಲ್ಲಣ ಉಂಟುಮಾಡಿದೆ. ಅದಕ್ಕೆ ಭಾರತವೂ ಹೊರತಾಗಿಲ್ಲ. ಯುದ್ಧ ಸೈಡ್​ ಎಫೆಕ್ಟ್​ನಿಂದಾಗಿ ಭಾರತದಲ್ಲಿ ತೈಲ ಬೆಲೆಯ ಜತೆಗೆ ಖಾದ್ಯ ತೈಲ ಹಾಗೂ ಗೋಧಿ ಬೆಳೆ ಸೇರಿದಂತೆ ಇನ್ನಿತರ ವಸ್ತುಗಳ ದುಬಾರಿಯಾಗಿದೆ. ಇನ್ನು ಯುದ್ಧ ಪೀಡಿತ ಯೂಕ್ರೇನ್​ನಲ್ಲಿ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ಇಷ್ಟು ಹೀನಾಯವಾಗಿರುವಾಗ ಯುದ್ಧ ಯಾವಾಗ ಮುಗಿಯುತ್ತದೆ ಎಂದು ಇಡೀ ಜಗತ್ತು ಆಸೆಗಣ್ಣಿನಿಂದ ಎದರು ನೋಡುತ್ತಿದೆ. ಇದೀಗ ಯುದ್ಧದ ಅಂತ್ಯದ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

    ಯೂಕ್ರೇನ್​ನಲ್ಲಿ ಅಟ್ಟಹಾಸ ಮುಂದುವರಿಸಿರುವ ರಷ್ಯಾ ಮೇ ತಿಂಗಳ 9ಕ್ಕೆ ಯುದ್ಧವನ್ನು ಅಂತ್ಯಗೊಳಿಸಲು ಬಯಸಿರುವುದಾಗಿ ವರದಿಯಾಗಿದೆ. ಈ ವಿಚಾರವನ್ನು ಸ್ವತಃ ಯೂಕ್ರೇನ್​ ಸೇನೆಯೇ ತಿಳಿಸಿದೆ.

    ಯೂಕ್ರೇನ್​ ರಾಜಧಾನಿ ಕೀಯೆವ್​ ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ, ಮೇ 9ಕ್ಕೆ ಯುದ್ಧವನ್ನು ಅಂತ್ಯಗೊಳಿಸುವುದಾಗಿ ರಷ್ಯಾ ಸೇನಾ ಪಡೆ ತಿಳಿಸಿರುವುದಾಗಿ ಯೂಕ್ರೇನ್‌ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ನ ಗುಪ್ತಚರ ಮೂಲಗಳು ಹೇಳಿಕೊಂಡಿವೆ. ಮೇ 9ರ ದಿನಾಂಕವನ್ನು ರಷ್ಯಾದಲ್ಲಿ ನಾಜಿ ಜರ್ಮನಿಯ ವಿಜಯದ ದಿನವಾಗಿ ವ್ಯಾಪಕವಾಗಿ ಆಚರಿಸಲಾಗುತ್ತದೆ.

    ಇದೇ ಸಂದರ್ಭದಲ್ಲಿ ರಷ್ಯಾ ವಿರುದ್ಧ ಆರೋಪ ಮಾಡಿರುವ ಯೂಕ್ರೇನ್​, ತನ್ನ ಸಾವಿರಾರು ನಾಗರಿಕರನ್ನು ರಷ್ಯಾ ಬಲವಂತವಾಗಿ ಕರೆದೊಯ್ದಿದೆ ಎಂದು ಯೂಕ್ರೇನ್ ಆರೋಪಿಸಿದೆ. ಯುದ್ಧವನ್ನು ತ್ಯಜಿಸುವಂತೆ ಯೂಕ್ರೇನ್​ಗೆ ಒತ್ತಡ ಹೇರಲು ಕೆಲವರನ್ನು ಒತ್ತೆಯಾಳುಗಳಾಗಿ ಬಳಸಿಕೊಳ್ಳಲಿದ್ದಾರೆ ಎಂದು ಯೂಕ್ರೇನ್​ ರಷ್ಯಾ ವಿರುದ್ಧ ಮತ್ತೊಂದು ಆರೋಪವನ್ನು ಮಾಡಿದೆ.

    84,000 ಮಕ್ಕಳು ಸೇರಿದಂತೆ 402,000 ಜನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ರಷ್ಯಾ ಕರೆದೊಯ್ದಿದೆ ಎಂದು ಯೂಕ್ರೇನ್‌ನ ಸರ್ಕಾರಿ ಅಧಿಕಾರಿ ಲ್ಯುಡ್ಮಿಲಾ ಡೆನಿಸೋವಾ ಆರೋಪಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಆದರೆ, ಈ ಆರೋಪವನ್ನು ರಷ್ಯಾ ಅಲ್ಲಗೆಳೆದಿದೆ. ಮತ್ತೊಂದೆಡೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಯೂಕ್ರೇನ್‌ಗೆ ಹೊಸ ಒಪ್ಪಂದ ಮತ್ತು ಮಾನವೀಯ ನೆರವು ನೀಡುವುದಾಗಿ ವಾಗ್ದಾನ ಮಾಡಿದೆ.

    ಯೂಕ್ರೇನ್​ ನ್ಯಾಟೋ ಪಡೆಯವನ್ನು ಸೇರುವುದರನ್ನು ವಿರೋಧಿಸಿ ಫೆ. 24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಯುದ್ಧ ಘೋಷಣೆ ಮಾಡಿದರು. ಅಂದಿನಿಂದ ಯುದ್ಧ ಮಂದುವರಿದುಕೊಂಡು ಬಂದಿದ್ದು, ಒಂದು ತಿಂಗಳೇ ಕಳೆದಿದೆ. ಈಗಾಗಲೇ ಯೂಕ್ರೇನ್​ನ ಬಹುತೇಕ ಭಾಗವನ್ನು ರಷ್ಯಾ ನಾಶಮಾಡಿದೆ. ಅಲ್ಲಿನ, ಬಹುತೇಕ ನಾಗರಿಕರು ಸಮೀಪದ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ರಷ್ಯಾ ನಡೆಯನ್ನು ವಿರೋಧಿಸಿರುವ ಅನೇಕ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಯಾವಾಗ ಯುದ್ಧ ಮುಗಿಯುತ್ತದೆ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದ ಜನರಿಗೆ ಇದೀಗ ಹೊಸ ಭರವಸೆಯೊಂದು ಸಿಕ್ಕಿದೆ. (ಏಜೆನ್ಸೀಸ್​)

    ಅಪರಿಚಿತನ ಕೈಗೆ ATM ಕಾರ್ಡ್​ ಕೊಟ್ಟು 500 ರೂ. ಡ್ರಾ ಮಾಡಿಸ್ಕೊಂಡು ಮನೆಗೆ ಬಂದ ವ್ಯಕ್ತಿಗೆ ಮರುದಿನವೇ ಕಾದಿತ್ತು ಶಾಕ್​!

    ಸಿನಿಮಾ ನೋಡ್ಕೊಂಡು ಆಟೋ ಹತ್ತಿದ ವೈದ್ಯೆ ಮೇಲೆ ಗ್ಯಾಂಗ್​ರೇಪ್: ಇಬ್ಬರು ಅಪ್ರಾಪ್ತರು ಸೇರಿ ಐವರು ಅಂದರ್​​

    ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತಕ್ಕೆ ಬೇಡಿಕೆ: ಸಿಎಂ ಕೇಜ್ರಿವಾಲ್​ ಉತ್ತರ ಕೇಳಿ ದಂಗಾದ ಬಿಜೆಪಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts