More

    ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ, ಎಲ್ಲ ಹಿಂದೂಗಳೂ ಒಳ್ಳೆಯವರಲ್ಲ: ಸಚಿವ ಸೋಮಣ್ಣ

    ಚಾಮರಾಜನಗರ: ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ, ಎಲ್ಲ ಹಿಂದೂಗಳೂ ಒಳ್ಳೆಯವರಲ್ಲ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಕೊಳ್ಳೇಗಾಲದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸೋಮಣ್ಣ, ಮುಚ್ಚಿ ಹೋಗಿರುವ ಇತಿಹಾಸವನ್ನು ಜನರಿಗೆ ತಿಳಿಸಿಕೊಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯಬಾರದು ಎಂಬ ದೃಷ್ಟಿಯಿಂದ ಈ ಚಿತ್ರ ತಯಾರಾಗಿದೆ. ವಂಶ ರಾಜಕಾರಣ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ನನ್ನ ಮಗನಿಗೆ ಅದೃಷ್ಟ ಇದ್ರೆ ಶಾಸಕನಾಗುತ್ತಾನೆ ಎಂದರು.

    ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಪತ್ರಿಕ್ರಿಯಿಸಿದ ಸೋಮಣ್ಣ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಪಠ್ಯ ಪುಸ್ತಕ ರಚನೆಗೆ ಸಮಿತಿಯಿದೆ. ಸಮಿತಿಯವರು ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ತಾರೆ. ಮುಂದಿನ ಪೀಳಿಗೆಗೆ ಏನು ತಿಳಿಸಬೇಕು ಎಂಬುದರ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತೆ ಎಂದರು.

    ಹೃದಯಾಘಾತ: ಮುಧೋಳ ತಹಸೀಲ್ದಾರ್ ನಿಧನ

    ಒಳ್ಳೇದಾಗ್ಲಿ ನನ್​​ ಕಂದನಿಗೆ… ಅಪ್ಪು‌ ಸಾವಿನ ಸುದ್ದಿ ಗೊತ್ತಿಲ್ದೆ ಬರ್ತ​ಡೇ, ಜೇಮ್ಸ್‌ಗೆ ಶುಭಕೋರಿದ‌ ಸೋದರತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts