More

    Tokyo Olympic 2020: ಕಾಂಡೋಮ್​ ಬಳಸಿ ಪದಕ ಗೆದ್ದೆ ಎಂದ ಒಲಿಂಪಿಕ್ಸ್​ ಸ್ಪರ್ಧಿ! ಹೀಗಿದೆ ಆಕೆ ಕೊಟ್ಟ ವಿವರಣೆ

    ಟೋಕಿಯೋ: ಆಸ್ಟ್ರೇಲಿಯಾದ ಕ್ಯಾನೋಯಿಸ್ಟ್ ಜೆಸ್ಸಿಕಾ ಫಾಕ್ಸ್ ಅವರು​ ಟೋಕಿಯೋ ಒಲಿಂಪಿಕ್ಸ್​ನ ಕಯಾಕ್ (ತೊಗಲ ದೋಣಿ) ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಕೆ-1 ಈವೆಂಟ್​ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಸಮಯ ಮಿತಿಯ ದಂಡದಿಂದಾಗಿ ಚಿನ್ನದ ಪದಕವನ್ನು ಜೆಸ್ಸಿಕಾ ಮಿಸ್​ ಮಾಡಿಕೊಂಡರು.

    ಮೂರನೇ ಸ್ಥಾನ ಅಲಂಕರಿಸಿದ ಜಸ್ಸಿಕಾಗೆ ಕಂಚಿನ ಪದಕ ಒಲಿದು ಬಂದಿರುವುದಕ್ಕೆ ಖುಷಿ ಇದೆ. ಇನ್ನು ಆಕೆಯ ಗೆಲುವಿನಲ್ಲಿ ಕಾಂಡೋಮ್​ ಮಹತ್ವದ ಪಾತ್ರ ವಹಿಸಿತು ಎಂದು ಜಸ್ಸಿಕಾ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಒಲಿಂಪಿಕ್ಸ್​ ಗ್ರಾಮದಲ್ಲಿ ಸ್ಪರ್ಧಿಗಳಿಗೆ ನೀಡುವ ಕಾಂಡೋಮ್ ಜಸ್ಸಿಕಾಳಿಗೆ ಸರಿಯಾದ ಸಮಯದಲ್ಲಿ ಉಪಯೋಗಕ್ಕೆ ಬಂದಿದೆ.

    ಸ್ಪರ್ಧೆಯಲ್ಲಿ ಆಕೆಯ ಮುರಿದು ಹೋದ ಕಯಾಕ್​ ಅನ್ನು ಕಾಂಡೋಮ್​ನಿಂದಲೇ ಜಸ್ಸಿಕಾ ಸರಿಮಾಡಿಕೊಂಡು ಸ್ಪರ್ಧೆ ಮುಂದುವರಿಸಿದರು. ಅವಳ ಈ ತಂತ್ರವೂ ಎಲ್ಲರ ಹುಬ್ಬೇರಿಸಿದರೂ, ಕಯಾಕ್‌ನಲ್ಲಿನ ಎರಡು ಪೋಲ್ ಸ್ಟ್ರೈಕ್‌ಗಳಿಂದ ಜಸ್ಸಿಕಾ ನಾಲ್ಕು ಸೆಕೆಂಡ್ ದಂಡ ತೆರಬೇಕಾಯಿತು. ಇದರಿಂದ ಜರ್ಮನಿಯ ರಿಕಾರ್ಡಾ ಫಂಕ್​ಗೆ ಅನುಕೂಲವಾಯಿತು. ಒಂದು ವೇಳೆ ಕಾಂಡೋಮ್​ ಇಲ್ಲದಿದ್ದರೆ ಯಾವ ಪದಕವೂ ಸಿಗುತ್ತಿರಲಿಲ್ಲವೇನೋ?

    ಅಂತಿಮವಾಗಿ ಜೆಸ್ಸಿಕಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 2016ರಲ್ಲಿ ರಿಯೊ ಡಿ ಜನೈರೊದಲ್ಲಿಯೂ ಜಸ್ಸಿಕಾ ಕಂಚಿನ ಪದಕ ಗೆದ್ದಿದ್ದರು ಮತ್ತು ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಗೆಲುವಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜೆಸ್ಸಿಕಾ, ಕಯಾಕ್ ರಿಪೇರಿಗಾಗಿ ಕಾಂಡೋಮ್​ಗಳನ್ನು ಬಳಸಬಹುದೆಂದು ನಿಮಗೆ ತಿಳಿದಿಲ್ಲ, ಬೇಕಿದ್ದರೆ ಪಂದ್ಯ​ ಕಟ್ಟಿ ಎಂದಿದ್ದಾರೆ. ಕಾಂಡೋಮ್​ ಹೇಗೆ ಬಳಸಿದ ಎಂಬ ವಿಡಿಯೋ ವಿವರಣೆಯನ್ನು ಸಹ ಪೋಸ್ಟ್​ ಮಾಡಿದ್ದಾರೆ.

    ಆದರೆ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗುವ ಮೂಲಕ ಮೊದಲ ಮಹಿಳಾ ಕ್ಯಾನೋ ಸ್ಲಾಲೋಮ್ ಚಾಂಪಿಯನ್ ಹೆಸರಿಗೆ ಪಾತ್ರರಾಗಿರುವ ಜೆಸ್ಸಿಕಾ, ಚಿನ್ನವನ್ನು ಕಳೆದುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಯುರೋಪ್​ನ ಸ್ಯಾನ್ ಮರಿನೋ ಈಗ ಒಲಿಂಪಿಕ್ಸ್ ಪದಕ ಗೆದ್ದ ಅತಿ ಸಣ್ಣ ದೇಶ!

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಂದು ಯಾರ ಮೇಲಿದೆ ಪದಕ ನಿರೀಕ್ಷೆ?

    ಇಂದಿನಿಂದ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಸ್ಪರ್ಧೆ, ಯಾರಾಗ್ತಾರೆ ಅತಿವೇಗದ ಓಟಗಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts