More

    ಬೆದರಿಕೆ ಕರೆ: ದಿ ಕಾಶ್ಮೀರ್​ ಫೈಲ್ಸ್​ ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿಗೆ ‘ವೈ’ ಶ್ರೇಣಿಯ ಭದ್ರತೆ

    ನವದೆಹಲಿ: ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ “ದಿ ಕಾಶ್ಮೀರ್​ ಫೈಲ್ಸ್​” ಚಿತ್ರದ ನಿರ್ದೇಶಕ ವಿವೇಕ್​ ರಂಜನ್​ ಅಗ್ನಿಹೋತ್ರಿ ಅವರಿಗೆ ಕೇಂದ್ರ ಸರ್ಕಾರ ‘ವೈ’ ಶ್ರೇಣಿಯ ಭದ್ರತೆಯನ್ನು ಒದಗಿಸಿದೆ. ನಿರ್ದೇಶಕರು ಎಲ್ಲೆ ಹೋದರು ಅವರಿಗೆ ಸಿಆರ್​ಪಿಎಫ್​ ಭದ್ರತೆ ಇರಲಿದೆ.

    ದಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದೆ. 1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಕಥೆಯನ್ನು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಆಧರಿಸಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆಗಳು ಭಾರತದಲ್ಲಿ ನಡೆಯುತ್ತಿದೆ.

    ಚಿತ್ರವು ಬಿಡುಗಡೆಯಾದ ದಿನದಿಂದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ‘ವೈ’ ಶ್ರೇಣಿಯ ಭದ್ರತೆಯನ್ನು ಅವರಿಗೆ ಒದಗಿಸಲಾಗಿದೆ. ಇಬ್ಬರು ಕಮ್ಯಾಂಡೋಗಳು ಮತ್ತು ಪೊಲೀಸ್​ ಸಿಬ್ಬಂದಿ ಸೇರಿದಂತೆ ಒಟ್ಟು 8 ಭದ್ರತಾ ಸಿಬ್ಬಂದಿ ನಿರ್ದೇಶಕರ ರಕ್ಷಣೆಗೆ ಇರಲಿದ್ದಾರೆ.

    ಕಾಶ್ಮೀರ್​ ಫೈಲ್ಸ್​ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕರ್ನಾಟಕ ಮಾತ್ರವಲ್ಲದೆ ಗುಜರಾತ್, ಹರಿಯಾಣ, ಮಧ್ಯಪ್ರದೇಶದ ರಾಜ್ಯಗಳಲ್ಲೂ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರಧಾನಿ ಮೋದಿ ಅವರೂ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ, ದೇಶದೆಲ್ಲಡೆ ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವ ”ದಿ ಕಾಶ್ಮೀರ್​ ಫೈಲ್ಸ್​” ಸಿನಿಮಾವನ್ನು ಕರ್ನಾಟಕದ ಸಚಿವರು, ಶಾಸಕರು ಕೂಡ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್​)

    ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ಸಜ್ಜಾದ ನಟಿ ನಿಕ್ಕಿ ಗಲ್ರಾನಿ

    ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ, ಎಲ್ಲ ಹಿಂದೂಗಳೂ ಒಳ್ಳೆಯವರಲ್ಲ: ಸಚಿವ ಸೋಮಣ್ಣ

    ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಬರೆದ ಜೇಮ್ಸ್​: ಮೊದಲ ದಿನವೇ ದಾಖಲೆ ಗಳಿಕೆ, KGF​ ರೆಕಾರ್ಡ್​ ಬ್ರೇಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts