More

  ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ರೂ. ಮೌಲ್ಯದ ಚಿನ್ನದ ಕೈ ಉಡುಗೊರೆ ನೀಡಿ ಷರತ್ತು ಹಾಕಿದ ಭಕ್ತ!

  ತಿರುಮಲ: ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವರು ಎಂದೇ ಪ್ರಸಿದ್ಧಿಗಳಿಸಿರುವ ತಿರುಪತಿ ತಿಮ್ಮಪ್ಪನ ಬಳಿ ಭಾರಿ ಪ್ರಮಾಣದ ಬಂಗಾರದ ಸಂಗ್ರಹವಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ರಾಜಕೀಯ ನಾಯಕರಿಯಿಂದಿಡಿದು ಅನೇಕ ಗಣ್ಯರು ತಿಮ್ಮಪ್ಪನಿಗೆ ಉಡುಗೊರೆಯಾಗಿ ಚಿನ್ನದ ಸುರಿಮಳೆಗೈಯುವುದು ಆಗಾಗ ನಡೆಯುತ್ತಲೇ ಇರುತ್ತದೆ.

  ತಾಜಾ ಬೆಳವಣಿಗೆ ಏನೆಂದರೆ, ಭಕ್ತರೊಬ್ಬರು ಇಂದು (ಡಿ.11) ವೆಂಕಟೇಶ್ವರನಿಗೆ ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಚಿನ್ನವನ್ನು ದಾನ ಮಾಡಿರುವುದು ಭಾರೀ ಸುದ್ದಿಯಾಗಿದೆ.

  ವಜ್ರ ಮತ್ತು ಮಾಣಿಕ್ಯಗಳಿಂದ ಕೂಡಿದ 5.3 ಕೆ.ಜಿ. ತೂಕದ ಚಿನ್ನದ ಕೈಗಳನ್ನು ತಿಮ್ಮಪ್ಪನಿಗೆ ಭಕ್ತರೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ. ಚಿನ್ನದ ಕೈಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್​ (ಟಿಟಿಡಿ)ನ ಅಧಿಕಾರಿ ಧರ್ಮಾ ರೆಡ್ಡಿ ಅವರ ಕೈಗೆ ಇಂದು ಹಸ್ತಾಂತರಿಸಲಾಗಿದೆ.

  ಆದರೆ, ಚಿನ್ನದ ಕೈಗಳನ್ನು ದಾನ ಮಾಡಿದ ಭಕ್ತ ಯಾರೆಂಬುದನ್ನು ಗೌಪ್ಯವಾಗಿ ಇಡುವಂತೆ ಷರತ್ತೊಂದನ್ನು ಹಾಕಿದ್ದಾರೆ. ತಮ್ಮ ಹೆಸರನ್ನು ಬಹಿರಂಗಪಡಿಸದಂತೆ ಟಿಟಿಡಿ ಬಳಿ ಕೇಳಿಕೊಂಡಿರುವ ಹಿನ್ನೆಲೆಯಲ್ಲಿ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ. (ಏಜೆನ್ಸೀಸ್​)

  ಹುತಾತ್ಮ ಸಾಯಿತೇಜ ಸಾಮಾನ್ಯ ಯೋಧರಲ್ಲ: ಮಾಜಿ ಸೇನಾಧಿಕಾರಿ ಹೇಳಿದ್ದನ್ನು ಕೇಳಿದ್ರೆ ಮೈನವಿರೇಳುತ್ತೆ

  ಕೆಲವು ದಿನಗಳಿಂದ ಬದಲಾದ ಗಂಡನ ನಡವಳಿಕೆ: ಬೆನ್ನತ್ತಿ ಹೋದ ಪತ್ನಿಗೆ ಕಾದಿತ್ತು ಶಾಕ್​!

  ಶಿಕ್ಷಕ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ 15 ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರದ ನಿರ್ಧಾರ

  See also  ಕಸ್ಟಮ್ಸ್​ ಅಧಿಕಾರಿಗಳಿಂದ 3.756 ಕೆಜಿ ಚಿನ್ನ, 59 ಸಾವಿರ ವಿದೇಶಿ ಬ್ರ್ಯಾಂಡ್​ ಸಿಗರೇಟ್​ ವಶ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts