More

    ಚುನಾವಣಾ ಪ್ರಚಾರದ ನಡುವೆಯೇ ಹೃದಯಾಘಾತದಿಂದ ಡಿಎಂಕೆ ಅಭ್ಯರ್ಥಿ ದುರಂತ ಸಾವು

    ಚೆನ್ನೈ: ನಗರ ಸ್ಥಳೀಯ ಚುನಾವಣೆಗೆ ತಮಿಳುನಾಡಿನಲ್ಲಿ ವೇದಿಕೆ ಸಿದ್ಧವಾಗಿದೆ. ಫೆ. 19ರಂದು ಚುನಾವಣೆ ನಡೆಯಲಿದೆ. ಅನೇಕ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಮತ ಬೇಟೆಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದು, ಇದೇ ಸಂದರ್ಭದಲ್ಲಿ ದುರಂತ ಘಟನೆಯೊಂದು ನಡೆದಿದೆ.

    ಡಿ.ಎಂ. ಅನುಸೂಯ ಎಂಬುವರು ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ನಿನ್ನೆ ಪ್ರಚಾರದ ಸಮಯದಲ್ಲಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದು, ಪಕ್ಷದ ನಾಯಕರಿಗೆ ಆಘಾತವಾಗಿದೆ.

    ಅನುಸೂಯ ಅವರು ಅಯ್ಯಂಪೆಟ್ಟೈನ 9ನೇ ವಾರ್ಡಿನ ಡಿಎಂಕೆ ಅಭ್ಯರ್ಥಿಯಾಗಿದ್ದರು. ಗುರುವಾರ ತಂಜಾವೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದರು. ಭರ್ಜರಿ ಪ್ರಚಾರದ ನಡುವೆಯೇ ಅನುಸೂಯ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಸಾವಿನ ಸುದ್ದಿ ತಿಳಿದು ಡಿಎಂಕೆ ನಾಯಕರು ಆಘಾತಕ್ಕೆ ಒಳಗಾಗಿದ್ದು, ಅನುಸೂಯ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಫೆ. 19ಕ್ಕೆ ನಗರ ಸ್ಥಳೀಯ ಚುನಾವಣೆ ನಡೆಯಲಿದ್ದು, ಫೆ. 22ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಮದುವೆ ಆಗುವಷ್ಟು ದೊಡ್ಡವಳಲ್ಲ ನಾನಿನ್ನೂ ಚಿಕ್ಕವಳು ಅಂದ್ರು ರಶ್ಮಿಕಾ ಮಂದಣ್ಣ..!

    ಅರ್ಧ ಹೆಲ್ಮೆಟ್ ಜೀವಕ್ಕೆ ಕುತ್ತು: ಶೇ.44 ಬೈಕ್ ಸವಾರರಿಂದ ಪೂರ್ಣ ಶಿರಸ್ತ್ರಾಣ ಬಳಕೆ

    ಇನ್ನೂ ಪರಿಹಾರ ಕಾಣದ ಹಿಜಾಬ್ ವಿವಾದ: ಹೈಕೋರ್ಟಲ್ಲಿ ಇಂದು ಸರ್ಕಾರದ ಪ್ರತಿವಾದ

    ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ಕಡಿತಗೊಳಿಸದಿರಲು ಲಂಚ: 5 ಲಕ್ಷ ಸ್ವೀಕರಿಸುವಾಗ ಎಸಿಬಿ ಬಲೆಗೆ ಬೆಸ್ಕಾಂ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts