More

    ಉದ್ಘಾಟನೆಯಾದ ಎರಡೇ ದಿನಕ್ಕೆ ಇಬ್ಭಾಗವಾದ ಮಲ್ಪೆ ಬೀಚ್​ ತೇಲುವ ಸೇತುವೆ: ದುರಸ್ಥಿಯ ಬಳಿಕ ಮತ್ತೆ ಬಳಕೆಗೆ ಲಭ್ಯ

    ಉಡುಪಿ: ಮಲ್ಪೆ ಬೀಚ್​ನಲ್ಲಿ ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಾಣವಾಗಿದ್ದ ತೇಲುವ ಸೇತುವೆ ಎರಡೇ ದಿನಕ್ಕೆ ಸಮುದ್ರ ಪಾಲಾಗಿದೆ. ಮುರಿದು ಹೋಗಿರುವ ತೇಲುವ ಸೇತುವೆ ವಿಡಿಯೋ ತುಣುಕೊಂದು ಸದ್ಯ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ.

    ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ನಿರ್ಮಾಣವಾಗಿದ್ದ ತೇಲುವ ಸೇತುವೆ, ಮಲ್ಪೆ ಬೀಚ್​ನ ಪ್ರಮುಖ ಆಕರ್ಷಣೆಯಾಗುವ ಹಂತದಲ್ಲಿತ್ತು. ಸದ್ಯ ಸೇತುವೆಗೆ ಅಳವಡಿಸಲಾದ ತೇಲುವ ಇಂಟರ್ ಲಾಕಿಂಗ್ ಪ್ಲೇಟ್ ನಿರಂತರವಾಗಿ ಹೊಡೆಯುವ ಅಲೆಗಳ ರಭಸಕ್ಕೆ ಮುರಿದು ದಡ ಸೇರಿವೆ.

    ಸಮುದ್ರದ ತೆರೆಗಳ ಮೇಲೆ ತೇಲಿ ಸಾಗುವ ಹಾಗಿದ್ದ ಸೇತುವೆಯು ಅಲೆಗಳ ರಭಸ ತಡೆದುಕೊಳ್ಳಲಾಗಿದೆ ಮುರಿದು ಹೋಗಿದೆ. ಕಳೆದ ಶುಕ್ರವಾರವಷ್ಟೆ ಮಲ್ಪೆ ಬೀಚ್​ನಲ್ಲಿ ನಿರ್ಮಾಣವಾಗಿದ್ದ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದ್ದರು.

    100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದ್ದು, ಕರ್ನಾಟಕವನ್ನು ಹೊರತುಪಡಿಸಿದರೆ ಕೇರಳ ರಾಜ್ಯದ ಬೇಫೂರ್ ಬೀಚ್​ನಲ್ಲಿ ಈಗಾಗಲೇ ತೇಲುವ ಸೇತುವೆಯನ್ನು ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಿಸಲಾಗಿದೆ. ಸದ್ಯ ಸೇತುವೆಯ ದುರಸ್ಥಿ ಕಾರ್ಯವು ಕೂಡ ನಡೆಯುತ್ತಿದ್ದು ಶೀಘ್ರದಲ್ಲೆ ಪ್ರವಾಸಿಗರ ಬಳಕೆಗೆ ತೇಲುವ ಸೇತುವೆ ಲಭ್ಯವಾಗಲಿದೆ ಎನ್ನಲಾಗಿದೆ.

    ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಉಡುಪಿ ಜಿಲ್ಲಾಡಳಿತ ಸೈಕ್ಲೋನ್ ಎಫೆಕ್ಟ್ ಮತ್ತು ಭಾರೀ ಗಾಳಿಯಿಂದಾಗಿ ತೇಲುವ ಸೇತುವೆಗೆ ಯಾವುದೇ ಹಾನಿಯಾಗದಂತೆ ನಾವು ಸೇತುವೆಯ ಕೊಂಡಿಗಳ ಸಂಪರ್ಕ ಕಡಿತಗೊಳಿಸಿದ್ದೇವೆ. ಇದರಿಂದಾಗಿ ಇಂದು ಬೆಳಗ್ಗೆ ಸೇತುವೆಯ ಕೆಲವು ಬ್ಲಾಕ್‌ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಸಾವು-ನೋವು ಸಂಭವಿಸಿದೆ ಎಂದು ಜನರು ವದಂತಿಗಳಿಗೆ ಹಬ್ಬಿಸಿದ್ದಾರೆ ಎಂದು ಅರ್ಥಮಾಡಿಕೊಂಡಿದ್ದೇವೆ. ಯಾವುದೇ ಪ್ರಾಣಹಾನಿಯಾಗಿಲ್ಲ ಅಥವಾ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ನಾವು ಬಲವಾಗಿ ದೃಢೀಕರಿಸುತ್ತೇವೆ. ಪ್ರಸ್ತುತ ತೇಲುವ ಸೇತುವೆಯನ್ನು ಮುಚ್ಚಲಾಗಿದೆ. ಯಾವುದೇ ಜಲಕ್ರೀಡೆ ಚಟುವಟಿಕೆಗಳು ನಡೆಸದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮೋಹಕ ತಾರೆ ಜತೆಗಿರುವ ಯುವಕನ್ಯಾರು? ಮತ್ತೊಮ್ಮೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ ನಟಿ ರಮ್ಯಾ!

    ವಧು ಪೊಲೀಸ್ ಅಧಿಕಾರಿ- ವರ ಕುಖ್ಯಾತ ಖದೀಮ: ಎಂಗೇಜ್‌ಮೆಂಟ್‌ ಆದೊಡನೆ ನಡೆಯಿತು ಅಸಲಿ ಆಟ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts