More

    ಪಾವಗಡದಲ್ಲಿ ಸಂಭವಿಸಿದ ಭೀಕರ ಬಸ್​ ಅಪಘಾತಕ್ಕೆ ಪ್ರಮುಖ ನಾಲ್ಕು ಕಾರಣಗಳು ಹೀಗಿವೆ….

    ತುಮಕೂರು: ಚಾಲಕನ ಅಜಾಗರೂಕತೆಯಿಂದ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಪಳವಳ್ಳಿ ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್​, ರಸ್ತೆ ಡಿವೈಡರ್ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲರೂ ಶಾಲಾ-ಕಾಲೇಜು ವಿದ್ಯಾರ್ಥಿಗಳಾಗಿದ್ದು, ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಅಲ್ಲದೆ, ಈ ಘಟನೆ ರಾಜ್ಯದ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

    ಪಾವಗಡದ ಬಳಿ ಬಸ್ ಅಪಘಾತಕ್ಕೆ ಈ ಕಳಗಿನ ನಾಲ್ಕು ಅಂಶಗಳೇ ಪ್ರಮುಖ ಕಾರಣಗಳಾಗಿವೆ…

    ಮೊದಲನೆಯ ಕಾರಣ ಚಾಲಕನ ಅಜಾಗರುಕತೆ. ಎಸ್.ವಿ.ಟಿ ಬಸ್ ಚಾಲಕ ತನ್ನ ಜವಬ್ದಾರಿ ಮರೆತು ಬಸ್​ ಚಲಾಯಿಸಿದ್ದೇ ಭೀಕರ ಅಪಘಾತಕ್ಕೆ ಕಾರಣ. ಅಲ್ಲದೆ, ತಿರುವು ರಸ್ತೆಯಲ್ಲಿ ನಿಧಾನವಾಗಿ ಬಸ್ ಓಡಿಸುವಂತೆ ಪ್ರಯಾಣಿಕರು‌ ಹೇಳಿದ್ರು ವೇಗವಾಗಿ ಚಾಲನೆ ಮಾಡಿದರ ಪರಿಣಾಮ ಬಸ್​ ಕಂಟ್ರೋಲ್ ಸಿಗದೆ ಪಲ್ಟಿಯಾಗಿದೆ.

    ಎರಡನೆಯ ಕಾರಣ ವೈ.ಎನ್ ಹೊಸಕೋಟೆ ಪೊಲೀಸರಿಂದ ಎರಡು ಬಸ್ ಸೀಜ್ ಆಗಿದ್ದು, ಎರಡು ದಿನದ ಹಿಂದೆ ದಾಖಲಾತಿ ಸರಿಯಿಲ್ಲದ ಕಾರಣ ವೈ.ಎನ್​. ಪೊಲೀಸರು ಎರಡು ಬಸ್ ಸೀಜ್ ಮಾಡಿದ್ದರು. ವೈ.ಎನ್ ಹೊಸಕೋಟೆ-ಪಾವಗಡಕ್ಕೆ ಪ್ರತಿದಿನ ಸಂಚಾರ ಮಾಡುತ್ತಿದ್ದ ಬಸ್​ಗಳನ್ನು ಸೀಜ್ ಮಾಡಿದ್ದಕ್ಕೆ ಎಸ್.ವಿ.ಟಿ ಬಸ್​ಗೆ ಪ್ರಯಾಣಿಕ ಸಂಖ್ಯೆ ಹೆಚ್ಚಾಗಿದ್ದು, ಅಪಘಾತಕ್ಕೆ ಕಾರಣ.

    ಕಾರಣ ಮೂರು ಪಳವಳ್ಳಿ ಕಟ್ಟೆ ಬಳಿ ರಸ್ತೆ ಸೂಚನ ಫಲಕಗಳ ಆಳವಡಿಸದ ಪಿಡಬ್ಲ್ಯೂಡಿ ಇಲಾಖೆ. ಪಳವಳ್ಳಿ ಕಟ್ಟೆ ಅಪಘಾತ ವಲಯವಾಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಹೀಗಿದ್ದರು ಪಿಡಬ್ಲ್ಯೂಡಿ ಅಧಿಕಾರಿಗಳು ಅಪಘಾತವಲಯ ಎಂದು ಸೂಚನಾ ಫಲಕ, ಹಮ್ಸ್ ಅಳವಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ.

    ಕೊನೆಯ ಹಾಗೂ ನಾಲ್ಕನೇ ಕಾರಣ ಏನೆಂದರೆ, ಸರ್ಕಾರಿ ಬಸ್​ಗಳ ಓಡಾಟದ ಕೊರತೆ. ಪಾವಗಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ಖಾಸಗಿ ಬಸ್​ಗಳ ಓಡಾಟವಿದ್ದು, ಸರ್ಕಾರಿ ಬಸ್​ಗಳ ಕೊರತೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ ಓಡಾಟ ನಡೆಸಿದ್ದರೆ ಅಪಘಾತ ಹಾಗೂ ಸಾವು-ನೋವು ತಡೆಗಟ್ಟ ಬಹುದಿತ್ತು. (ದಿಗ್ವಿಜಯ ನ್ಯೂಸ್​)

    ಅಯ್ಯೋ ದುರ್ವಿಧಿಯೇ! ಬಿರುಗಾಳಿಯಿಂದ ಚಲಿಸುತ್ತಿದ್ದ ಬೈಕ್​ ಮೇಲೆ ತೆಂಗಿನ ಮರ ಬಿದ್ದು ಬಾಲಕಿ ಸಾವು

    ಸಮಂತಾ ಜತೆಗಿರೋ ವಿದೇಶಿ ವ್ಯಕ್ತಿ ಯಾರು? ಈ ಒಂದು ವಿಚಾರಕ್ಕೆ ಮತ್ತೆ ಸುದ್ದಿಯಾದ ಸ್ಯಾಮ್​!

    ಆಮೀರ್ ಜತೆ ಅನುಷ್ಕಾ?; ಚಾಂಪಿಯನ್ಸ್ ರಿಮೇಕ್​ನಲ್ಲಿ ನಟಿಸುವ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts